ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮಹಾಮಾರಿಯ ಓಟ ತೀವ್ರಗತಿಯಲ್ಲಿ ಸಾಗುತ್ತಿದ್ದು ರಾಜ್ಯದಲ್ಲಿ ಒಟ್ಟು 50ಸಾವಿರ ದಾಟಿದ ಸೋಂಕಿತರ ಸಂಖ್ಯೆ, ಮಹಾಮಾರಿ ದೇಶದಲ್ಲಿ 3ನೇ ಸ್ಥಾನಕ್ಕೆ ರಾಜ್ಯ ತಲುಪಿದೆ.
ದಿನೇದಿನೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಇಂದು 4169ಸೋಂಕಿತರು ಪತ್ತೆಯಾಗಿದ್ದು ಕರುನಾಡಿಗರನ್ನು ಮತ್ತೆ ಕಂಗೆಡಿಸುವಂತೆ ಮಾಡಿದೆ.
ರಾಜ್ಯದಲ್ಲಿಂದು 4169 ಸೋಂಕಿತರು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 51422 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಮರಣ ಪ್ರಮಾಣವು ಏರಿಕೆ ಕಾಣುತ್ತಿದ್ದು ಇಂದು ಕೂಡ ಮಹಾಮಾರಿಗೆ 104 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 1032 ಕ್ಕೆ ಏರಿಕೆಯಾಗಿದೆ.
ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಅತೀ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದು ಇಂದು ಸಿಲಿಕಾನ್ ಸಿಟಿಯಲ್ಲಿ2344 ಸೋಂಕಿತರು ಪತ್ತೆಯಾಗಿದ್ದು 70ಮಂದಿ ಇಂದೊಂದೇ ದಿನ ಬಲಿಯಾಗಿದ್ದಾರೆ
ಕಡಲತಡಿ ಮಂಗಳೂರಿನಲ್ಲೂ ಮಹಾಮಾರಿ ಕೊರೋನಾ ತನ್ನ ಆರ್ಭಟವನ್ನು ಮುಂದುವರೆಸಿದ್ದು ಇಂದು 238ಮಂದಿಗೆ ವೈರಸ್ ಸೋಂಕು ದೃಢಪಟ್ಟಿದೆ.
ಬೆಂಗಳೂರು,ಮಂಗಳೂರು, ರಾಯಚೂರು ಸೇರಿದಂತೆ ರಾಜ್ಯದ 30 ಜಿಲ್ಲೆಯಲ್ಲೂ ಇಂದು ಮಹಾಮಾರಿ ತನ್ನ ಅಟಾಟೋಪವನ್ನು ಮುಂದುವರೆಸಿದ್ದು ವೈದ್ಯರು ,ನರ್ಸ್, ಲಾಬ್ ಟೆಕ್ನಿಷನ್ ಗಳನ್ನು ಬಿಡದೇ ಕಾಡುತ್ತಿರುವ ಮಹಾಮಾರಿ ವೈರಸ್ ಗೆ ಕರುನಾಡಿನ ಜನ ಶಿರಬಾಗಿ ಮನೆಯಲ್ಲಿಯೇ ಇರುವ ಅನಿವಾರ್ಯತೆ ಇದೆ