ಶ್ರೀ ಕ್ಷೇತ್ರ ಮುಂಡೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನೂತನ ಸುತ್ತುಪೌಳಿಯ ಎದುರು ಗೋಪುರ ಸಮರ್ಪಣೆ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಮುಂಡೂರಿನಲ್ಲಿ ಏ.22ರಂದು ಅಮ್ಮನವರಿಗೆ ನೂತನ ಸುತ್ತುಪೌಳಿಯ ಎದುರು ಗೋಪುರ ಸಮರ್ಪಣೆ, ಹಾಗೂ ವರ್ಷಾವಧಿ ಮಹೋತ್ಸವ ನಡೆಯಲಿದೆ.

ಪ್ರಾತಃ ಕಾಲದಲ್ಲಿ ಗಣಯಾಗ, ಶ್ರೀ ದುರ್ಗಾಪರಮೇಶ್ವರಿ ದೇವಿ, ಗಣಪತಿ, ಚಾಮುಂಡೇಶ್ವರಿ ಪರಿವಾರ ದೈವಗಳಿಗೆ ಕಲಶಾರಾಧನೆ, ನಾಗತಂಬಿಲ, ಕಲಷಾಭಿಷೇಕ, ಶ್ರೀ ಸತ್ಯನಾರಾಯಣ ಪೂಜಾ ಕೈಂಕರ್ಯಗಳು, ಭಜನಾ ಕಾರ್ಯಕ್ರಮಗಳು ನಡೆಯಲಿದೆ.

READ ALSO

ರಾತ್ರಿ 7.30ರಿಂದ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು ತಾಲೂಕಿನ ಶಾಸಕರಾದ ಹರೀಶ್ ಪೂಂಜಾ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ರಾತ್ರಿ 9ರಿಂದ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.