ಚಾರ್ಮಾಡಿ ಘಾಟ್ ನಲ್ಲಿ ಬಸ್ ಚಲಾಯಿಸುತ್ತಿದ್ದ ವೇಳೆ ಚಾಲಕ ಅಸ್ವಸ್ಥ: ಅನಾರೋಗ್ಯದ ನಡುವೆಯೂ ಸಮಯಪ್ರಜ್ಞೆ ಮರೆದು 40 ಪ್ರಯಾಣಿಕರ ಜೀವ ಉಳಿಸಿದ ಚಾಲಕ

ಬೆಳ್ತಂಗಡಿ: ಚಾರ್ಮಾಡಿ ಘಾಟ್ ರಸ್ತೆಯ 3ನೇ ತಿರುವಿನಲ್ಲಿ ಸರಕಾರಿ ಬಸ್ಸೊಂದರ ಚಾಲಕ ಹಠಾತ್ ಅಸ್ವಸ್ಥಗೊಂಡ ಕಾರಣ ಬಸ್ ಚರಂಡಿಗೆ ವಾಲಿನಿಂತ ಘಟನೆ ನಿನ್ನೆ ಸಂಜೆ ವೇಳೆ ನಡೆದಿದೆ.

ಈ ವೇಳೆ ಬಸ್ಸಿನಲ್ಲಿ ಸುಮಾರು 40 ರಷ್ಟು ಪ್ರಯಾಣಿಕರಿದ್ದು, ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ.

READ ALSO

ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಎಚ್ಚೆತ್ತುಕೊಂಡ ಬಸ್ ಚಾಲಕ ಬಸ್ಸನ್ನು ಪಕ್ಕಕ್ಕೆ ಸರಿಸಿ ನಿಲ್ಲಿಸಿದ್ದರಿಂದ ಬಸ್ಸು ಚರಂಡಿಗೆ ವಾಲಿ ನಿಂತಿದೆ. ಬಸ್ ಮತ್ತೂ ಮುಂದಕ್ಕೆ ಚಲಿಸಿದ್ದಲ್ಲಿ ಅನಾಹುತ ಸಂಭವಿಸುತ್ತಿತ್ತು. ಅನಾರೋಗ್ಯದ ನಡುವೆಯೂ ಬಸ್ ಚಾಲಕ ಸಮಯ ಪ್ರಜ್ಞೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಅಪಘಾತದ ವಿಚಾರವನ್ನು ತಿಳಿದು ಸ್ಥಳೀಯ ನಾಗರೀಕರು ಚಾಲಕನನ್ನು ತಕ್ಷಣ ಉಜಿರೆಯ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.