ಕಾಲೇಜು ವಿದ್ಯಾರ್ಥಿನಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರವೆಸಗಿ ಜೀವ ಬೆದರಿಕೆ! ಉಪ್ಪಿನಂಗಡಿ ಮೂಲದ ಯುವಕನ ಬಂಧನ!

ಕಾರ್ಕಳ: ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ಕಾರಿನಲ್ಲಿ ಕರೆದೊಯ್ದು ಅಮಲು ಪದಾರ್ಥ ನೀಡಿ ಅತ್ಯಾಚಾರವೆಸಗಿ ಜೀವ ಬೆದರಿಕೆ ಹಾಕಿದ ಘಟನೆ ಕಾರ್ಕಳದಲ್ಲಿ ನಡೆದಿದೆ.

ಅತ್ಯಾಚಾರಗೈದು ಬ್ಲಾಕ್‌ಮೇಲ್ ಮಾಡಿ ಆಕೆಯ ಜೀವದೊಂದಿಗೆ ನಿರಂತರವಾಗಿ ಚೆಲ್ಲಾಟ ನಡೆಸುತ್ತಿದ್ದ ಆರೋಪಿ ಉಪ್ಪಿನಂಗಡಿಯ ಪ್ರಾಣೇಶ್(38) ಎಂಬಾತನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. 

ಯುವತಿ ಕಾಲೇಜಿಗೆಂದು ತೆರಳಲು ಬಸ್ಸಿಗೆ ಕಾಯುತ್ತಿದ್ದ ವೇಳೆ ಆಕೆಯ ದೊಡ್ಡಪ್ಪನ ಪರಿಚಯದ ಪ್ರಾಣೇಶ್ ಎಂಬಾತ ಅದೇ ಮಾರ್ಗದಲ್ಲಿ ಕಾರಿನಲ್ಲಿ ಬಂದು ಡ್ರಾಪ್ ಕೊಡುವುದಾಗಿ ನಂಬಿಸಿ ಕರೆದುಕೊಂಡು ಹೋಗಿದ್ದಾನೆ. ಆಕೆ ಇಳಿಯಬೇಕಾಗಿದ್ದ ಸ್ಥಳ ತಲುಪಿದರೂ ಕಾರನ್ನು ನಿಲ್ಲಿಸದೆ ಉಪ್ಪಿನಂಗಡಿ ಕಡೆಗೆ ಕಾರನ್ನು ಚಲಾಯಿಸಿ, ಬಳಿಕ ಕಾರಿನಲ್ಲೇ ಅಮಲು ಬರುವ ಜ್ಯೂಸ್ ನೀಡಿ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.

ಬಳಿಕ ಅತ್ಯಾಚಾರದ ವಿಡಿಯೋ ತೆಗೆದು ಯಾರಿಗಾದರೂ ಹೇಳಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ. ಆನಂತರ ಜನವರಿ 12 ರಂದು ಯುವತಿ ಕಾರ್ಕಳಕ್ಕೆ ಕಂಪ್ಯೂಟರ್ ಕ್ಲಾಸಿಗೆಂದು ತೆರಳಿದ ವೇಳೆ ಈಕೆಯನ್ನು ಬೈಲೂರಿಗೆ ಕರೆಸಿ, ಗುಡ್ಡೆಯಂಗಡಿ ಎಂಬಲ್ಲಿ ಮತ್ತೊಮ್ಮೆ ಅತ್ಯಾಚಾರ ನಡೆಸಿರುತ್ತಾನೆ ಎಂದು ಆರೋಪಿಸಿದ್ದಾರೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Spread the love
  • Related Posts

    ಹಾಸನಾಂಬೆ ದರ್ಶನೋತ್ಸವಕ್ಕೆ ಭಕ್ತಸಾಗರ; ಈ ಬಾರಿ ₹29.55 ಕೋಟಿ ದಾಖಲೆಯ ಆದಾಯ!

    ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಶಕ್ತಿ ದೇವತೆ ಹಾಸನಾಂಬೆ ದರ್ಶನೋತ್ಸವವು ಈ ಬಾರಿ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದು ಸಾರ್ವಕಾಲಿಕ ಇತಿಹಾಸ ನಿರ್ಮಿಸಿದೆ. ದೇವಾಲಯದ ಹುಂಡಿ ಎಣಿಕೆ ಕಾರ್ಯವು ಗುರುವಾರ ಸಂಪೂರ್ಣಗೊಂಡಿದ್ದು, ಈ ವರ್ಷ ಬರೋಬ್ಬರಿ 29 ಕೋಟಿ 55…

    Spread the love

    ಉಜಿರೆ–ಬೆಳ್ತಂಗಡಿಯಲ್ಲಿ ಮೊಬೈಲ್ ಕಳ್ಳರ ಹಾವಳಿ! ಮಹಿಳೆಯರೇ ಟಾರ್ಗೆಟ್? ಬಸ್ ಹತ್ತುವ ಮಹಿಳೆಯರ ಮೊಬೈಲ್‌ಗೆ ಕಳ್ಳರ ಕಣ್ಣು!

