
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲವ್ ಜಿಹಾದ್ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸುತಿದ್ದು ಬೆಳ್ತಂಗಡಿ ತಾಲೂಕಿನ ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ದೂರದ ಬೆಂಗಳೂರಿನಿಂದ ಉಜಿರೆಯ ಪಿಜಿ ಯೊಂದರಲ್ಲಿ ವಾಸವಾಗಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿರುವ ಯುವತಿಯೋರ್ವಳನ್ನು ಸ್ನೇಹ ಬೆಳೆಸಿ ಲೈಂಗಿಕ ಕಿರುಕುಳ ನೀಡಿ ಲವ್ ಜಿಹಾದ್ ಬಲೆಗೆ ಬೀಳಿಸಿಕೊಳ್ಳಲು ಯತ್ನಿಸುತಿದ್ದ ಉಜಿರೆ ಮೂಲದ ವ್ಯಕ್ತಿಯ ವಿರುದ್ಧ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಜಿರೆಯಲ್ಲಿ ಮೀನಿನ ವ್ಯಾಪಾರ ನಡೆಸುತ್ತಿರುವ ಉಜಿರೆಯ TB ಕ್ರಾಸ್ ನಿವಾಸಿಯೊಬ್ಬರ ಮಗ ಮಹಮ್ಮದ್ ಅಮನ್ ಎಂಬಾತ ಸ್ನೇಹಿತೆಯ ಮುಖಾಂತರ ಆಕೆಯ ಪಿಜಿಯಲ್ಲಿ ವಾಸವಿರುವ ಸಂತ್ರಸ್ತ ವಿದ್ಯಾರ್ಥಿನಿಯ ನಂಬರ್ ಪಡೆದು, ಸ್ನೇಹ ಬೆಳೆಸಿ ಮಾತಿನಲ್ಲಿ ಮರುಳು ಮಾಡಿ ಬಲೆಗೆ ಬೀಳಿಸಿಕೊಂಡಿದ್ದಾನೆ. ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ಆಕೆಯ ಬೆತ್ತಲೆ ಫೋಟೋ ಪಡೆದು ನೀನು ನನ್ನ ಜೊತೆ ಬರಬೇಕು, ಇಲ್ಲವಾದರೆ ಫೋಟೊ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ.
ಈತ ಆಕೆಗೆ ದಿನನಿತ್ಯ ವೀಡಿಯೊ ಕಾಲ್ ಮಾಡಿ ತೊಂದರೆ ಕೊಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪಿಜಿ ನಡೆಸುವ ನೆಪದಲ್ಲಿ ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟ ನಡೆಸಲಾಗುತ್ತಿದೆಯೇ…..?????
ಉಜಿರೆ ಸುತ್ತಮುತ್ತ ನಾಯಿಕೊಡೆಗಳಂತೆ ತಲೆ ಎತ್ತಿರುವ ಪೇಯಿಂಗ್ ಗೆಸ್ಟ್ ನಡೆಸುತ್ತಿರುವ ಕೆಲವರು ಹಾಸ್ಟೆಲ್ ನಡೆಸುವ ನೆಪದಲ್ಲಿ ದೂರದ ಹೆಣ್ಣು ಮಕ್ಕಳನ್ನು ಈ ರೀತಿ ಬಳಸಿಕೊಳ್ಳುತ್ತಿರುವುದು ತಿಳಿದುಬಂದಿರುತ್ತದೆ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಹಾಗೂ ಪೋಷಕರು ಈ ಬಗ್ಗೆ ಗಮನಹರಿಸಿ ಇಂತಹ ಕೃತ್ಯಕ್ಕೆ ಸಹಕರಿಸುವವರಿಗೆ ಕಾನೂನು ಪಾಠ ಕಳಿಸಬೇಕಿದೆ.
ಇದೀಗ ಆರೋಪಿಯನ್ನು ಬೆಳ್ತಂಗಡಿಯ ಪೋಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ಮತ್ತವರ ತಂಡ ಪತ್ತೆ ಹಚ್ಚಿ ಬೆಂಗಳೂರು ಪೋಲೀಸರ ವಶಕ್ಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.