ಮಂಗಳೂರು: ಕಟೀಲಿನ ಕೊಂಡೇಲದ ಕ್ಯಾನ್ಸರ್ ಸಂತ್ರಸ್ಥೆಯ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಬೆಳ್ತಂಗಡಿಯ ಖುಷಿ ಆಂಬ್ಯುಲೆನ್ಸ್ ಸಂಸ್ಥೆಯ ಮಾಲಿಕರು
ಇತ್ತೀಚಿಗೆ ಕಟೀಲಿನ ರಾಮ್ ಸೇನಾ ಕೇಸರಿ ಘಟಕದ ಕಾರ್ಯಕರ್ತರೊಬ್ಬರು ಕೊಂಡೇಲದ ಬಡಮಹಿಳೆಯೊಬ್ಬರ ಕರುಣಾಜನಕ ಪರಿಸ್ಥಿತಿಯ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಇದನ್ನು ಗಮನಿಸಿದ ಬೆಳ್ತಂಗಡಿ ತಾಲೂಕಿನ ಖುಷಿ ಆಂಬ್ಯುಲೆನ್ಸ್ ಸಂಸ್ಥೆಯ ಮಾಲಿಕರಾದ ಅಭಿಲಾಷ್ M ಬೆಳ್ತಂಗಡಿ ಇವರು ಸಂತ್ರಸ್ತೆಗೆ ಬೇಕಾದ ಆಂಬ್ಯುಲೆನ್ಸ್ ಸೇವೆಯನ್ನು ಆಜೀವ ಪರ್ಯಂತ ಉಚಿತವಾಗಿ ನೀಡುವುದಾಗಿ ಘೋಷಿಸಿ ಮಾನವೀಯತೆ ಮೆರೆದಿದ್ದಾರೆ.
ಮೂಡಬಿದ್ರೆಯಿಂದ ಮಂಗಳೂರಿಗೆ ವಾರಕ್ಕೊಂದು ಬಾರಿ ರೋಗಿಯು ಹೋಗಿ ಬರಬೇಕಾಗಿದ್ದು ದೂರದ ಊರಿನ ಆಂಬ್ಯುಲೆನ್ಸ್ ಸಂಸ್ಥೆಯೊಂದು ಇದರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಕೊರೋನದ ಕಾರಣ ನೀಡಿ ಸೇವೆ ನೀಡಲು ಹಿಂದೆ ಮುಂದೆ ನೋಡುವ ಆಂಬ್ಯುಲೆನ್ಸ್ ಡ್ರೈವರ್ ಗಳ ನಡುವೆ ಖುಷಿ ಆಂಬ್ಯುಲೆನ್ಸ್ ಸಂಸ್ಥೆಯ ಈ ನಡೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.