ರಾಷ್ಟ್ರಾಭಿಮಾನವನ್ನು ಜಾಗೃತಗೊಳಿಸುವ ಕೃತಿ ಮಾಡಿ ನಿಜವಾದ ಅರ್ಥದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸೋಣ !

‘ರಾಷ್ಟ್ರಾಭಿಮಾನದ ಅಭಾವ’ವೇ ದೇಶದ ಎಲ್ಲಾ ಸಮಸ್ಯೆಗಳ ಹಿಂದಿನ ಕಾರಣ…..!

ಇಂದು ದೇಶದಲ್ಲಿ ಹಲವಾರು ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳಿವೆ. ದೇಶದಲ್ಲಿಅನೇಕ ದೇಶದ್ರೋಹಿ ಶಕ್ತಿಗಳು ದಂಗೆ, ಗಲಭೆ, ಹಿಂಸೆ, ಹತ್ಯೆಯಂತಹ ಘಟನೆಗಳ ಮೂಲಕ ಖಾಲಿಸ್ಥಾನ, ಮೊಘಲಸ್ಥಾನ ನಿರ್ಮಾಣ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ದೇಶದ ಗಡಿಗಳು ಕೂಡ ಸುರಕ್ಷಿತವಾಗಿಲ್ಲ. ಚೀನಾ ಯಾವುದೇ ಸಮಯದಲ್ಲಿ ದಾಳಿ ಮಾಡಬಹುದು. ದೇಶದ ಸ್ಥಿತಿ ಹೀಗೆಯೇ ಮುಂದುವರಿದರೆ ನಮ್ಮೆಲ್ಲರ ಅಸ್ತಿತ್ವಕ್ಕೂ ಧಕ್ಕೆಯುಂಟಾಗುವುದು. ಇದಕ್ಕಾಗಿ ನಾವು ದೇಶದ ಭಾವೀ ಪ್ರಜೆಗಳು ಎಂಬ ಸಂಬಂಧದಿಂದ ಈ ವಿಷಯದ ಬಗ್ಗೆ ಗಂಭೀರವಾದ ವಿಚಾರ ಮಾಡಿ ಉಪಾಯವನ್ನು ಹುಡುಕಬೇಕಾಗಿದೆ, ಆಗಲೇ ಮುಂಬರುವ ಭಾರತವು ಆದರ್ಶವಾಗುತ್ತದೆ. ಮಿತ್ರರೇ ನಮ್ಮಲ್ಲಿನ ರಾಷ್ಟ್ರಾಭಿಮಾನದ ಅಭಾವವೇ ಇದಕ್ಕೆ ಮುಖ್ಯ ಕಾರಣವಾಗಿದೆ. ‘ನಾನು ಮಾಡುವ ಪ್ರತಿಯೊಂದು ಕೃತಿಯನ್ನು ನನ್ನಲ್ಲಿ ಹಾಗೂ ಇತರರಲ್ಲಿ ರಾಷ್ಟ್ರಾಭಿಮಾನ ಜಾಗೃತವಾಗುವಂತೆಯೇ ಮಾಡುವೆನು’ ಎಂದು ನಾವು ಇಂದಿನಿಂದ ನಿರ್ಧರಿಸಬೇಕಾಗಿದೆ.

ಇಂತಹ ಪರಿಸ್ಥಿತಿಯನ್ನು ಬದಲಾಯಿಸುವ ಸಲುವಾಗಿ ಈ ಗಣರಾಜ್ಯೋತ್ಸವದ ನಿಮಿತ್ತ ಕೆಳಗೆ ನೀಡಿದಂತೆ ಕೃತಿ ಮಾಡಲು ಇಂದಿನಿಂದಲೇ ನಿರ್ಧರಿಸೋಣ !

ರಾಷ್ಟ್ರಭಕ್ತಿಯನ್ನು ಹೇಗೆ ಜಾಗೃತಗೊಳಿಸಬಹುದು ?

