ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಕಲೇಶಪುರ ಪಾಲಹಳ್ಳಿ ಕರಗೂರು ಕೂಡಿಗೆ ಶ್ರೀ ವಾಯುಪುತ್ರ ದೇವಾಲಯಕ್ಕೆ ಅನುದಾನ ಮಂಜೂರು

ಸಕಲೇಶಪುರ: ಸಕಲೇಶಪುರ ತಾಲೂಕಿನ ಕರಗೂರು ಕೂಡಿಗೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ” ಶ್ರೀ ವಾಯುಪುತ್ರ ದೇವಾಲಯಕ್ಕೆ ಶ್ರೀ ಕ್ಷೇತ್ರದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗಡೆಯವರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ರೂ 2,00,000/- ಲಕ್ಷ ರೂಗಳನ್ನು ಅನುದಾನ ಮಂಜೂರುಗೊಳಿಸಿದ್ದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಡಾ.ನವೀನ್ ಚಂದ್ರ ಶೆಟ್ಟಿ ಯವರು ಸಮಿತಿಯವರಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಎಲ್ಲಾ ದೇವಸ್ಥಾನಗಳಿಗೆ, ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಮಠ ಮಂದಿರಗಳಿಗೆ ಸಹಾಯ ಹಸ್ತ ನೀಡುವ ಮೂಲಕ ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರ, ಭಜನಾ ಮಂಡಳಿಗಳಿಗೆ ಕಟ್ಟಡ ರಚನೆ, ತರಬೇತಿ ಮತ್ತು ಸ್ವಚ್ಛತಾ ಕಾರ್ಯಕ್ರಮಗಳಿಗೆ ಸಹಾಯ ಮಾಡುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಈ ಪ್ರಯತ್ನಗಳು ಕರ್ನಾಟಕದ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸಹಾಯ ಮಾಡುತ್ತಿವೆ ಮದ್ಯವರ್ಜನ ಶಿಬಿರಗಳು, ವಾತ್ಸಲ್ಯ ಕಿಟ್ ವಿತರಣೆ, ವಾತ್ಸಲ್ಯ ಮನೆ ನಿರ್ಮಾಣ, ನಿರ್ಗತಿಕರಿಗೆ ಮಾಸಾಶನ, ಜ್ಞಾನದೀಪ ಶಿಕ್ಷಣ ಕಾರ್ಯಕ್ರಮಗಳು, ಕೆರೆ ಹೂಳೆತ್ತುವುದು, ಸರ್ಕಾರಿ ಶಾಲೆಗಳಿಗೆ ಅನುದಾನ ನೀಡುವಂತಹ ಹತ್ತು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದು ನಾವೆಲ್ಲರೂ ಈ ನಿಟ್ಟಿನಲ್ಲಿ ಸಮಾಜದ ಸ್ವಾಸ್ಥ್ಯ ನಿರ್ಮಾಣದಲ್ಲಿ ಪೂಜ್ಯರೊಂದಿಗೆ ಕೈ ಜೋಡಿಸಬೇಕು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಭಜನೆಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವಜನತೆಗೆ ಸಂಸ್ಕೃತಿ ಸಂಸ್ಕಾರದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕಟಿಬದ್ಧರಾಗಿ ಶ್ರಮಿಸಬೇಕು ಎಂದರು. ದೇವಸ್ಥಾನದ ನಿರ್ಮಾಣ ಕೆಲಸ ಬಹಳ ಪುಣ್ಯ ಕೆಲಸ ಇಂತಹ ಸ್ಥಳಗಳಲ್ಲಿ ನಿರಂತರವಾಗಿ ಧಾರ್ಮಿಕ ಆಚರಣೆಗಳು ಹಾಗೂ ಮಕ್ಕಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ, ಯೋಗ, ಧ್ಯಾನಗಳನ್ನು ಕಲಿಸಿಕೊಡುವ ಕೇಂದ್ರಗಳು ಹೆಚ್ಚಾಗಲಿ ಎಂದು ಶುಭ ಹಾರೈಸಿದರು

ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ರಾಜೇಶ.ಎಂ, ಸಮಿತಿಯ ಅಧ್ಯಕ್ಷರಾದ ಲೋಲಾಕ್ಷ ,ಮತ್ತು ಪದಾಧಿಕಾರಿಗಳು ಊರಿನ ಗಣ್ಯರು, ಒಕ್ಕೂಟ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಂಘದ ಸದಸ್ಯರು ಮತ್ತು ವಲಯದ ಮೇಲ್ವಿಚಾರಕರು,ಸೇವಾ ಪ್ರತಿನಿಧಿ ರವರು ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Spread the love
  • Related Posts

    Ujire: ಬೆಳಾಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ ಡಿ. 10 ರಂದು ನಡೆಯಿತು. ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ಬಹುಮಾನ ವಿತರಿಸಿ ಮಾತನಾಡಿದ ಮುಖ್ಯ ಅತಿಥಿ, ಶ್ರೀ ಆರಿಕೋಡಿ ಕ್ಷೇತ್ರದ ಧರ್ಮದರ್ಶಿಗಳಾದ…

    Spread the love

    ಗುಂಡ್ಯ ಶಿರಾಡಿ ಘಾಟ್ ನಲ್ಲಿ ಕಾರು ಬಸ್ ಅಫಘಾತ ಮೂವರು ಸಾವು

    ಬೆಳ್ತಂಗಡಿ: ಶಿರಾಡಿ ಘಾಟಿಯಲ್ಲಿ ಕಾರು ಹಾಗೂ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.ಕಾರು ಮತ್ತು ಬಸ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದು ಹೊಡೆತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನಿಬ್ಬರು…

    Spread the love

    You Missed

    ನವಜೀವನೋತ್ಸವದಲ್ಲಿ ವ್ಯಸನಮುಕ್ತ ಹಾಗೂ ಮೌಲ್ಯಯುತ ಜೀವನಕ್ಕೆ ಡಾ. ನವೀನ್ ಚಂದ್ರ ಶೆಟ್ಟಿ ಕರೆ

    • By admin
    • July 2, 2026
    • 0 views
    ನವಜೀವನೋತ್ಸವದಲ್ಲಿ ವ್ಯಸನಮುಕ್ತ ಹಾಗೂ ಮೌಲ್ಯಯುತ ಜೀವನಕ್ಕೆ ಡಾ. ನವೀನ್ ಚಂದ್ರ ಶೆಟ್ಟಿ ಕರೆ

    ದಕ್ಷಿಣ ಕನ್ನಡ ಹಾಲು ಒಕ್ಕೂಟದ, ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಮೊದಲ ರಾಸುವಿನ ಭ್ರೂಣ ವರ್ಗಾವಣೆ ಕರುವಿನ ಜನನ – ಪ್ರಥಮ ಪ್ರಯೋಗ ಯಶಸ್ವಿ

    • By admin
    • July 2, 2026
    • 18 views
    ದಕ್ಷಿಣ ಕನ್ನಡ ಹಾಲು ಒಕ್ಕೂಟದ, ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಮೊದಲ ರಾಸುವಿನ ಭ್ರೂಣ ವರ್ಗಾವಣೆ ಕರುವಿನ ಜನನ – ಪ್ರಥಮ ಪ್ರಯೋಗ ಯಶಸ್ವಿ
    • By admin
    • July 2, 2026
    • 5 views

    ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಕಲೇಶಪುರ ಪಾಲಹಳ್ಳಿ ಕರಗೂರು ಕೂಡಿಗೆ ಶ್ರೀ ವಾಯುಪುತ್ರ ದೇವಾಲಯಕ್ಕೆ ಅನುದಾನ ಮಂಜೂರು

    • By admin
    • July 2, 2026
    • 6 views

    ಗುಂಡ್ಯ ಶಿರಾಡಿ ಘಾಟ್ ನಲ್ಲಿ ಕಾರು ಬಸ್ ಅಫಘಾತ ಮೂವರು ಸಾವು

    • By admin
    • July 2, 2026
    • 6 views

    ಚನ್ನಗಿರಿ: ಆ್ಯಕ್ಸಲ್ ತುಂಡಾಗಿ ಸಾರಿಗೆ ಬಸ್‌ ಪಲ್ಟಿ, ಒರ್ವ ಸಾವು 20ಮಂದಿಯ ಸ್ಥಿತಿ ಗಂಭೀರ ಹಲವರಿಗೆ ಗಾಯ

    • By admin
    • July 2, 2026
    • 7 views