ಚಿರಂಜೀವಿ ಯುವಕ ಮಂಡಲ ಹಾಗೂ ಶ್ರೀ ದುರ್ಗಾಶಕ್ತಿ ಮಹಿಳಾ ಸಂಘದಿಂದ 33ನೇ ವರ್ಮೊಷದ ಸರು ಕುಡಿಕೆ ಉತ್ಸವ ಹಾಗೂ ಗ್ರಾಮೀಣ ಕ್ರೀಡಾಕೂಟ ಮತ್ತು ಶ್ರೀ ಕೃಷ್ಣ ಪೂಜೆ ಸಂಭ್ರಮ

ಕಡಿರುದ್ಯಾವರ: ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪದಲ್ಲಿ ಚಿರಂಜೀವಿ ಯುವಕ ಮಂಡಲ (ರಿ), ಶ್ರೀ ದುರ್ಗಾ ಶಕ್ತಿ ಮಹಿಳಾ ಸಂಘ ಕಾನರ್ಪ ಕಡಿರುದ್ಯಾವರ ಇದರ ವತಿಯಿಂದ 33ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಕಾರ್ಯಕ್ರಮವನ್ನು ಚಿರಂಜೀವಿ ಯುವಕ ಮಂಡಲ ವಠಾರದಲ್ಲಿ ನಡೆಸಲಾಯಿತು. ಶ್ರೀ ಕೃಷ್ಣ ಪೂಜೆ ಹಾಗೂ ಮೊಸರು ಕುಡಿಕೆ ಉತ್ಸವ ಹಾಗೂ ಗ್ರಾಮೀಣ ಕ್ರೀಡಾಕೂಟವನ್ನು ವಿಜಯ ಪೂಜಾರಿ ಕಾಜೂರು ರವರು ಉದ್ಘಾಟಿಸಿ ಶುಭಹಾರೈಸಿದರು.

ಶ್ರೀ ಕೃಷ್ಣ ವೇಷಧಾರಿ ಪುಟಾಣಿ ಮಕ್ಕಳು

ಸಮಾರೋಪ ಸಮಾರಂಭದಲ್ಲಿ ಗಣಪತಿ ಭಟ್ ಕುಳಮರ್ವ ಮಾತನಾಡುತ್ತಾ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಮಥುರಾ ಕೃಷ್ಣನ ಜನ್ಮಸ್ಥಳ. ಕೃಷ್ಣನು ಹುಟ್ಟಿದೊಡನೆ ತಂದೆ ವಸುದೇವ ಅವನನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನ ನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ. ಶ್ರೀ ಕೃಷ್ಣ ಭಾದ್ರಪದ ಕೃಷ್ಣ ಅಷ್ಟಮಿಯಂದು ಮಥುರಾ ಊರಿನ ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ 8ನೇ ಮಗನಾಗಿ ಜನಿಸಿದನು. ಶ್ರೀ ಕೃಷ್ಣ ಜನ್ಮಾಷ್ಟಮಿ ಕೇವಲ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ ವೈದೀಕ ಆಚರಣೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು ಯುವ ಪೀಳಿಗೆಗೆ ಶ್ರೀ ಕೃಷ್ಣನ ಆದರ್ಶ ತಿಳಿಸುವ ಕೆಲಸವನ್ನು ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ಚಿರಂಜೀವಿ ಯುವಕ ಮಂಡಲ ನಿರಂತರ 33ವರ್ಷಗಳಿಂದ ಇಂತಹ ಕಾರ್ಯಕ್ರಮಗಳ ಜೊತೆಗೆ ವೈದೀಕ ಸ್ಪರ್ಶ ನೀಡುವುದು ಬಹಳ ಸಂತೋಷಕರ ಹೀಗೆ ನಿರಂತರವಾಗಿ ತಮ್ಮ ಕಾರ್ಯ ಮುಂದುವರೆಯಲಿ ಎಂದು ಶುಭ ಹಾರೈಸಿದರು.

ಜಾರುಕಂಬ ಸ್ಪರ್ಧೆ

ಸಾಧಕರ ಸನ್ಮಾನ

ಸೈನಿಕರ ಹೆಸರಿನಲ್ಲಿ ಕಾರ್ಗಿಲ್ ವನ ನಿರ್ಮಾಣ ಮಾಡಿ ಕಾರ್ಗಿಲ್ ಹುತಾತ್ಮ ಯೋಧರ ನೆನಪಿನಲ್ಲಿ ವಿವಿಧ ಪ್ರಭೇದಗಳ 527 ಗಿಡನಾಟಿ ಮಾಡಿ ಪಾಲನೆ ಪೋಷಣೆ ಮಾಡುತ್ತಿರುವ ಸಚಿನ್ ಬಿಢೆ ಮುಂಡಾಜೆ ಹಾಗೂ ಸತತವಾಗಿ ಶೇಕಡಾ 100% ಫಲಿತಾಂಶದೊಂದಿಗೆ ಉತ್ತಮ ವಾತಾವರಣ ಕಲ್ಪಿಸಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಪ್ರೌಢಶಾಲೆ ಮಿತ್ತಭಾಗಿಲು ಇವುಗಳ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀನಿವಾಸ ಗೌಡ ಬೆಳಾಲು ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಅನಂತ ಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲು, ಮೋಹನ್ ಬಂಗೇರ ಕಾರಿಂಜ ಆಡಳಿತಾಧಿಕಾರಿಗಳು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೊಲ್ಲಿ, ಗೋಪಾಲಕೃಷ್ಣ ಸ.ಪ್ರೌ.ಶಾಲೆ ಮಿತ್ತಬಾಗಿಲು, ಸಚಿನ್ ಬಿಢೆ ಮುಂಡಾಜೆ, ರತ್ನಾವತಿ ಬಾಲಕೃಷ್ಣ ಅಧ್ಯಕ್ಷರು ಗ್ರಾ.ಪಂ ಕಡಿರುದ್ಯಾವರ, ದಾಜಮ್ಮ ಅಧ್ಯಕ್ಷರು ಶ್ರೀ ದುರ್ಗಾ ಶಕ್ತಿ ಮಹಿಳಾ ಸಂಘ, ಯುವಕ ಮಂಡಲದ ಅಧ್ಯಕ್ಷರಾದ ಜರ್ನಾದನ ಕಾನರ್ಪ, ಬಾಲಕೃಷ್ಣಗೌಡ, ರಾಮಚಂದ್ರ ಗೌಡ, ಜಯರಾಜ್ ಸಾಲಿಯಾನ್, ಹರ್ಷನಾರಾಯಣ ಭಟ್, ರಾಘವೇಂದ್ರ ಭಟ್, ರವೀಂದ್ರ ಪೂಜಾರಿ, ಹಾಗೂ ಯುವಕ ಮಂಡಲದ ಸದಸ್ಯರು ಪಾಲ್ಗೊಂಡಿದ್ದರು.

Spread the love
  • Related Posts

    2024ರಲ್ಲಿ ಪೂಜಿಸಲ್ಪಟ್ಟ ಗಣಪ

    2024ರಲ್ಲಿ ವಿವಿಧೆಡೆ ಸಂಭ್ರಮದಿಂದ ಪೂಜಿಸಲ್ಪಟ್ಟ ಗಣಪ 1.ಸೌತಡ್ಕ ಮಹಾಗಣಪತಿ ವಿಶೇಷ ಅಲಂಕಾರದಲ್ಲಿ 2.ಶ್ರೀ ಅರ್ಧನಾರೀಶ್ವರ ದೇವಸ್ಥಾನ ಇಂದಬೆಟ್ಟುವಿನಲ್ಲಿ ಪೂಜಿಸಲ್ಪಟ್ಟ ಗಣಪ 3.ಬೆಳ್ತಂಗಡಿಯ ಲಾಯಿಲಾ ದಲ್ಲಿ ಪೂಜಿಸಲ್ಪಟ್ಟ ಬಲಮುರಿ ಗಣಪ 4. ಉಜಿರೆಯ ಸಿದ್ದವನ ಗುರುಕುಲದಲ್ಲಿ ಪೂಜಿಸಲ್ಪಟ್ಟ ಗಣಪ 5.ಪಡಂಗಡಿಯಲ್ಲಿ ಪೂಜಿಸಲ್ಪಟ್ಟ ಗಣಪ…

    Spread the love

    ಗಣಪನಿಗೆ 20 ಕೆಜಿ ಚಿನ್ನದ ಕಿರೀಟ ಕಾಣಿಕೆಯಾಗಿ ನೀಡಿದ ಅನಂತ್ ಅಂಬಾನಿ

    ಮುಂಬಯಿ: ದೇಶದೆಲ್ಲೆಡೆ ಚೌತಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ, ಆಯಾಯ ಪ್ರದೇಶದಲ್ಲಿ ಅವರ ಶಕ್ತಿ ಸಾಮರ್ಥ್ಯಕ್ಕೆ ಸರಿಯಾಗಿ ವಿಭಿನ್ನ ರೀತಿಯಲ್ಲಿ ಚೌತಿ ಆಚರಣೆಗಳನ್ನು ಮಾಡುತ್ತಾ ಬಂದಿದ್ದಾರೆ. ಅದರಂತೆ ಈ ಬಾರಿ ಮುಂಬೈನ ಲಾಲ್ಬಾಗ್ಚಾ ದಲ್ಲಿರುವ ಗಣೇಶನ ಮೂರ್ತಿ ಭಕ್ತರ ಕಣ್ಮನ ಸೆಳೆಯುತ್ತಿದೆ.…

    Spread the love

    You Missed

    2024ರಲ್ಲಿ ಪೂಜಿಸಲ್ಪಟ್ಟ ಗಣಪ

    • By admin
    • September 10, 2024
    • 35 views
    2024ರಲ್ಲಿ  ಪೂಜಿಸಲ್ಪಟ್ಟ ಗಣಪ

    ಗಣಪನಿಗೆ 20 ಕೆಜಿ ಚಿನ್ನದ ಕಿರೀಟ ಕಾಣಿಕೆಯಾಗಿ ನೀಡಿದ ಅನಂತ್ ಅಂಬಾನಿ

    • By admin
    • September 7, 2024
    • 94 views
    ಗಣಪನಿಗೆ 20 ಕೆಜಿ ಚಿನ್ನದ ಕಿರೀಟ ಕಾಣಿಕೆಯಾಗಿ ನೀಡಿದ ಅನಂತ್ ಅಂಬಾನಿ

    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    • By admin
    • September 4, 2024
    • 215 views
    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    ವಾಹನ ಸವಾರರೇ ಗಮನಿಸಿ HSRP ನಂಬರ್ ಪ್ಲೇಟ್ ಆಳವಡಿಸದೇ ಇದ್ದಲ್ಲಿ ಸೆ.16ರಿಂದ ದಂಡ ಫಿಕ್ಸ್

    • By admin
    • September 4, 2024
    • 38 views
    ವಾಹನ ಸವಾರರೇ ಗಮನಿಸಿ HSRP ನಂಬರ್ ಪ್ಲೇಟ್ ಆಳವಡಿಸದೇ ಇದ್ದಲ್ಲಿ ಸೆ.16ರಿಂದ ದಂಡ ಫಿಕ್ಸ್

    ಸ್ಮಾರ್ಟ್ ಫೋನ್ ಬಳಕೆಗೂ ಮಿದುಳಿನ ಕ್ಯಾನ್ಸರ್ ಗೂ ಯಾವುದೇ ಸಂಬಂಧವಿಲ್ಲ: WHO ಸ್ಪಷ್ಟನೆ

    • By admin
    • September 4, 2024
    • 27 views
    ಸ್ಮಾರ್ಟ್ ಫೋನ್ ಬಳಕೆಗೂ ಮಿದುಳಿನ ಕ್ಯಾನ್ಸರ್ ಗೂ ಯಾವುದೇ ಸಂಬಂಧವಿಲ್ಲ: WHO ಸ್ಪಷ್ಟನೆ

    ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ, ಶರದ್ ಗೆ ಬೆಳ್ಳಿ ಮರಿಯಪ್ಪನ್ ಗೆ ಕಂಚಿನ ಪದಕ

    • By admin
    • September 4, 2024
    • 23 views
    ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ, ಶರದ್ ಗೆ ಬೆಳ್ಳಿ ಮರಿಯಪ್ಪನ್ ಗೆ ಕಂಚಿನ ಪದಕ