    ಉಜಿರೆ–ಬೆಳ್ತಂಗಡಿಯಲ್ಲಿ ಮೊಬೈಲ್ ಕಳ್ಳರ ಕೈಚಳಕ!ಮಹಿಳೆಯರೇ ಟಾರ್ಗೆಟ್!? ಬಸ್ ಏರುವ ವೇಳೆ ಮೊಬೈಲ್ ಕಳ್ಳತನದ ಆತಂಕ ಬೆಳ್ತಂಗಡಿ: ಉಜಿರೆ ಹಾಗೂ ಬೆಳ್ತಂಗಡಿ ಭಾಗದಲ್ಲಿ ಬಸ್ ಪ್ರಯಾಣಿಕರ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ. ವಿಶೇಷವಾಗಿ ಬೆಳಿಗ್ಗೆ ಹಾಗೂ ಸಂಜೆ ಜನದಟ್ಟಣೆ…

    Spread the love

    You Missed

    ಹಾಸನಾಂಬೆ ದರ್ಶನೋತ್ಸವಕ್ಕೆ ಭಕ್ತಸಾಗರ; ಈ ಬಾರಿ ₹29.55 ಕೋಟಿ ದಾಖಲೆಯ ಆದಾಯ!

    • By admin
    • November 12, 2026
    • 5 views
    ಹಾಸನಾಂಬೆ ದರ್ಶನೋತ್ಸವಕ್ಕೆ ಭಕ್ತಸಾಗರ; ಈ ಬಾರಿ ₹29.55 ಕೋಟಿ ದಾಖಲೆಯ ಆದಾಯ!

    ಉಜಿರೆ–ಬೆಳ್ತಂಗಡಿಯಲ್ಲಿ ಮೊಬೈಲ್ ಕಳ್ಳರ ಹಾವಳಿ! ಮಹಿಳೆಯರೇ ಟಾರ್ಗೆಟ್? ಬಸ್ ಹತ್ತುವ ಮಹಿಳೆಯರ ಮೊಬೈಲ್‌ಗೆ ಕಳ್ಳರ ಕಣ್ಣು!

    • By admin
    • November 6, 2026
    • 13 views
    ಉಜಿರೆ–ಬೆಳ್ತಂಗಡಿಯಲ್ಲಿ ಮೊಬೈಲ್ ಕಳ್ಳರ ಹಾವಳಿ! ಮಹಿಳೆಯರೇ ಟಾರ್ಗೆಟ್? ಬಸ್ ಹತ್ತುವ ಮಹಿಳೆಯರ ಮೊಬೈಲ್‌ಗೆ ಕಳ್ಳರ ಕಣ್ಣು!

    ಹಿರಿಯ ಸಾಹಿತಿ, ಸಂಶೋಧಕ ಡಾ. ವ್ಯಾಸರಾವ್ ನಿಂಜೂರು ನಿಧನ

    • By admin
    • November 3, 2026
    • 11 views
    ಹಿರಿಯ ಸಾಹಿತಿ, ಸಂಶೋಧಕ ಡಾ. ವ್ಯಾಸರಾವ್ ನಿಂಜೂರು ನಿಧನ

    ಮಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ: ₹15.30 ಲಕ್ಷದ MDMA ಸಹಿತ ಬೆಳ್ತಂಗಡಿ ಮೂಲದ ಮಹಿಳೆ ಅರೆಸ್ಟ್!

    • By admin
    • November 2, 2026
    • 12 views
    ಮಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ: ₹15.30 ಲಕ್ಷದ MDMA ಸಹಿತ ಬೆಳ್ತಂಗಡಿ ಮೂಲದ ಮಹಿಳೆ ಅರೆಸ್ಟ್!

    ಕಂಬಳದ ಸೊಬಗು, ಮೈಸೂರು ದಸರಾಗೆ ಹೊಸ ಮೆರುಗು ನೀಡಿದ ತುಳುನಾಡಿನ ಜನಪದ ಕ್ರೀಡೆ

    • By admin
    • November 1, 2026
    • 18 views

    ಬೆಳ್ತಂಗಡಿ ತಾಲೂಕಿನ 7ಮಂದಿಗೆ ಒಲಿದು ಬಂದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

    • By admin
    • November 1, 2026
    • 12 views
    ಬೆಳ್ತಂಗಡಿ ತಾಲೂಕಿನ 7ಮಂದಿಗೆ ಒಲಿದು ಬಂದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