ಗೋಕುಲಾಷ್ಟಮಿಯ ಶುಭದಿನದಂದು ನೇಪಾಳಿ ಭಾಷೆಯಲ್ಲಿ ‘ಸನಾತನ ಸಂಸ್ಥೆ’ಯ ಜಾಲತಾಣದ ಲೋಕಾರ್ಪಣೆ !


ಮಂಗಳೂರು: ಭಾರತ ಮತ್ತು ನೇಪಾಳದ ನಡುವೆ ಸಾವಿರಾರು ವರ್ಷಗಳಿಂದ ಸಾಂಸ್ಕೃತಿಕ ಸಂಬಂಧವಿದೆ. ‘ಹಿಂದೂ ಧರ್ಮ’ ಇದು ಎರಡೂ ದೇಶಗಳಲ್ಲಿನ ಸಮಾನವಾದ ಅಂಶವಾಗಿದೆ. ಸಹಜವಾಗಿಯೇ ಎರಡೂ ದೇಶಗಳಲ್ಲಿಯ ಶ್ರದ್ಧಾಸ್ಥಾನಗಳು, ನಂಬಿಕೆ, ಹಬ್ಬ-ಉತ್ಸವ ಇತ್ಯಾದಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಮ್ಯತೆ ಇದೆ. ಸನಾತನ ಸಂಸ್ಥೆಯ ಜಾಲತಾಣಕ್ಕೆ ಜಗತ್ತಿನಾದ್ಯಂತ ಹಿಂದೂ ಸಮಾಜದ ವಾಚಕರಿದ್ದಾರೆ. ಈ ಜಾಲತಾಣಕ್ಕೆ ವಿವಿಧ ದೇಶಗಳಲ್ಲಿಯ ಹಿಂದೂ ನಾಗರಿಕರ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅದಕ್ಕಾಗಿ ಕೆಲವು ನೇಪಾಳಿ ಜಿಜ್ಞಾಸುಗಳು ನೇಪಾಳದಲ್ಲಿರುವ ಹಿಂದೂ ಸಮಾಜಕ್ಕೆ ಧರ್ಮಶಿಕ್ಷಣ ಸಿಗಲು ಸನಾತನದ ಜಾಲತಾಣವು ನೇಪಾಳಿ ಭಾಷೆಯಲ್ಲಿಯೂ ಆರಂಭಿಸುವಂತೆ ಆಗ್ರಹಿಸಿದ್ದರು. ಸನಾತನ ಸಂಸ್ಥೆ ಹಿಂದೂ ಧರ್ಮಪ್ರಸಾರದ ವ್ರತವನ್ನು ಕೈಗೆತ್ತಿಕೊಂಡು ಕಾರ್ಯನಿರತವಾಗಿದ್ದರಿಂದ ನಾವು ಈ ಬೇಡಿಕೆಯನ್ನು ಪೂರ್ಣ ಮಾಡುತ್ತಿದ್ದೇವೆ. ಜಗತ್ತಿನಾದ್ಯಂತ ನೇಪಾಳಿ ಭಾಷೆಯವರಿಗೆ ಧರ್ಮಶಿಕ್ಷಣ ಸಿಗಲು ನಾವು ನೇಪಾಳಿ ಜಾಲತಾಣವನ್ನು ಆರಂಭಿಸುತ್ತಿದ್ದೇವೆ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ್ ಇವರು ಹೇಳಿದ್ದಾರೆ.

ಆಗಸ್ಟ್ 11 ರಂದು ಗೋಕುಲಾಷ್ಟಮಿಯ ಮಂಗಳ ದಿನದಂದು ‘ಆನ್‌ಲೈನ್’ ಕಾರ್ಯಕ್ರಮದ ಮೂಲಕ ಜಾಲತಾಣವನ್ನು ಲೋಕಾರ್ಪಣೆಯನ್ನು ಮಾಡಲಾಯಿತು. ಈ ಸಮಯದಲ್ಲಿ ‘ರಾಷ್ಟ್ರೀಯ ಧರ್ಮಸಭಾ ನೇಪಾಳ’ದ ಅಧ್ಯಕ್ಷ ಡಾ. ಮಾಧವ ಭಟ್ಟರಾಯಿ ಹಾಗೂ ಅವರ ಧರ್ಮಪತ್ನಿ, ಅದೇರೀತಿ ನೇಪಾಳ ಸರಕಾರದ ಮಾಜಿ ರಾಜ್ಯಸಚಿವ ಸೌ. ಕಾಂತಾ ಭಟ್ಟರಾಯಿ ಇವರ ಹಸ್ತದಿಂದ ಲೋಕಾರ್ಪಣೆಯಾಯಿತು. ಈ ಮಂಗಳ ದಿನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರೂ ದೆಹಲಿಯಿಂದ ‘ಆನ್‌ಲೈನ್’ನ ಮೂಲಕ ಉಪಸ್ಥಿತರಿದರು.

