ಮಹಾರಾಷ್ಟ್ರ: ಸಾಮಾನ್ಯವಾಗಿ ಮನುಷ್ಯರು ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವುದು ತಿಳಿದ ಸಂಗತಿ. ಆದರೆ ಇಲ್ಲೊಬ್ಬ ತನ್ನ ಎಮ್ಮೆಯ ಬರ್ತಡೇ ಪಾರ್ಟಿಯನ್ನು ಆಚರಿಸಿದ್ದಾನೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಿರಣ್ ಎನ್ನವವರು ಎಮ್ಮೆ ಹುಟ್ಟುಹಬ್ಬವನ್ನು ಬಂಧುಗಳೊಂದಿಗೆ ಆಚರಿಸಿದ್ದಾರೆ. ಈಗ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು ಪಾರ್ಟಿಗೆ ಬಂದವರು ಮಾಸ್ಕ್ ಧರಿಸಿಲ್ಲ ಜತೆಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲಿಲ್ಲ ಎಂದು ಎಮ್ಮೆಯ ಮಾಲೀಕ ಕಿರಣ್ ವಿರುದ್ಧ ದೂರು ದಾಖಲಾಗಿದೆ.
ಸಾಂಕ್ರಾಮಿಕ ಕಾಯ್ದೆಯಡಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.