ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಬಂಡೆ ಕಲ್ಲು ಕುಸಿದ ಪರಿಣಾಮ ಸಂಚಾರದಲ್ಲಿ ವ್ಯತ್ಯಯ!

ಮಂಗಳೂರು: ಕರಾವಳಿಯ ಹಲವೆಡೆ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಚಾರ್ಮಾಡಿ ಘಾಟ್ ರಸ್ತೆಯ ತಿರುವುಗಳ ರಸ್ತೆಗೆ ಬಂಡೆಗಳು ಉರುಳಿ ಬಿದ್ದಿವೆ.

ದಕ್ಷಿಣಕನ್ನಡ–ಚಿಕ್ಕಮಗಳೂರು ಜಿಲ್ಲೆಯ ಸಂಪರ್ಕ ಸೇತುವಾಗಿರುವ ಚಾರ್ಮಾಡಿ ಘಾಟ್ ನ 2ನೇ ಮತ್ತು 3 ನೇ ತಿರುವಿನ ಮಧ್ಯೆ ಭಾರಿ ಗಾತ್ರದ ಬಂಡೆಗಳು ಕುಸಿದು ಬಿದ್ದ ಘಟನೆ ವರದಿಯಾಗಿದೆ.

READ ALSO

ಇಂದು ಸಂಜೆ ಸುಮಾರು 6.20ರ ಹೊತ್ತಿಗೆ ಬೃಹದಾಕಾರದ ಎರಡು ಬಂಡೆಗಳು ಕುಸಿದಿದ್ದು, ಸದ್ಯ ಒಂದು ವಾಹನ ಸಾಗುವಷ್ಟು ತೆರವು ಮಾಡಲಾಗಿದೆ.

ಇದರಿಂದಾಗಿ ಕೆಲಗಂಟೆಗಳ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು.

ರಾತ್ರಿ7 ಗಂಟೆಯ ನಂತರ ಚಾರ್ಮಾಡಿ ಕಣಿವೆ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ ಆದೇಶ ಜಾರಿಯಲ್ಲಿದ್ದು, ಬಳಿಕ ವಾಹನ ಸಂಚಾರ ತಡೆಯಲಾಗಿದೆ.

ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ. ರಾತ್ರಿ ವೇಳೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ ಇರುವುದರಿಂದ ರಾತ್ರಿ ತೆರವು ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.