READ ALSO

ಈ ಪ್ರಸಂಗದಲ್ಲಿ ಡಾ. ಭಟ್ಟರಾಯಿಯವರು ಮಾತನಾಡುತ್ತಾ, “ಸನಾತನ ಸಂಸ್ಥೆಯ ನೇಪಾಳಿ ಭಾಷೆಯ ಜಾಲತಾಣ ನಮಗೆ ಬಹಳ ಉಪಯುಕ್ತವಾಗಿದೆ ಎಂದೆನಿಸಿತು ಮತ್ತು ಇದು ನಮಗೆ ಬಹಳ ಸಹಾಯ ಮಾಡಲಿದೆ. ನೇಪಾಳದಲ್ಲಿ ಈ ರೀತಿಯ ಧಾರ್ಮಿಕ ವೆಬ್‌ಸೈಟ್ಸ್ ತುಂಬ ಕಡಿಮೆ ಇವೆ. ಇದು ಕೇವಲ ಧರ್ಮದ ಬಗ್ಗೆ ಜ್ಞಾನ ಮಾತ್ರವಲ್ಲದೇ, ಹಿಂದೂ ರಾಷ್ಟ್ರದ ಬಗ್ಗೆ ನಮಗೆಲ್ಲರಿಗೂ ಮಾರ್ಗದರ್ಶನ ಮಾಡಲಿದೆ”, ಎಂದರು.

ಈ ಸಮಯದಲ್ಲಿ ಸದ್ಗುರು ಡಾ. ಚಾರುದತ್ತ ಪಿಂಗಳೆಯವರು ಮಾತನಾಡುತ್ತಾ, “ವೆಬ್‌ಸೈಟ್‌ನಲ್ಲಿ ನೀಡಿರುವ ಹಿಂದೂ ಧರ್ಮಶಿಕ್ಷಣ ಇತ್ಯಾದಿ ಮಾಹಿತಿಗಳ ಮಾಧ್ಯಮದಿಂದ ಭಾರತ ಮತ್ತು ನೇಪಾಳ ಇವೆರಡೂ ದೇಶಗಳ ಧರ್ಮಬಾಂಧವ್ಯ ದೃಢವಾಗಲಿದೆ, ಎರಡೂ ದೇಶಗಳಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಡೆಯುತ್ತಿರುವ ಅಭಿಯಾನವು ಮುಂದುವರಿಯಲಿದೆ”, ಎಂದರು.

ಕನ್ನಡ, ಹಿಂದಿ, ಮರಾಠಿ, ಗುಜರಾತಿ, ಆಂಗ್ಲ, ತೆಲುಗು, ತಮಿಳು, ಮಲ್ಯಾಳಮ್ ಈ ೮ ಭಾಷೆಗಳಲ್ಲಿ ಇರುವ ಈ ಜಾಲತಾಣವು ಇನ್ನು ಮುಂದೆ ನೇಪಾಳಿ ಭಾಷೆಯಲ್ಲೂ ಲಭ್ಯವಿರಲಿದೆ. ಈ ಜಾಲತಾಣದಲ್ಲಿ ಅಧ್ಯಾತ್ಮಿಕ ವಿಷಯದ ಸಂದೇಹ ನಿವಾರಣೆ ಮಾಡಲು ‘ಆನ್‌ಲೈನ್’ ಸಂಪರ್ಕದ ಸೌಲಭ್ಯವು ಲಭ್ಯವಿರಲಿದೆ. ಸನಾತನದ ಜಾಲತಾಣದ ಮೂಲಕ ಜಿಜ್ಞಾಸುಗಳು ಸಾಧನೆಯನ್ನು ಆರಂಭಿಸಿದ್ದಾರೆ ಹಾಗೂ ತಮ್ಮ ಜೀವನವನ್ನು ಆನಂದಮಯವಾಗಿಸಿಕೊಂಡಿದ್ದಾರೆ. ಆದ್ದರಿಂದ ಹೆಚ್ಚೆಚ್ಚು ಜಿಜ್ಞಾಸುಗಳು ಈ ಜಾಲತಾಣಕ್ಕೆ ಭೇಟಿ ನೀಡಿ ಸಾಧನೆಯನ್ನು ಆರಂಭಿಸಬೇಕು, ಎಂದು ಸನಾತನ ಸಂಸ್ಥೆಯ ವತಿಯಿಂದ ಕರೆ ನೀಡಲಾಗಿದೆ.

ಜಾಲತಾಣದ ಲಿಂಕ್ : www.Sanatan.org/nepali