ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ವೈರಸ್ ನ ಬೀತಿ ಹೆಚ್ಚಾಗುತ್ತಿದ್ದು ರಾಜ್ಯ ರಾಜಧಾನಿಯನ್ನು ಇಂದು ಬೆಚ್ಚಿ ಬೀಳಿಸುವಂತೆ ಮಾಡಿದೆ. ಬೆಂಗಳೂರಿನಲ್ಲಿ 142 ಸೋಂಕಿತರು ಪತ್ತೆಯಾಗಿದ್ದು ಸಾವಿನ ಸಂಖ್ಯೆಯಲ್ಲೂ ಗಣನೀಯ ಏರಿಕೆಯನ್ನು ಕಾಣುತ್ತಿದೆ.
ಕರ್ನಾಟಕದಲ್ಲಿ ಇಂದು 337 ಸೋಂಕಿತರು ಪತ್ತೆ ಒಟ್ಟು ಸೋಂಕಿತರ ಸಂಖ್ಯೆ 8281 ಕ್ಕೆ ಏರಿಕೆಯಾಗಿದೆ.
337 ಸೋಂಕಿತರ ಪೈಕಿ 104 ಮಂದಿ ವಿದೇಶ ಹಾಗೂ ಹೊರರಾಜ್ಯ ಗಳಿಂದ ಪ್ರಯಾಣ ಬೆಳೆಸಿದವರಾಗಿದ್ದಾರೆ.
ಮಹಾಮಾರಿ ನರ್ತನಕ್ಕೆ 10 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ124 ಕ್ಕೆ ಏರಿಕೆಯಾಗಿದೆ
ಜಿಲ್ಲಾವಾರು ಸೋಂಕಿತರ ವಿವರಗಳು:
ಬೆಂಗಳೂರು 142
ಕಲಬುರ್ಗಿ 52
ಬಳ್ಳಾರಿ 37
ಹಾಸನ 18
ದಕ್ಷಿಣಕನ್ನಡ 13
ದಾವಣಗೆರೆ 12
ಉಡುಪಿ 11
ಬೀದರ್ 10
ಮೈಸೂರು 06
ಕೊಪ್ಪಳ 06
ಯಾದಗಿರಿ 04
ಕೋಲಾರ 04
ಮಂಡ್ಯ 03
ಧಾರವಾಡ 03
ಚಿಕ್ಕಬಳ್ಳಾಪುರ 03
ಬಾಗಲಕೋಟೆ 03
ರಾಮನಗರ 03
ತುಮಕೂರು 02
ಚಿಕ್ಕಮಗಳೂರು 02
ಬೆಳಗಾವಿ 01
ಉತ್ತರಕನ್ನಡ 01
ಶಿವಮೊಗ್ಗ 01