೧. ರಾಷ್ಟ್ರಧ್ವಜದ ಅಪಮಾನವನ್ನು ತಡೆಯುವುದು.
೨. ಕ್ರಾಂತಿಕಾರರ ಚರಿತ್ರೆಯ ಅಧ್ಯಯನ ಮಾಡಿ ಅವರ ಮೌಲ್ಯಗಳನ್ನು ಕೃತಿಯಲ್ಲಿ ತರುವುದು.
೩. ಕ್ರಾಂತಿಕಾರರ ಘೋಷವಾಕ್ಯಗಳನ್ನು ಹಾಗೂ ಅವರ ಚಿತ್ರಗಳನ್ನು ಮನೆಯಲ್ಲಿ ಹಾಕುವುದು.
೪. ಯಾವುದಾದರೊಬ್ಬ ಕ್ರಾಂತಿಕಾರರನ್ನು ನಮಗೆ ಆದರ್ಶವಾಗಿ ಆರಿಸುವುದು.
೫. ಸ್ನೇಹಿತರ ಜನ್ಮದಿನದಂದು ಕ್ರಾಂತಿಕಾರರ ಚಿತ್ರ ಅಥವಾ ಅವರ ಬಗ್ಗೆ ಮಾಹಿತಿ ನೀಡುವ ಸಣ್ಣ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವುದು.
೬. ಶಾಲೆಗಳಲ್ಲಿ ಸಂಪೂರ್ಣ ‘ವಂದೇ ಮಾತರಂ’ಅನ್ನು ಹೇಳಲು ಆಗ್ರಹ ಮಾಡುವುದು.
೭. ರಾಷ್ಟ್ರಗೀತೆಯ ಅಪಮಾನವಾಗುತ್ತಿದ್ದರೆ ಅದನ್ನು ತಡೆಯುವುದು.
೮. ಕ್ರಾಂತಿಕಾರರ ಜೀವನದ ಮೇಲಾಧರಿಸಿದ ಚರ್ಚಾಕೂಟಗಳನ್ನು ಆಯೋಜಿಸುವುದು.
೯. ಕ್ರಾಂತಿಕಾರರ ಹಾಗೂ ದೇಶಭಕ್ತರ ಚಿತ್ರಗಳ ಪ್ರದರ್ಶನವನ್ನು ಆಯೋಜಿಸುವುದು.
೧೦. ಕ್ರಾಂತಿಕಾರರ ಚಿತ್ರಗಳಿಗೆ ಬಣ್ಣ ಹಚ್ಚುವ ಸ್ಪರ್ಧೆಯನ್ನು ಆಯೋಜಿಸುವುದು.
೧೧. ದೇಶಭಕ್ತಿಯನ್ನು ಮೂಡಿಸುವಂತಹ ಚಲನಚಿತ್ರ ಹಾಗೂ ಧಾರಾವಾಹಿಗಳನ್ನು ನೋಡುವುದು.

ಬಾಂಧವರೇ, ಮೇಲೆ ನೀಡಿರುವಂತಹ ಪ್ರತಿಯೊಂದು ಅಂಶಗಳನ್ನೂ ನಾವು ಆಚರಿಸಿದಾಗ ಅದು ನಿಜವಾದ ಪ್ರಜಾಪ್ರಭುತ್ವವಾಗಿರುತ್ತದೆ. ನಾವು ಪ್ರತಿಯೊಂದು ಅಂಶಗಳನ್ನು ಕೃತಿಯಲ್ಲಿ ತಂದುಕೊಳ್ಳೋಣ ಹಾಗೂ ಇತರರಿಗೂ ಹಾಗೆ ಮಾಡಲು ಆಗ್ರಹಿಸೋಣ.

ದೇಶಪ್ರೇಮ ಜಾಗೃತಗೊಳಿಸುವ ಸಲುವಾಗಿ ಹಾಗೂ ಆದರ್ಶ ಪ್ರಜಾಪ್ರಭುತ್ವ ರಾಜ್ಯ ತರಲು ಮಾಡಬೇಕಾದ ಕೆಲವು ಬೇಡಿಕೆಗಳು !

