ಬೆಂಗಳೂರಿನಲ್ಲಿ ಯುವಕರ ಪುಂಡಾಟ! ಕಾರ್ಯನಿರತ ಪತ್ರಕರ್ತರ ಮೇಲೂ ಹಲ್ಲೆ! ಶಾಸಕರ ಮನೆ, ಪೋಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು!

ಬೆಂಗಳೂರು: ಬೆಂಗಳೂರಿನಲ್ಲಿ ಮನೆ ಮನೆಗೆ ನುಗ್ಗಿ ಮುಸ್ಲಿಂ ಯುವಕರು ದಾಂಧಲೆ ನಡೆಸುತ್ತಿದ್ದು, ಪರಿಸ್ಥಿತಿ ಕೈ ಮೀರಿ ಹೋಗಿದೆ.

ಶಾಸಕ ಅಖಂಡ ಶ್ರೀನಿವಾಸ್ ಶೆಟ್ಟಿ ಅವರ ಮನೆಗೆ ಬೆಂಕಿ ಹಚ್ಚಲಾಗಿದ್ದು, ಖಾಸಗಿ ವಾಹಿನಿಯ ವಾಹನ ಜಖಂ ಗೊಳಿಸಿ ವರದಿಗೆ ತೆರಳಿದ ಪತ್ರಕರ್ತರ ಮೇಲೆ ಹಲ್ಲೆ ಮಾಡಿ ಕ್ಯಾಮರಾ ಪುಡಿಗೈದು, ಮನೆ ಮನೆಗೆ ನುಗ್ಗಿ ಮುಸ್ಲಿಂ ಸಮುದಾಯದ ಯುವಕರು ಪುಂಡಾಟ ನಡೆಸಿದ್ದು, ಕಾವಲ ಬೈರಸಂದ್ರ ಹಾಗೂ ಕೆಜಿ ಹಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪ್ರವಾದಿ ಪೈಗಂಬರ್ ವಿರುದ್ದ ಫೇಸ್​ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಲಾಗಿದೆ ಎಂದು ಆರೋಪಿಸಿ ಶಾಸಕ ಅಖಂಡ ಶ್ರೀನಿವಾಸರಾಜು ಅವರ ಮನೆ, ಕಚೇರಿಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ಬೆಂಗಳೂರಿನ ಕಾಲವ್ ಬೈರಸಂದ್ರದಲ್ಲಿ ನಡೆದಿದೆ, ಹದಿನೈದಕ್ಕೆ ಹೆಚ್ಚು ಕಿಡಿಗೇಡಿಗಳಿಂದ ಶಾಸಕರ ಮನೆ ಮೇಲೆ ದಾಳಿ ನಡೆಸಲಾಗಿದೆ.

ಶಾಸಕ ಅಖಂಡ ಶ್ರೀನಿವಾಸರಾಜು ಅವರ ಸೋದರಳಿಯ ನವೀನ್ ಫೇಸ್​ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆಂದು ಆರೋಪಿಸಿ ನೂರಾರು ಜನರು ನಗರದ ಕೆಜಿ ಹಳ್ಳಿ ಪೋಲೀಸ್ ಠಾಣೆ ಎದುರು ಜಮಾಯಿಸಿದ್ದು ನವೀನ್ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಪುಲಕೇಶಿನಗರದ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು ಪರಿಸ್ಥಿತಿ ಉದ್ವಿಗ್ನವಾಗಿದೆ, ಸಧ್ಯ ಜನರನ್ನು ಸಮಾಧಾನಪಡಿಸಲು ಶಾಸಕ ಜಮೀರ್ ಅಹಮದ್ ಖಾನ್ ಸಹ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.

ಖಾತೆ ಹ್ಯಾಕ್‌?
ನನ್ನ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗಿದೆ. ಯಾರೋ ದುಷ್ಕರ್ಮಿಗಳು ನನ್ನ ಖಾತೆ ಹ್ಯಾಕ್‌ ಮಾಡಿ ಕೆಟ್ಟ ಪೋಸ್ಟ್‌ ಹಾಕಿದ್ದಾರೆ. ದುಷ್ಕರ್ಮಿಗಳ ವಿರುದ್ಧ ನಾನು ದೂರು ದಾಖಲಿಸುತ್ತೇನೆ ಎಂದು ಶಾಸಕರ ಸಂಬಂಧಿ ನವೀನ್‌ ಪೋಸ್ಟ್‌ ಮಾಡಿದ್ದಾರೆ.

ಇನ್ನು ಪರಿಸ್ಥಿತಿ ನಿಯಂತ್ರಿಸಲು ಇದಾಗಲೇ ಪೊಲೀಸ್ ಠಾಣಾ ಆವರಣದಲ್ಲಿ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದ್ದು ಪೂರ್ವ ವಿಭಾಗದ ಎಲ್ಲಾ ಪೋಲೀಸ್ ಇನ್ಸ್​ಪೆಕ್ಟರ್​ ಹಾಗೂ ಸಿಬ್ಬಂದಿಗಳು ತಕ್ಷಣ ಕೆಜಿ ಹಳ್ಳಿ ಠಾಣೆಗೆ ಆಗಮಿಸಲು ಹಿರಿಯ ಪೋಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ.

ಆರೋಪಿ ಬಂಧನ?
ಫೇಸ್‌ಬುಕ್‌ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಕಿಡಿಗೇಡಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Spread the love
  • Related Posts

    “ಶಾಂತಿಯ ಕಡೆ ಹೆಜ್ಜೆ: ಯುರೋಪಿಯನ್ ಯೂನಿಯನ್ ಕಡೆ ಇರಾನ್ ಕಣ್ಣೋಟ”

    ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯಲ್ಲಿ ಮಹತ್ವದ ತಿರುವು ಕಂಡುಬಂದಿದ್ದು, ಇರಾನ್ ಇದೀಗ ಯುದ್ಧ ಅಂತ್ಯಗೊಳಿಸಲು ಸನ್ನದ್ಧವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಶಾಂತಿ ಮಾತುಕತೆಗಾಗಿ ಇರಾನ್ ಯುರೋಪಿಯನ್ ಯೂನಿಯನ್ ನೆರವಿಗೆ ಮೊರೆಹೋಗಿರುವುದು ಜಾಗತಿಕ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇರಾನ್ ಅಧಿಕಾರಿಗಳು ಯುದ್ಧ…

    Spread the love

    ಬಸ್ ನಿಂದ ಬಿದ್ದು ಗಾಯಗೊಂಡ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ ಶಾಸಕ ಹರೀಶ್ ಪೂಂಜಾ

    ಬೆಳ್ತಂಗಡಿ: ತಾಲೂಕಿನ ರೇಷ್ಮೆರೋಡ್ ಬಳಿ ಚಲಿಸುತ್ತಿದ್ದ ಕೆ.ಎಸ್‌.ಆರ್.ಟಿ.ಸಿ ಬಸ್ಸಿನಿಂದ ಅಕಸ್ಮಿಕವಾಗಿ ಬಿದ್ದು ಗಾಯಗೊಂಡಿರುವ ವಿದ್ಯಾರ್ಥಿನಿಯರ ಆರೋಗ್ಯವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿ ಕುಟುಂಬ ಸದಸ್ಯರಿಗೆ ಹಾಗೂ ಗಾಯಳು ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದರು. Spread the love

    Spread the love

    You Missed

    “ಶಾಂತಿಯ ಕಡೆ ಹೆಜ್ಜೆ: ಯುರೋಪಿಯನ್ ಯೂನಿಯನ್ ಕಡೆ ಇರಾನ್ ಕಣ್ಣೋಟ”

    • By admin
    • April 1, 2026
    • 17 views
    “ಶಾಂತಿಯ ಕಡೆ ಹೆಜ್ಜೆ: ಯುರೋಪಿಯನ್ ಯೂನಿಯನ್ ಕಡೆ ಇರಾನ್ ಕಣ್ಣೋಟ”

    ಹೊಸ ಆರ್ಥಿಕ ವರ್ಷದ ಪ್ರಾರಂಭ, ಇಂದಿನಿಂದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ

    • By admin
    • April 1, 2026
    • 26 views
    ಹೊಸ ಆರ್ಥಿಕ ವರ್ಷದ ಪ್ರಾರಂಭ, ಇಂದಿನಿಂದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ

    ಬಸ್ ನಿಂದ ಬಿದ್ದು ಗಾಯಗೊಂಡ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ ಶಾಸಕ ಹರೀಶ್ ಪೂಂಜಾ

    • By admin
    • March 31, 2026
    • 189 views
    ಬಸ್ ನಿಂದ ಬಿದ್ದು ಗಾಯಗೊಂಡ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ ಶಾಸಕ ಹರೀಶ್ ಪೂಂಜಾ

    ವಿದ್ಯುತ್ ಶಾಕ್ ಮೂಲಕ ಕಾರ್ಮಿಕ ಆತ್ಮಹತ್ಯೆ – ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

    • By admin
    • March 31, 2026
    • 45 views
    ವಿದ್ಯುತ್ ಶಾಕ್ ಮೂಲಕ ಕಾರ್ಮಿಕ ಆತ್ಮಹತ್ಯೆ – ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

    ಹಾಸನದ ‘ರುಚಿ ಲೋಕ’: ನೂರಾರು ಕುಟುಂಬಗಳ ಬದುಕಿಗೆ ಬೆಳಕಾದ 76 ಮಳಿಗೆಗಳ ಫುಡ್ ಕೋರ್ಟ್

    • By admin
    • March 31, 2026
    • 61 views
    ಹಾಸನದ ‘ರುಚಿ ಲೋಕ’: ನೂರಾರು ಕುಟುಂಬಗಳ ಬದುಕಿಗೆ ಬೆಳಕಾದ 76 ಮಳಿಗೆಗಳ ಫುಡ್ ಕೋರ್ಟ್

    ಸರಕಾರಿ ಬಸ್ ನಿಂದ ಎಸೆಯಲ್ಪಟ್ಟ ವಿದ್ಯಾರ್ಥಿನಿಯರು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

    • By admin
    • March 31, 2026
    • 265 views
    ಸರಕಾರಿ ಬಸ್ ನಿಂದ ಎಸೆಯಲ್ಪಟ್ಟ ವಿದ್ಯಾರ್ಥಿನಿಯರು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು