Ujire: ಬೆಳಾಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ ಡಿ. 10 ರಂದು ನಡೆಯಿತು.

ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ಬಹುಮಾನ ವಿತರಿಸಿ ಮಾತನಾಡಿದ ಮುಖ್ಯ ಅತಿಥಿ, ಶ್ರೀ ಆರಿಕೋಡಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೊಡಿ ” ಶಿಸ್ತು ಸಂಸ್ಕಾರಯುತ ಶಿಕ್ಷಣ ಪಡೆದಾಗ ಜವಾಬ್ದಾರಿಯುತ ನಾಗರಿಕನ ಸೃಷ್ಟಿಯಾಗುತ್ತದೆ ಇಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರವನ್ನ ಇತ್ತು ಉತ್ತಮ ಪ್ರಜೆಗಳನ್ನು ಸೃಷ್ಟಿಸುವ ಉತ್ತಮ ಶಿಕ್ಷಕ ಬಳಗ ಇಲ್ಲಿದೆ” ಎಂದರು.

ಅತಿಥಿಗಳಾಗಿ ಆಗಮಿಸಿದ ನಿವೃತ್ತ ಮುಖ್ಯೋಪಾಧ್ಯಾಯರಾದ ಸುರೇಶ್ ಆಚಾರ್ಯ ಮಾತನಾಡಿ “ ಸಂಸ್ಥೆಯಲ್ಲಿ ಲಭ್ಯವಿರುವ ಉತ್ತಮ ಸಂಪನ್ಮೂಲಗಳನ್ನು ಅವಕಾಶವನ್ನಾಗಿ ಬಳಸಿಕೊಂಡು ಉತ್ತಮ ಸಾಧನೆಯನ್ನು ಮಾಡಲು ಈ ಶಾಲೆ ಅನುಕೂಲಕರವಾಗಿದೆ.”ಎಂದರು

ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಕುರ್ಕಿಲ, ಬೆಳಾಲು ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರಾದ ಲಕ್ಷ್ಮಣಗೌಡ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಧರ ಓಡಿಪ್ರೊಟ್ಟು ಬಹುಮಾನ ವಿತರಿಸಿ, ಶುಭ ಹಾರೈಸಿದರು.

ಶಾಲಾ ನಾಯಕ ಮೋಹನ್ ಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ಜಯರಾಮ ಮಯ್ಯ ಪ್ರಸ್ತಾವಿಸಿ, ಸ್ವಾಗತಿಸಿದರು. ಶಿಕ್ಷಕರಾದ ಗಣೇಶ್ವರ್ ಹಾಗೂ ಕೃಷ್ಣಾನಂದ ಕ್ರಮವಾಗಿ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶಿಕ್ಷಕರಾದ ಕಿರಣ್ ವಂದಿಸಿ, ಕೋಕಿಲ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ

ಬಳಿಕ ಬೆಳಾಲು ಲಕ್ಷ್ಮಣಗೌಡ ಅವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ‘ಸ್ಯಮಂತಕ ಮಣಿ’ ಯಕ್ಷಗಾನ ಬಯಲಾಟ ನಡೆಯಿತು.

ಬಳಿಕ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿ ತಮ್ಮ ಪ್ರತಿಭೆ ಪ್ರಚುರಪಡಿಸಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಎಜುಕೇಶನಲ್ ಸೊಸೈಟಿಯ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಧನ್ಯ ಕುಮಾರ್ ಎಂ ಅವರು ಶಾಲೆಯ ವಾರ್ಷಿಕ ಸಂಚಿಕೆ ವಿದ್ಯಾರ್ಥಿ ಹಸ್ತಪ್ರತಿ ‘ನವ್ಯ ಜ್ಯೋತಿ’ ಬಿಡುಗಡೆಗೊಳಿಸಿ ಶಾಲೆಯ ವಿಶೇಷ ಪ್ರತಿಭೆಗಳನ್ನು ಪುರಸ್ಕರಿಸಿದರು.

ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕೃತರಾದ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಾನಂದ ಇವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು.

ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಾಧಕರನ್ನು , ಪ್ರಸಕ್ತ ವರ್ಷ ರಾಜ್ಯಮಟ್ಟದಲ್ಲಿ ‘ಕಣಾದ’ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ನೇತ್ರಾವತಿ, ಆಶಾ, ಅನ್ವಿಕ , ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಹುಮಾನಗಳಿಸಿದ ಜಾಹ್ನವಿ, ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಭಾಗವಹಿಸಿದ ನೀರಜ್, ಸಾತ್ವಿಕ್ ಹಾಗೂ ಜಿಲ್ಲಾ ಮಟ್ಟದ ಪ್ರಾಚ್ಯ ಪ್ರಜ್ಞೆ ಸ್ಪರ್ಧೆಯಲ್ಲಿ ಭಾಗವಹಿಸಿದ ಸೃಜನ್ಯ, ಆಯುಷತ್ ಸಂಶಿಯಾ, ಅಂಕಿತ ಇವರುಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ನಿವೃತ್ತ ಮುಖ್ಯೋಪಾಧ್ಯಾಯರಾದ ಸೋಮಶೇಖರ ಶೆಟ್ಟಿ ಎಸ್ ಡಿ ಎಮ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಸಂತೋಷ್ ಸಲ್ದಾನ ಎಸ್. ಡಿ. ಎಮ್ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕ ವಿದ್ಯಾಕಿರಣ್, ಪೆರಿಂಜೆಯ ಎಸ್ ಡಿ ಎಮ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುಕುಂದ ಚಂದ್ರ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ದಯಾನಂದ ಪಿ ಬೆಳಾಲು ಸಿಂಧೂರ ಸ್ಪೋರ್ಟ್ಸ್ ಕ್ಲಬ್ ಬೆಳಾಲು ಇದರ ಅಧ್ಯಕ್ಷೆ ನಿಶಾ ಬನಂದೂರು ಉಪಸ್ಥಿತರಿದ್ದು ಪ್ರತಿಭೆಗಳನ್ನು ಗೌರವಿಸಿದರು.

Spread the love
  • Related Posts

    ನೋಟಿಸ್ ಕೊಡದೆ ಬಂಧನವೇ? ಪೊಲೀಸರಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ | BNSS 35 ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ

    ಬೆಂಗಳೂರು: ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮತ್ತು ಕಾನೂನು ಬಾಹಿರವಾಗಿ ಬಂಧನಗಳನ್ನು ನಡೆಸುವ ಪೊಲೀಸ್ ಇಲಾಖೆಯ ಕ್ರಮದ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯವು (High court of Karnataka) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ಐತಿಹಾಸಿಕ ತೀರ್ಪು ನೀಡಿದೆ. ಹೈಕೋರ್ಟ್‌ನ ಈ…

    Spread the love

    ಸೌಜನ್ಯ ಪ್ರಕರಣ ಮರು ತನಿಖೆಗೆ ಎಸ್‌ಐಟಿ ರಚನೆ ಎನ್. ಶಶಿಕುಮಾರ್ ಐಪಿಎಸ್ ನೇತೃತ್ವದಲ್ಲಿ ಐವರು ಸದಸ್ಯರ ತಂಡ

    ಬೆಂಗಳೂರು, ಸೆ.24: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿರುವ Special Leave Petition (Crl.) No.5763 of 2026ರ ವಿಚಾರಣೆಯ ಹಿನ್ನೆಲೆಯಲ್ಲಿ, ಪ್ರಕರಣದ ಮರುತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಆದೇಶ ಹೊರಡಿಸಿದೆ. ಎಸ್‌ಐಟಿ ತಂಡದ…

    Spread the love

    You Missed

    “ಕಸ್ತೂರಿರಂಗನ್ ಆತಂಕ ನಿವಾರಣೆಗೆ ಅರಣ್ಯ–ಕಂದಾಯ ಗ್ರಾಮ ಪ್ರತ್ಯೇಕಿಸಿ: ತುಳುನಾಡ್ ಒಕ್ಕೂಟದ ಸಂಸ್ಥಾಪಕ ಶೈಲೇಶ್ ಆರ್.ಜೆ. ಮನವಿ”

    • By admin
    • September 30, 2026
    • 3 views
    “ಕಸ್ತೂರಿರಂಗನ್ ಆತಂಕ ನಿವಾರಣೆಗೆ ಅರಣ್ಯ–ಕಂದಾಯ ಗ್ರಾಮ ಪ್ರತ್ಯೇಕಿಸಿ: ತುಳುನಾಡ್ ಒಕ್ಕೂಟದ ಸಂಸ್ಥಾಪಕ ಶೈಲೇಶ್ ಆರ್.ಜೆ. ಮನವಿ”

    ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ ಉದ್ಘಾಟನೆ, ಪ್ರತಿದಿನ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡುವುದರಿಂದ ಜೀವನ ಪಾವನವಾಗುತ್ತದೆ ಸುಬ್ರಹ್ಮಣ್ಯ ಶ್ರೀಗಳು

    • By admin
    • September 28, 2026
    • 9 views
    ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ ಉದ್ಘಾಟನೆ, ಪ್ರತಿದಿನ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡುವುದರಿಂದ ಜೀವನ ಪಾವನವಾಗುತ್ತದೆ ಸುಬ್ರಹ್ಮಣ್ಯ ಶ್ರೀಗಳು

    ಬ್ಯಾಂಕ್ ಮುಷ್ಕರ ಮುಂದೂಡಿಕೆ, ಎಂದಿನಂತೆ ಬ್ಯಾಂಕ್ ಸೇವೆಗೆ ಲಭ್ಯ

    • By admin
    • September 28, 2026
    • 9 views
    ಬ್ಯಾಂಕ್ ಮುಷ್ಕರ ಮುಂದೂಡಿಕೆ, ಎಂದಿನಂತೆ ಬ್ಯಾಂಕ್ ಸೇವೆಗೆ ಲಭ್ಯ

    ನೋಟಿಸ್ ಕೊಡದೆ ಬಂಧನವೇ? ಪೊಲೀಸರಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ | BNSS 35 ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ

    • By admin
    • September 27, 2026
    • 16 views
    ನೋಟಿಸ್ ಕೊಡದೆ ಬಂಧನವೇ? ಪೊಲೀಸರಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ | BNSS 35 ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ

    ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ರ‍್ಯಾಗಿಂಗ್: ಜೂನಿಯರ್ಸ್ ಬಟ್ಟೆ ಬಿಚ್ಚಿಸಿ ಬೆಲ್ಟ್‌ನಿಂದ ಹಲ್ಲೆ, 9 ಮಂದಿ ಸೀನಿಯರ್ಸ್ ವಿರುದ್ಧ ಎಫ್‌ಐಆರ್ ದಾಖಲು

    • By admin
    • September 25, 2026
    • 15 views
    ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ  ರ‍್ಯಾಗಿಂಗ್: ಜೂನಿಯರ್ಸ್ ಬಟ್ಟೆ ಬಿಚ್ಚಿಸಿ ಬೆಲ್ಟ್‌ನಿಂದ ಹಲ್ಲೆ, 9 ಮಂದಿ ಸೀನಿಯರ್ಸ್ ವಿರುದ್ಧ ಎಫ್‌ಐಆರ್ ದಾಖಲು

    1,000 ಚದರ ಮೀಟರ್‌ವರೆಗಿನ ನಿವೇಶನಗಳಿಗೆ ‘ಸಿಂಗಲ್ ಪ್ಲಾನ್’ ಅನುಮೋದನೆ: ಅಧಿಕಾರ ವಿಕೇಂದ್ರೀಕರಣಕ್ಕೆ ಸರ್ಕಾರದ ಮಹತ್ವದ ಆದೇಶ

    • By admin
    • September 25, 2026
    • 11 views
    1,000 ಚದರ ಮೀಟರ್‌ವರೆಗಿನ ನಿವೇಶನಗಳಿಗೆ ‘ಸಿಂಗಲ್ ಪ್ಲಾನ್’ ಅನುಮೋದನೆ: ಅಧಿಕಾರ ವಿಕೇಂದ್ರೀಕರಣಕ್ಕೆ ಸರ್ಕಾರದ ಮಹತ್ವದ ಆದೇಶ