ಪ್ರಜಾಪ್ರಭುತ್ವ ದಿನದ ನಿಮಿತ್ತವಾಗಿ ನಾವು ಕೆಲವು ಬೇಡಿಕೆಗಳನ್ನು ಮಾಡೋಣ. ಈ ಬೇಡಿಕೆಗಳೇನಾದರೂ ಸರಕಾರವು ಸ್ವೀಕರಿಸಿದರೆ, ಆಗ ಪ್ರತಿಯೊಬ್ಬರಲ್ಲಿಯೂ ದೇಶಪ್ರೇಮ ಜಾಗೃತಗೊಳ್ಳುತ್ತದೆ ಹಾಗೂ ಶೀಘ್ರವಾಗಿ ಆದರ್ಶ ಪ್ರಜಾಪ್ರಭುತ್ವ ರಾಜ್ಯ ಬರುವುದು !

ಆ. ರಾಷ್ಟ್ರೀಯ ಶಿಕ್ಷಣದಲ್ಲಿ ಸಮಾನತೆಯಿರಬೇಕು. ಅಂತಾರಾಷ್ಟ್ರೀಯ, ಕೇಂದ್ರ ಹಾಗೂ ರಾಜ್ಯ ಹೀಗೆ ಶಿಕ್ಷಣವನ್ನು ತುಂಡರಿಸಿ ನಮ್ಮಲ್ಲಿರುವ ರಾಷ್ಟ್ರೀಯತೆಯ ಭಾವನೆಯನ್ನು ನಾಶಗೊಳಿಸಬೇಡಿ. ಶಿಕ್ಷಣದಲ್ಲಿ ದೇಶಭಕ್ತಿಯನ್ನು ಸೇರಿಸುವುದು.
ಇ. ಪ್ರತಿಯೊಬ್ಬನಿಗೂ ಮಾತೃಭಾಷೆಯಲ್ಲಿಯೇ ಶಿಕ್ಷಣ ಸಿಗಬೇಕು.
ಈ. ನಮಗೆ ಸೈನ್ಯದ ಶಿಕ್ಷಣವನ್ನು ನೀಡಿ.
ಉ. ನಮ್ಮಲ್ಲಿ ದೇಶಪ್ರೇಮ ನಿರ್ಮಿಸಿದಂತಹ ಆದರ್ಶ ಕ್ರಾಂತಿಕಾರರ ಅಪಕೀರ್ತಿ ಆಗಲು ಬಿಡಬೇಡಿ.
ಊ. ನಮ್ಮಲ್ಲಿರುವ ಸಂಘಭಾವನೆ ಹೆಚ್ಚಾಗಲೆಂದು ಜಾತಿ, ಧರ್ಮ ಹಾಗೂ ಪಂಥ ಇವುಗಳಡಿ ನಮ್ಮನ್ನು ವಿಂಗಡಿಸಬೇಡಿ.
ಎ. ಪ್ರಜಾಪ್ರಭುತ್ವದ ದಿನವನ್ನು ತಿಥಿಗನುಸಾರವಾಗಿ ಆಚರಿಸಿ.
ಏ. ನಮಗೆ ಸಿಕ್ಕಿರುವ ಅಂಕಗಳಿಗನುಸಾರ (‘ಮಾರ್ಕ್ಸ್’) ವಿದ್ಯಾಲಯದಲ್ಲಿ ಪ್ರವೇಶ ನೀಡಿ, ಮೀಸಲಾತಿ ಬೇಡ.
ಒ. ಎಲ್ಲಾ ಶಾಲೆಗಳಲ್ಲಿಯೂ ಸಂಪೂರ್ಣ ‘ವಂದೇ ಮಾತರಂ’ ಹೇಳುವುದನ್ನು ಕಡ್ಡಾಯಗೊಳಿಸಿ.
ಓ. ಎಲ್ಲಾ ಶಾಲೆಗಳಲ್ಲಿನ ಪ್ರಾರ್ಥನೆ ಒಂದೇ ರೀತಿಯಲ್ಲಿ ಇರಲಿ.
ಔ. ಶಾಲೆಯ ಸಮವಸ್ತ್ರ ಆಂಗ್ಲರಂತೆ, ಉದಾ. ಟೈ, ಟೀ ಶರ್ಟ್ ಹೀಗೆ ಬೇಡ.

