ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ ಆತಂಕ ಸೃಷ್ಟಿಸಿದ್ದ ಆದಿತ್ಯರಾವ್ ಗೆ ಇಂದು ಮಂಪರು ಪರೀಕ್ಷೆ!

ಮಂಗಳೂರು : 2020 ರ ಜನವರಿಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ ಈತ ಆತಂಕ ಸೃಷ್ಟಿಸಿದ್ದ ಬಳಿಕ ಬಾಂಬ್ ಅನ್ನು ನಿಷ್ಕ್ರಿಯ ದಳ ಖಾಲಿ ಮೈದಾನದಲ್ಲಿ ಸ್ಪೋಟಗೊಳಿಸಲಾಗಿತ್ತು. ಅದಾದ ಬಳಿಕ ಆದಿತ್ಯರಾವ್ ಬೆಂಗಳೂರು ಡಿಜಿ ಕಚೇರಿಯಲ್ಲಿ ಪೊಲೀಸರಿಗೆ ಶರಣಾಗಿದ್ದ.

ಈ ಹಿನ್ನಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಆದಿತ್ಯರಾವ್ ಗೆ ಇಂದು ಮಂಪರು ಪರೀಕ್ಷೆ ನಡೆಯಲಿದೆ.

READ ALSO

ಬೆಂಗಳೂರಿನಲ್ಲಿ ಇಂದು ಆದಿತ್ಯರಾವ್ ಮಂಪರು ಪರೀಕ್ಷೆ ನಡೆಯಲಿದ್ದು, ಬುಧವಾರ ಮಂಗಳೂರಿನಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ.