ಮಂಗಳೂರು ಭ್ರಷ್ಟಾಚರ ನಿಗ್ರಹ ದಳದ ಇನ್ಸ್ ಪೆಕ್ಟರ್, ಬೆಂಗಳೂರು ಎಸ್.ಜೆ ಪಾರ್ಕ್ ಪೋಲಿಸ್ ಠಾಣೆಗೆ ವರ್ಗಾವಣೆ

ಮಂಗಳೂರು: ರಾಜ್ಯದ 81 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಭ್ರಷ್ಟಾಚರ ನಿಗ್ರಹ ದಳದಲ್ಲಿ ಇನ್ಸ್ ಪೆಕ್ಟರ್ ಆಗಿ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಗಿಶ್ ಕುಮಾರ್ ರನ್ನು ಬೆಂಗಳೂರು ಎಸ್.ಜೆ ಪಾರ್ಕ್ ಪೋಲಿಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

READ ALSO

ಮಡಿಕೇರಿ ಮೂಲದ ಯೋಗಿಶ್ ಕುಮಾರ್, ಬೆಳ್ತಂಗಡಿ, ಕಡಬ ಠಾಣೆ ಸೇರಿ ಜಿಲ್ಲೆಯ ಹಲವೆಡೆ ಕಾರ್ಯ ನಿರ್ವಹಿಸಿದ್ದರು.

ಭ್ರಷ್ಟಾಚರ ನಿಗ್ರಹ ದಳದ ಇನ್ಸ್ ಪೆಕ್ಟರ್ ಆಗಿ ಯೋಗಿಶ್ ಕುಮಾರ್ ಜಿಲ್ಲೆಯ ಹಲವು ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿದ್ದರು.