ಬೆಳ್ತಂಗಡಿ ತಾಲೂಕಿನಾದ್ಯಂತ ಕಾಡಾನೆ ಸಂಚಾರ ಜನರಲ್ಲಿ ಮೂಡಿದ ಆತಂಕ

ಬೆಳ್ತಂಗಡಿ: ಸೋಮವಾರ ರಾತ್ರಿ ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆಗಳು ಸಂಚರಿಸಿದ್ದು ಜನರಲ್ಲಿ ಭೀತಿಯ ವಾತಾವರಣ ಏರ್ಪಟ್ಟಿದೆ.
ಭಾನುವಾರ ತಡರಾತ್ರಿ ಕಡಿರುದ್ಯಾವರ ಗ್ರಾಮದ ಪಣಿಕಲ್ಲು ಪರಿಸರದಲ್ಲಿ ಒಂಟಿ ಸಲಗ ಕೃಷ್ಣ ಭಟ್ ಅವರ ಕೃಷಿ ತೋಟದಲ್ಲಿ ಹಾನಿ ಉಂಟುಮಾಡಿತ್ತು. ಬಳಿಕ ಸೋಮವಾರ ಇದೇ ಗ್ರಾಮದ ಕಿನ್ಯಡ್ಕ ಹಾಗೂ ಇನ್ನಿತರ ಪರಿಸರಗಳಲ್ಲಿ ಓಡಾಟ ನಡೆಸಿದೆ.
ಇದಲ್ಲದೆ 3 ಆನೆಗಳ ಹಿಂಡೊಂದು ನೆರಿಯ ಚಿಬಿದ್ರೆ,ತೋಟತ್ತಾಡಿ, ಚಾರ್ಮಾಡಿ ಗ್ರಾಮಗಳಲ್ಲಿ ಸೋಮವಾರ ಸಂಜೆ ಬಳಿಕ ಸಂಚಾರ ನಡೆಸಿದೆ.

ನೆರಿಯದ ಪರ್ಪಳ ಪ್ರದೇಶದಿಂದ ಬಂದಿದ್ದ ಹಿಂಡು ಅಣಿಯೂರು ಶಾಲೆ, ಬಯಲು,ಬಸ್ತಿ ಇತರ ಕಡೆ ಸಂಚರಿಸಿದೆ.
ಈ ವೇಳೆ ಸ್ಥಳೀಯರು ಆನೆಗಳನ್ನು ಓಡಿಸಿದ್ದು ಇದರಿಂದ ಆನೆಗಳ ಹಿಂಡು ಚದುರಿದ್ದು ಇದರಲ್ಲಿ ಒಂದು ಆನೆ ತೋಟತ್ತಾಡಿ, ಬೆಂದ್ರಾಳ ಕಡೆ ಸಂಚರಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಮೀಪದ ತೋಟತ್ತಾಡಿ ಶಾಲೆ,ಕಜೆ, ದರ್ಕಾಸು ಮೊದಲಾದ ಕಡೆಗಳಲ್ಲಿ ಒಂಟಿ ಸಲಗ ಕಂಡುಬಂದಿದ್ದು ಚಿಬಿದ್ರೆಯತ್ತ ತೆರಳಿರುವ ಕುರಿತು ಹೇಳಲಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ಇಲ್ಲಿನ ಗ್ರಾಮಗಳಲ್ಲಿ ಆನೆಗಳ ಹಾವಳಿ ಸ್ವಲ್ಪ ಕಡಿಮೆಯಾಗಿತ್ತು.ಆದರೆ ಈಗ ಒಂಟಿ ಸಲಗ ಸಹಿತ ಆನೆಗಳ ಹಿಂಡು ಕೂಡ ಕಂಡು ಬಂದಿರುವುದು ಸ್ಥಳೀಯರನ್ನು ಆತಂಕಕ್ಕೆ ತಳ್ಳಿದೆ. ಸೋಲಾರ್ ಬೇಲಿ, ಆನೆ ಕಂದಕ ಇತ್ಯಾದಿ ಇದ್ದರೂ ಇವುಗಳ ನಿರ್ವಹಣೆ ಇಲ್ಲದ ಕಾರಣ ಆನೆಗಳು ಒಂದೆಡೆಯಿಂದ ಇನ್ನೊಂದಡೆಗೆ ಸುಲಭದಲ್ಲಿ ಸಂಚರಿಸುವಂತಾಗಿದೆ. ಜನರಲ್ಲಿ ಭೀತಿಯ ವಾತಾವರಣದ ಜತೆ ಸಾಕಷ್ಟು ಕೃಷಿ ಹಾನಿ ಉಂಟಾಗುತ್ತಿದೆ ಎಂದು ಸ್ಥಳೀಯ ಕೃಷಿಕರು ಹೇಳಿದ್ದಾರೆ.

ಇದೀಗ ಕೃಷಿಗೆ ನೀರುಣಿಸುವ ಸಮಯವಾಗಿದ್ದು ರಾತ್ರಿ ಸಮಯ ನೀರಾವರಿ ವ್ಯವಸ್ಥೆಗೆ ತೋಟಗಳಿಗೆ ತೆರಳಬೇಕಾಗುತ್ತದೆ ಸಂಜೆಯಾಗುತ್ತಿದ್ದಂತೆ ಆನೆಗಳು ಅಲ್ಲಲ್ಲಿ ಕಂಡು ಬರುತ್ತಿರುವುದರಿಂದ ಈ ಭಾಗದ ಜನರು ತೋಟಗಳಿಗೆ ತೆರಳಲು ಭಯ ಪಡುವಂತಾಗಿದೆ. ಈ ಭಾಗದಲ್ಲಿ ಸುಮಾರು ಹತ್ತಕ್ಕಿಂತ ಅಧಿಕ ಆನೆಗಳಿರುವ ಶಂಕೆ ಇದೆ ಕಾಡಾನೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.

Spread the love
  • Related Posts

    ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ವಿಧಿವಶ

    ಬೆಂಗಳೂರು: ತೀವ್ರ ಉಸಿರಾಟದ ಸಮಸ್ಯೆಯಿಂದ ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ (ಜು.18) ನಿಧನ ಹೊಂದಿದರು, ಅವರಿಗೆ 85 ವರ್ಷ ವಯಸ್ಸಾಗಿತ್ತು. ಚೆನ್ನಮ್ಮ ಅವರಿಗೆ ಕಳೆದ ಮೂರು ದಿನಗಳಿಂದ…

    Spread the love

    ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜು.18ರಂದು ರಜೆ ಘೋಷಣೆ

    ಮಂಗಳೂರು, ಜು.17: ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ…

    Spread the love

    You Missed

    ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಯೆಲ್ಲೊ – ಅಲರ್ಟ್ ಘೋಷಣೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ

    • By admin
    • July 22, 2026
    • 2 views
    ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಯೆಲ್ಲೊ – ಅಲರ್ಟ್ ಘೋಷಣೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ

    ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ವಿಧಿವಶ

    • By admin
    • July 18, 2026
    • 7 views
    ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ವಿಧಿವಶ

    ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜು.18ರಂದು ರಜೆ ಘೋಷಣೆ

    • By admin
    • July 17, 2026
    • 9 views
    ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜು.18ರಂದು ರಜೆ ಘೋಷಣೆ

    ಮಹಿಳಾ ಸಬಲೀಕರಣ ಮತ್ತು ಸಮಾಜ ಸೇವೆಗೆ ಜಾಗತಿಕ ಮನ್ನಣೆ: ಹೇಮಾವತಿ ವಿ. ಹೆಗ್ಗಡೆಗೆ ಗೌರವ ಡಾಕ್ಟರೇಟ್

    • By admin
    • July 17, 2026
    • 11 views
    ಮಹಿಳಾ ಸಬಲೀಕರಣ ಮತ್ತು ಸಮಾಜ ಸೇವೆಗೆ ಜಾಗತಿಕ ಮನ್ನಣೆ:  ಹೇಮಾವತಿ ವಿ. ಹೆಗ್ಗಡೆಗೆ ಗೌರವ ಡಾಕ್ಟರೇಟ್

    ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ನೀಟ್ 2026ರಲ್ಲಿ ಐತಿಹಾಸಿಕ ಸಾಧನೆ – ಅಖಿಲ ಭಾರತ ಮಟ್ಟದಲ್ಲಿ 271ನೇ ರ್ಯಾಂಕ್

    • By admin
    • July 17, 2026
    • 10 views
    ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ನೀಟ್ 2026ರಲ್ಲಿ ಐತಿಹಾಸಿಕ ಸಾಧನೆ – ಅಖಿಲ ಭಾರತ ಮಟ್ಟದಲ್ಲಿ 271ನೇ ರ್ಯಾಂಕ್

    ಚಿರಂಜೀವಿ ಯುವಕ ಮಂಡಲ(ರಿ), ಕಾನರ್ಪ ಇದರ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • July 16, 2026
    • 16 views
    ಚಿರಂಜೀವಿ ಯುವಕ ಮಂಡಲ(ರಿ), ಕಾನರ್ಪ ಇದರ 35ನೇ ವರ್ಷದ  ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