ಅಶ್ವಥ ಎಲೆಗಳಲ್ಲಿ ಕಲಾಕೃತಿ ಮೂಡಿಸಿದ ಕಲಾವಿದ ಅಕ್ಷಯ್ ಸಾಧನೆಗೆ ಡಾ.ಹೆಗ್ಗಡೆ ಪ್ರಶಂಸೆ

ಮಂಗಳೂರು: ಎಲೆಗಳ ಮೇಲೆ ಚಿತ್ರ ಮೂಡಿಸುವ ಕಲೆಯಲ್ಲಿ ಅಕ್ಷಯ್ ಎಂ ಕೋಟ್ಯಾನ್ ಮೂಡಬಿದ್ರೆ ಸಾಧನೆ ಮಾಡಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ .ವಿ. ಹೆಗ್ಗಡೆ ಯವರ ಚಿತ್ರವನ್ನು ಅಶ್ವಥ ಎಲೆಗಳಲ್ಲಿ ಮೂಡಿಸುವ ಮೂಲಕ ಡಾ. ಹೆಗ್ಗಡೆಯವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮೂಲತ: ಮೂಡಬಿದರೆಯ ಕಲ್ಲಬೆಟ್ಟುವಿನ ಮೋಹನ.ಬಿ ಪೂಜಾರಿ ಹಾಗೂ ಶೋಭಾ ಕೋಟ್ಯಾನ್ ದಂಪತಿಯ ಪುತ್ರ ಅಕ್ಷಯ್ ಪ್ರಸ್ತುತ ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಎರಡನೆಯ ವರ್ಷದ ಬಿವಿಎ ವ್ಯಾಸಂಗ ಮಾಡುತ್ತಿದ್ದಾರೆ.

READ ALSO

ಕಾಗದದ ಮೂಲಕ ಚಿತ್ರ ಆರಂಬಿಸಿದ ಇವರು ಕಳೆದ ನಾಲ್ಕು ತಿಂಗಳುಗಳಿಂದ ಎಲೆಗಳ ಮೇಲೆ ಚಿತ್ರ ಮೂಡಿಸಿ ಯಶಸ್ವಿಯಾಗಿದ್ದಾರೆ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಇನ್ನೂ ಅನೇಕರ ಹಾಗೂ ಸಿನಿಮಾ ನಟರುಗಳ ಹಾಗೂ ದೇವರ ಚಿತ್ರಗಳನ್ನು ಎಲೆಗಳಲ್ಲಿ ಮೂಡಿಸಿದ್ದಾರೆ.

ಬಹುಮುಖ ಪ್ರತಿಭೆ ಅಕ್ಷಯ್ ಪೆನ್ಸಿಲ್ ಮೊನೆಗಳಲ್ಲಿ ಆಕೃತಿ, ಸೋಪಿನಲ್ಲಿ ಆಕೃತಿ, ಸ್ಪೀಡ್ ಪೈಂಟಿಂಗ್, ರಂಗೋಲಿ, ಮರಳಿನ ಆಕೃತಿ, ಡಿಜಿಟಲ್ ಪೇಂಟಿಂಗ್ ಮೊದಲಾದ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