ಅರ್ಚಕರಿಗೆ 2 ತಿಂಗಳ ಆಹಾರ ಕಿಟ್ ವಿತರಣೆ : ರಾಜ್ಯ ಸರ್ಕಾರದಿಂದ ಸಿಹಿಸುದ್ದಿ

ಬೆಂಗಳೂರು : ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸೆಮಿ ಲಾಕ್ ಡೌನ್ ಘೋಷಿಸಲಾಗಿದ್ದು, ರಾಜ್ಯ ಸರ್ಕಾರವು ಅರ್ಚಕರಿಗೆ ಎರಡು ತಿಂಗಳ ತಸ್ತೀಕ್, ಆಹಾರ ಕಿಟ್ ಬಿಡುಗಡೆ ಮಾಡಿದೆ.

ಈ ಕುರಿತು ಮಾಹಿತಿ ನೀಡಿರುವ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅರ್ಚಕರಿಗೆ ಪ್ರಸಕ್ತ ಮೇ ಹಾಗೂ ಜೂನ್ ತಿಂಗಳ ತಸ್ತೀಕ್ ಬಿಡುಗಡೆ ಮಾಡಲಾಗಿದ್ದು, ಇದರಿಂದ ಸುಮಾರು 27 ಸಾವಿರ ಅರ್ಚಕರಿಗೆ ಮುಂಗಡ ತಸ್ತೀಕ್ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

READ ALSO

ಇನ್ನು ಸಿ ದರ್ಜೆಯ ದೇವಾಲಯದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅರ್ಚಕರಿಗೆ ಮತ್ತು ಸಿಬ್ಬಂದಿಗೆ, ಅನ್ನದಾಸೋಹ ನಡೆಸುವ ಎ ಮತ್ತು ಬಿ ದರ್ಜೆಯ ದೇವಾಲಯಗಳಲ್ಲಿ ಲಭ್ಯವಿರುವ ಅಕ್ಕಿ ಮತ್ತು ದವಸ ಧಾನ್ಯಗಳನ್ನು ಕಿಟ್ ರೂಪದಲ್ಲಿ ವಿತರಣೆ ಮಾಡುವಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶಿಸಿದೆ.