ಬೆಂಗಳೂರು ಗಲಭೆಯಲ್ಲಿ ಮೂವರ ಬಲಿ! 100ಕ್ಕೂ ಅಧಿಕ ಗಲಭೆಕೋರರ ಬಂಧನ! ಬೆಂಗಳೂರಿನ ಕೆಲವೆಡೆ ಕರ್ಫ್ಯೂ ಜಾರಿ

ಬೆಂಗಳೂರು: ಪುಲಕೇಶಿ ನಗರದ ಶಾಸಕ ಅಖಂಡ​ ಶ್ರೀನಿವಾಸ್​ ಅವರ ಮನೆ ಮೇಲೆ ಕಲ್ಲು ತೂರಾಟ,ಬೆಂಕಿ ಹಚ್ಚಿದ ಪ್ರಕರಣವು ಉದ್ವಿಘ್ನತೆಗೆ ತಿರುಗಿದ್ದು, ಹಿಂಸಾಚಾರಕ್ಕೆ ತಿರುಗಿದ ಈ ಘಟನೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ.

ಶಾಸಕರ ಸಂಬಂಧಿಯೋರ್ವ ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿರುವ ಆರೋಪಮಾಡಿ ಪುಂಡರ ತಂಡ ಪೂರ್ವ ನಿಯೋಜಿತ ಕೃತ್ಯನಡೆಸಿ ಸಿಕ್ಕ ಸಿಕ್ಕಲ್ಲಿ ಕಲ್ಲು ತೂರಾಟ ನಡೆಸಿ ಕೆಲವು ಮನೆಗಳಿಗೆ, ಸರಕಾರಿ ವಾಹನಗಳಿಗೆ, ಅಂಗಡಿಗಳಿಗೆ, ಪತ್ರಕರ್ತರ ವಾಹನಗಳ ಮೇಲೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ.

ಪತ್ರಕರ್ತರು, ಜನಪ್ರತಿನಿಧಿಗಳ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ ಪುಂಡರ ತಂಡ ಪೋಲೀಸರ ಮೇಲೂ ಹಲ್ಲೆ ನಡೆಸಿ ದಾಂದಲೆ ನಡೆಸಿದ್ದಾರೆ.

ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದಾನೆ ಎನ್ನಲಾದ ಆರೋಪಿ ನವೀನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ನವೀನ್‌ನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಘಟನೆ ಸಂಬಂಧ 147 ಆರೋಪಿಗಳನ್ನು ಬಂಧಿಸಲಾಗಿದ್ದು, ಕೆಲ ಸಂಘಟನೆಗೆ ಸೇರಿದವರೆಂದು ತಿಳಿದು ಬಂದಿದೆ. ಪೊಲೀಸರ ಹಾಗೂ ಉದ್ರಿಕ್ತ ಗಲಭೆಕೋರರ ನಡುವೆ ನಡೆದ ಚಕಮಕಿಯಲ್ಲಿ ಪೊಲೀಸ್​ ಫೈರಿಂಗ್​ ಮೂವರು ಬಲಿಯಾಗಿದ್ದಾರೆನ್ನಲಾಗಿದ್ದು, ಪೊಲೀಸರ ಗುಂಡೇಟು ತಿಂದು ಗಾಯಗೊಂಡಿರುವ ಕೆಲ ಆರೋಪಿಗಳು ಚಿಕಿತ್ಸೆ ಪಡೆಯದೆ ಎಸ್ಕೇಪ್ ಆಗಿದ್ದಾರೆ.

50ಕ್ಕೂ ಅಧಿಕ ಬೈಕ್, 06ಕಾರು, ಪೋಲೀಸ್ ವಾಹನವನ್ನು ಸುಟ್ಟು ಭಸ್ಮಗೊಳಿಸಿದ ಪುಂಡರು

ಇನ್ನು ಘಟನೆಯಲ್ಲಿ 80ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ. ಈ ಸಂಬಂಧ ಡಿ ಜೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ 120,307,195,148 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದೇವರ ಜೀವನಹಳ್ಳಿ ಮತ್ತು ಕೆ.ಜೆ.ಹಳ್ಳಿ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಿ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದ್ದು ಜನ ಜೀವನ ಅಸ್ಥವ್ಯಸ್ಥವಾಗಿದೆ.

Spread the love
  • Related Posts

    “ಶಾಂತಿಯ ಕಡೆ ಹೆಜ್ಜೆ: ಯುರೋಪಿಯನ್ ಯೂನಿಯನ್ ಕಡೆ ಇರಾನ್ ಕಣ್ಣೋಟ”

    ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯಲ್ಲಿ ಮಹತ್ವದ ತಿರುವು ಕಂಡುಬಂದಿದ್ದು, ಇರಾನ್ ಇದೀಗ ಯುದ್ಧ ಅಂತ್ಯಗೊಳಿಸಲು ಸನ್ನದ್ಧವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಶಾಂತಿ ಮಾತುಕತೆಗಾಗಿ ಇರಾನ್ ಯುರೋಪಿಯನ್ ಯೂನಿಯನ್ ನೆರವಿಗೆ ಮೊರೆಹೋಗಿರುವುದು ಜಾಗತಿಕ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇರಾನ್ ಅಧಿಕಾರಿಗಳು ಯುದ್ಧ…

    Spread the love

    ಬಸ್ ನಿಂದ ಬಿದ್ದು ಗಾಯಗೊಂಡ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ ಶಾಸಕ ಹರೀಶ್ ಪೂಂಜಾ

    ಬೆಳ್ತಂಗಡಿ: ತಾಲೂಕಿನ ರೇಷ್ಮೆರೋಡ್ ಬಳಿ ಚಲಿಸುತ್ತಿದ್ದ ಕೆ.ಎಸ್‌.ಆರ್.ಟಿ.ಸಿ ಬಸ್ಸಿನಿಂದ ಅಕಸ್ಮಿಕವಾಗಿ ಬಿದ್ದು ಗಾಯಗೊಂಡಿರುವ ವಿದ್ಯಾರ್ಥಿನಿಯರ ಆರೋಗ್ಯವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿ ಕುಟುಂಬ ಸದಸ್ಯರಿಗೆ ಹಾಗೂ ಗಾಯಳು ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದರು. Spread the love

    Spread the love

    You Missed

    “ಶಾಂತಿಯ ಕಡೆ ಹೆಜ್ಜೆ: ಯುರೋಪಿಯನ್ ಯೂನಿಯನ್ ಕಡೆ ಇರಾನ್ ಕಣ್ಣೋಟ”

    • By admin
    • April 1, 2026
    • 9 views
    “ಶಾಂತಿಯ ಕಡೆ ಹೆಜ್ಜೆ: ಯುರೋಪಿಯನ್ ಯೂನಿಯನ್ ಕಡೆ ಇರಾನ್ ಕಣ್ಣೋಟ”

    ಹೊಸ ಆರ್ಥಿಕ ವರ್ಷದ ಪ್ರಾರಂಭ, ಇಂದಿನಿಂದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ

    • By admin
    • April 1, 2026
    • 20 views
    ಹೊಸ ಆರ್ಥಿಕ ವರ್ಷದ ಪ್ರಾರಂಭ, ಇಂದಿನಿಂದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ

    ಬಸ್ ನಿಂದ ಬಿದ್ದು ಗಾಯಗೊಂಡ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ ಶಾಸಕ ಹರೀಶ್ ಪೂಂಜಾ

    • By admin
    • March 31, 2026
    • 167 views
    ಬಸ್ ನಿಂದ ಬಿದ್ದು ಗಾಯಗೊಂಡ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ ಶಾಸಕ ಹರೀಶ್ ಪೂಂಜಾ

    ವಿದ್ಯುತ್ ಶಾಕ್ ಮೂಲಕ ಕಾರ್ಮಿಕ ಆತ್ಮಹತ್ಯೆ – ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

    • By admin
    • March 31, 2026
    • 40 views
    ವಿದ್ಯುತ್ ಶಾಕ್ ಮೂಲಕ ಕಾರ್ಮಿಕ ಆತ್ಮಹತ್ಯೆ – ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

    ಹಾಸನದ ‘ರುಚಿ ಲೋಕ’: ನೂರಾರು ಕುಟುಂಬಗಳ ಬದುಕಿಗೆ ಬೆಳಕಾದ 76 ಮಳಿಗೆಗಳ ಫುಡ್ ಕೋರ್ಟ್

    • By admin
    • March 31, 2026
    • 54 views
    ಹಾಸನದ ‘ರುಚಿ ಲೋಕ’: ನೂರಾರು ಕುಟುಂಬಗಳ ಬದುಕಿಗೆ ಬೆಳಕಾದ 76 ಮಳಿಗೆಗಳ ಫುಡ್ ಕೋರ್ಟ್

    ಸರಕಾರಿ ಬಸ್ ನಿಂದ ಎಸೆಯಲ್ಪಟ್ಟ ವಿದ್ಯಾರ್ಥಿನಿಯರು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

    • By admin
    • March 31, 2026
    • 263 views
    ಸರಕಾರಿ ಬಸ್ ನಿಂದ ಎಸೆಯಲ್ಪಟ್ಟ ವಿದ್ಯಾರ್ಥಿನಿಯರು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು