ಬೆಳ್ತಂಗಡಿ: ನಮ್ಮ ಸಂಜೀವಿನಿ ಬೆಳ್ತಂಗಡಿ ಇದರ ತುರ್ತು ಸ್ಪಂದನ ಯೋಜನೆ ಯ ಅಡಿಯಲ್ಲಿ ಸಂಸ್ಥೆಯ ಸಂಜೀವಿನಿಗಳ ಸಮ್ಮುಖದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರ ಗಾಯಗೊಂಡ ತೋಟತ್ತಾಡಿಯ ಗಣೇಶ್ ಅವರಿಗೆ ವ್ಹೀಲ್ ಚೇರ್ ನ್ನು ವಿತರಿಸಲಾಯಿತು.
ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಪಂಚಮಿಯಾರು ಮನೆಯ ಗಣೇಶ್ ಕೂಲಿ ಕಾರ್ಮಿಕರಾಗಿದ್ದು, ಇವರಿಗೆ ಕೆಲಸ ಮಾಡುವ ಸಂದರ್ಭದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರ ಗಾಯಗೊಂಡು ಅವರ ಬಲಗೈ ಹಾಗೂ ಬಲಗಾಲನ್ನೂ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದರು. ಕಾಲಿನ ಪಾದಕ್ಕೆ ರಕ್ತ ಸಂಚಾರ ಸ್ಥಗಿತಗೊಂಡಿದ್ದು ಎಲ್ಲಾ ನರಗಳೂ ನಿಷ್ಕ್ರಿಯಗೊಂಡಿತ್ತು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ದರಿಂದ ಸ್ವಲ್ಪ ಮಟ್ಟಿಗೆ ಗುಣಮುಖರಾಗಿ ಮನೆಯಲ್ಲೇ ಬೆಡ್ ರೆಸ್ಟ್ ನಲ್ಲಿ ಇದ್ದಾರೆ.
ಇವರು ತೀರಾ ಬಡತನ ಕುಟುಂಬದವರು, ಹೆಂಡತಿ ಬೀಡಿ ಕಟ್ಟಿ ತಮ್ಮ 11 ತಿಂಗಳ ಪುಟ್ಟ ಕಂದಮ್ಮನ ಜೊತೆ ಜೀವನ ಸಾಗಿಸುತ್ತಿದ್ದಾರೆ. ಇವರ ಹಾಸ್ಪಿಟಲ್ ಖರ್ಚು ಸುಮಾರು 7 ರಿಂದ 8 ಲಕ್ಷದವರೆಗೆ ಆಗಿದ್ದು,ಇವರಿಗೆ ಹಲವಾರು ಸಂಘ ಸಂಸ್ಥೆಗಳು ಸಹಾಯದ ಹಸ್ತವನ್ನು ಚಾಚಿದೆ.
ಇದರ ಮಾಹಿತಿಯನ್ನು ಪಡೆದ ನಮ್ಮ ಸಂಜೀವಿನಿ ಬೆಳ್ತಂಗಡಿ ಸಂಸ್ಥೆಯು ಗಣೇಶ್ ಅವರಿಗೆ ವೀಲ್ ಚೇರ್ ನ ವ್ಯವಸ್ಥೆಯನ್ನು ಮಾಡಿದರು.