ರಾಷ್ಟ್ರಧ್ವಜ – ರಾಷ್ಟ್ರದ ಗೌರವ !


ರಾಷ್ಟ್ರಧ್ವಜವು ರಾಷ್ಟ್ರದ ಗೌರವವಾಗಿದೆ ! ಆದರೆ ದುರ್ದೈವದಿಂದ ಹೆಚ್ಚಿನ ಭಾರತೀಯರಿಗೆ ಇದರ ನೆನಪು ಕೇವಲ 15 ಅಗಸ್ಟ ಮತ್ತು 26 ಜನವರಿಯಂದು ಮಾತ್ರ ಆಗುತ್ತದೆ. ಈ ದಿನದಂದು ರಾಷ್ಟ್ರಧ್ವಜವನ್ನು ಅತ್ಯಂತ ಗೌರವದಿಂದ ಹಾರಿಸಲಾಗುತ್ತದೆ ! ಆದರೆ ಇದೇ ಕಾಗದ/ಪ್ಲಾಸ್ಟಿಕನಿಂದ ತಯಾರಿಸಿದ ರಾಷ್ಟ್ರಧ್ವಜವು ಸಂಜೆಯಾಗುತ್ತಿದ್ದಂತೆ ರಸ್ತೆಯ ಮೇಲೆ, ಕಸದ ಬುಟ್ಟಿಯಲ್ಲಿ, ಚರಂಡಿಯಲ್ಲಿ ಇತ್ಯಾದಿ ಸ್ಥಳದಲ್ಲಿ ಬಿದ್ದಿರುವುದನ್ನು ಕಾಣುತ್ತೇವೆ. ಪ್ಲಾಸ್ಟಿಕನಿಂದ ತಯಾರಾದ ರಾಷ್ಟ್ರಧ್ವಜವಂತೂ ನಾಶವಾಗುವುದಿಲ್ಲ, ಇದರಿಂದ ಹಲವು ದಿನಗಳವರೆಗೆ ನಾವು ಆ ರಾಷ್ಟ್ರಧ್ವಜದ ಅಗೌರವವನ್ನು ನೋಡಬೇಕಾಗುತ್ತದೆ. ಈ ರೀತಿಯಲ್ಲಾಗುವ ರಾಷ್ಟ್ರಧ್ವಜದ ಅಗೌರವವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆಯನ್ನು(ದಾವೆ ಸಂ. 103/2011) ಹೂಡಲಾಗಿದೆ. ಇದರ ಬಗ್ಗೆ ಆಲಿಕೆಯನ್ನು ಮಾಡುತ್ತ ನ್ಯಾಯಾಲಯವು ಪ್ಲಾಸ್ಟಿಕನ ರಾಷ್ಟ್ರಧ್ವಜದ ಅಗೌರವವನ್ನು ತಡೆಗಟ್ಟಲು ಸರ್ಕಾರಕ್ಕೆ ಆದೇಶವನ್ನು ಕೊಡಲಾಗಿತ್ತು, ಅದಕ್ಕನುಸಾರ ಕೇಂದ್ರೀಯ ಮತ್ತು ರಾಜ್ಯದ ಗೃಹ ವಿಭಾಗ ಮತ್ತು ಶಿಕ್ಷಣ ವಿಭಾಗದ ಮೂಲಕ ಈ ವಿಷಯದ ಕುರಿತು ಒಂದು ಸುತ್ತೋಲೆಯನ್ನು ಹೊರಡಿಸಿದೆ. ಇತ್ತೀಚಿನ ದಿನದಲ್ಲಿ ಕರ್ನಾಟಕ ಸರ್ಕಾರವು ‘ಪ್ಲಾಸ್ಟಿಕ ನಿರ್ಬಂಧ’ದ ನಿರ್ಣಯವನ್ನೂ ತೆಗೆದುಕೊಂಡಿದೆ. ಇದರ ಪ್ರಕಾರ ಪ್ಲಾಸ್ಟಿಕನ ರಾಷ್ಟ್ರಧ್ವಜದ ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ. ಹಿಂದೂ ಜನಜಾಗೃತಿ ಸಮಿತಿಯು ಈ ದಿಶೆಯಿಂದ ಕಳೆದ 19 ವರ್ಷಗಳಿಂದ ರಾಷ್ಟ್ರಧ್ವಜದ ಗೌರವ ಕಾಪಾಡುವ ಅಭಿಯಾನವನ್ನು ಮಾಡುತ್ತಿದೆ. ಆದರೆ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದ ನಿಮಿತ್ತ ಮಕ್ಕಳು, ಪಾಲಕರು ಮತ್ತು ಸಾರ್ವಜನಿಕರು ವಾಹನಗಳ ಮೇಲೆ ಪ್ಲಾಸ್ಟಿಕ್ ರಾಷ್ಟ್ರಧ್ವಜವನ್ನು ಉಪಯೋಗಿಸಿ ಸಂಜೆಯಾಗುವುದರ ಒಳಗೆ ಚರಂಡಿ, ರಸ್ತೆಯ ಬದಿಯಲ್ಲಿ ಬೀಳುವುದನ್ನು ನೋಡುತ್ತೇವೆ ಮತ್ತು ರಸ್ತೆ ಬದಿ, ಅಂಗಡಿಗಳಲ್ಲಿ ಪ್ಲಾಸ್ಟಿಕ್ ರಾಷ್ಟ್ರ ಧ್ವಜದ ಮಾರಾಟವು ಸಹ ನಡೆಯುತ್ತದೆ. ಈಗ ರಾಷ್ಟ್ರ ಧ್ವಜದ ಮಾಸ್ಕ ಧರಿಸುವುದು ಸಹ ನಡೆಯುತ್ತದೆ. ಲಕ್ಷಾಂತರ ಕ್ರಾಂತಿಕಾರಿಗಳು ರಾಷ್ಟ್ರಧ್ವಜದ ಗೌರವ ಕಾಪಾಡಲು ತಮ್ಮ ಪ್ರಾಣವನ್ನು ತ್ಯಾಗಮಾಡಿದ್ದಾರೆ. ಆದರೆ ಅವರ ಬಲಿದಾನದ ಮಹತ್ವ ತಿಳಿಯದೇ ಈ ರೀತಿಯಲ್ಲಿ ರಾಷ್ಟ್ರ ಧ್ವಜ, ಲಾಂಚನಗಳನ್ನು ಬಳಸುವುದು ರಾಷ್ಟ್ರ ಪುರುಷರ, ಕ್ರಾಂತಿಕಾರಿಗಳ ಅಪಮಾನವಾಗಿದೆ ಅದಕ್ಕಾಗಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ರಾಷ್ಟ್ರ ಧ್ವಜದ ವಿತರಣೆ ಮಾಡುವ ಅಂಗಡಿ, ಮಾರಾಟಗಾರರ ವಿರುದ್ಧ ಮತ್ತು ರಾಷ್ಟ್ರಧ್ವಜ ಸಂಹಿತೆಯ ವಿರುದ್ಧವಾದ ರೀತಿಯಲ್ಲಿ ರಾಷ್ಟ್ರ ಧ್ವಜವನ್ನು ಬಳಕೆ ಮಾಡುವ ಸಂಸ್ಥೆ ಮತ್ತು ವ್ಯಕ್ತಿಗಳ ವಿರುದ್ಧ ಕಠೋರ ಕಾನೂನು ಕಾರ್ಯಚರಣೆ ಮಾಡಬೇಕು.

ಈ ದೃಷ್ಟಿಯಿಂದ ಹಿಂದೂ ಜನಜಾಗೃತಿ ಸಮಿತಿಯ ಕೆಲವು ಬೇಡಿಕೆಗಳು :

೧. ಯಾವುದೇ ಕಾರಣಕ್ಕೂ ಎಲ್ಲಿಯೂ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ರಾಷ್ಟ್ರಧ್ವಜದ ಉತ್ಪಾದನೆ ಮತ್ತು ಮಾರಾಟ ಮಾಡದಂತೆ ಕ್ರಮ ತೆಗೆದುಕೊಳ್ಳಬೇಕು.
೨. ಯಾರಾದರೂ ಒಮ್ಮೆ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುತ್ತಿದ್ದಲ್ಲಿ ಅವರ ಮೇಲೆ ಹಾಗೆಯೇ ಧ್ವಜದ ಮಾಸ್ಕ ಧರಿಸುವವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

ಶ್ರೀ. ಮೋಹನ ಗೌಡ ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ
ಸಂಪರ್ಕ : 7204082609


Spread the love
  • Related Posts

    14 ನೇ ವಯೋಮಾನದ ಬಾಲಕರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ತೀರ್ಥೇಶ್ ಬೆಸ್ಟ್ ರೈಡರ್ ವೈಯಕ್ತಿಕ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ

    ಬೆಂಗಳೂರು: (ನ.13) ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮ ಖಂಡಿಗ ನಿವಾಸಿ ಶ್ರೀಮತಿ ಚೆನ್ನಮ್ಮ ರಾಮ್ಮಣ್ಣ ಗೌಡ ದಂಪತಿಗಳ ಮೊಮ್ಮಗ ಬಂಟ್ವಾಳ ತಾಲೂಕು ವಿಟ್ಲ ದೇವಸ್ಯ ನೀವಾಸಿ ಶ್ರೀಮತಿ ಮೀನಾಕ್ಷಿ ಚೆನ್ನಪ್ಪ ದಂಪತಿಗಳ ಪುತ್ರ ವಿಟ್ಲ ಪಿ.ಎಂ. ಶ್ರೀ.…

    Spread the love

    ಬಾರ್ಯ ಗ್ರಾಮದ ಮುಜ್ಜಾಳೆ – ಪೆರಿಯೊಟ್ಟು ರಸ್ತೆ ಅಭಿವೃದ್ಧಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಒದಗಿಸಿದ ರೂ.10 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣ ರಸ್ತೆ ನಿರ್ಮಾಣ

    ಬಾರ್ಯ : ಬಾರ್ಯ ಗ್ರಾಮದ ಮುಜ್ಜಾಳೆ -ಪೆರಿಯೊಟ್ಟು ಭಾಗದ ನಾಗರಿಕರ ಹಲವಾರು ವರ್ಷದ ಬಹುಬೇಡಿಕೆಯ ರಸ್ತೆ ಅಭಿವೃದ್ಧಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ನೀಡಿದ ಭರವಸೆಯಂತೆ ರೂ. 10 ಲಕ್ಷ ಅನುದಾನ ಒದಗಿಸಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡು ಸಂಚಾರಕ್ಕೆ ಸುಗಮವಾಗಿದೆ. ಶಾಸಕರಿಗೆ…

    Spread the love

    You Missed

    14 ನೇ ವಯೋಮಾನದ ಬಾಲಕರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ತೀರ್ಥೇಶ್ ಬೆಸ್ಟ್ ರೈಡರ್ ವೈಯಕ್ತಿಕ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ

    • By admin
    • November 13, 2025
    • 7 views
    14 ನೇ ವಯೋಮಾನದ ಬಾಲಕರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ತೀರ್ಥೇಶ್ ಬೆಸ್ಟ್ ರೈಡರ್ ವೈಯಕ್ತಿಕ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ

    ಬಾರ್ಯ ಗ್ರಾಮದ ಮುಜ್ಜಾಳೆ – ಪೆರಿಯೊಟ್ಟು ರಸ್ತೆ ಅಭಿವೃದ್ಧಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಒದಗಿಸಿದ ರೂ.10 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣ ರಸ್ತೆ ನಿರ್ಮಾಣ

    • By admin
    • November 12, 2025
    • 118 views
    ಬಾರ್ಯ ಗ್ರಾಮದ ಮುಜ್ಜಾಳೆ – ಪೆರಿಯೊಟ್ಟು ರಸ್ತೆ ಅಭಿವೃದ್ಧಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಒದಗಿಸಿದ ರೂ.10 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣ ರಸ್ತೆ ನಿರ್ಮಾಣ

    ಹದಗೆಟ್ಟ ರಸ್ತೆ ದುರಸ್ತಿ, ಕಾನರ್ಪದ ನವೀನ್ ರವರಿಂದ ಸ್ವಂತ ಖರ್ಚಿನಲ್ಲಿ ದುರಸ್ತಿ ಕಾರ್ಯ

    • By admin
    • November 11, 2025
    • 187 views
    ಹದಗೆಟ್ಟ ರಸ್ತೆ ದುರಸ್ತಿ, ಕಾನರ್ಪದ ನವೀನ್ ರವರಿಂದ ಸ್ವಂತ ಖರ್ಚಿನಲ್ಲಿ ದುರಸ್ತಿ ಕಾರ್ಯ

    ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸುವ ಕ್ರೀಡಾ ಪ್ರತಿಭೆಗಳಿಗೆ ಶಾಸಕ ಹರೀಶ್ ಪೂಂಜಾರಿಂದ ಕ್ರೀಡಾ ಸಮವಸ್ತ್ರ ವಿತರಣೆ

    • By admin
    • November 10, 2025
    • 66 views
    ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸುವ ಕ್ರೀಡಾ ಪ್ರತಿಭೆಗಳಿಗೆ ಶಾಸಕ ಹರೀಶ್ ಪೂಂಜಾರಿಂದ ಕ್ರೀಡಾ ಸಮವಸ್ತ್ರ ವಿತರಣೆ

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವೆಂಬರ್ 15ರಿಂದ 19ರವರೆಗೆ ಲಕ್ಷದೀಪೋತ್ಸವ ಸಂಭ್ರಮ

    • By admin
    • November 9, 2025
    • 242 views
    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವೆಂಬರ್ 15ರಿಂದ 19ರವರೆಗೆ ಲಕ್ಷದೀಪೋತ್ಸವ ಸಂಭ್ರಮ

    ಪುತ್ತೂರಿನ ಶಾಸಕರ ಮನವಿ ಮೇರೆಗೆ ದೇವಸ್ಥಾನ, ದೈವಸ್ಥಾನ ಹಾಗೂ ಸಂಘ ಸಂಸ್ಥೆಗಳ ಜಾಗವನ್ನು ಸಕ್ರಮಗೊಳಿಸಲು ಕಂದಾಯ ಸಚಿವರಿಂದ ಆದೇಶ

    • By admin
    • November 5, 2025
    • 194 views
    ಪುತ್ತೂರಿನ ಶಾಸಕರ ಮನವಿ ಮೇರೆಗೆ ದೇವಸ್ಥಾನ, ದೈವಸ್ಥಾನ ಹಾಗೂ ಸಂಘ ಸಂಸ್ಥೆಗಳ ಜಾಗವನ್ನು ಸಕ್ರಮಗೊಳಿಸಲು ಕಂದಾಯ ಸಚಿವರಿಂದ ಆದೇಶ