ಅಮೃತ ಸಂಜೀವಿನಿ ಬೆಳ್ತಂಗಡಿಯ ವತಿಯಿಂದ ಕಾಮಧೇನು ಯೋಜನೆಗೆ ಚಾಲನೆ

ಬೆಳ್ತಂಗಡಿ : ಅಮೃತಸಂಜೀವಿನಿ(ರಿ) ಮಂಗಳೂರು ಇದರ 5ನೇ ವರ್ಷದ ವಾರ್ಷಿಕೋತ್ಸವದ ಶುಭದಿನದಂದು ಅದರ ಸಹಸಂಸ್ಥೆಯಾಗಿರುವ ಅಮೃತ ಸಂಜೀವಿನಿ ಬೆಳ್ತಂಗಡಿ ಸಂಸ್ಥೆಯ ಮಹತ್ವಕಾಂಕ್ಷಿ ಯೋಜನೆಗೆ ಚಾಲನೆ ನೀಡಲಾಯಿತು.

ಅಮೃತಸಂಜೀವಿನಿಯ ವಾರ್ಷಿಕೋತ್ಸವದ ಅಂಗವಾಗಿ ಕಾಯರ್ತಡ್ಕದ ನಂದಗೋಕುಲಗೋಶಾಲೆ ಗೆ ಮಾಸಿಕ ಯೋಜನೆಯಾದ ಕಾಮಧೇನು ಯೋಜನೆಯ ಮೂಲಕ ಧನಸಹಾಯವನ್ನು ಮಾಡಿದರು.


ಹಲವಾರು ಸಮಾಜಮುಖಿ ಕಾರ್ಯಗಳ ಜೊತೆ ಕಾಮಧೇನುಯೋಜನೆ ಈ ಸಂಸ್ಥೆಯ ವಿಶೇಷವಾದ ಯೋಜನೆಯಾಗಿದೆ ಹಾಗೂ ಈ ಯೋಜನೆಯು ಸಂಸ್ಥೆಗೆ ಬಹಳ ಹೆಮ್ಮೆಯ ವಿಚಾರವಾಗಿದೆ. ಈ ಸಂದರ್ಭದಲ್ಲಿ ನ್ಯಾಯವಾದಿ ಸುಬ್ರಹ್ಮಣ್ಯಅಗರ್ತ, ಡಾ. ದಯಾಕರ್ ಉಜಿರೆ ಹಾಗೂ ಅಮೃತ ಸಂಜೀವಿನಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

READ ALSO