ಧರ್ಮಸ್ಥಳದ ಧರ್ಮಾಧಿಕಾರಿ ಸರಳತೆಗೆ ಫಿದಾ ಆದ ಬೈಕರ್: ಸಾಮಾಜಿಕ ಜಾಲತಾಣದಲ್ಲಿ ಡಾ. ಹೆಗ್ಗಡೆಯವರ ಸರಳತೆಯ ವಿಡಿಯೋ ವೈರಲ್

ಧರ್ಮಸ್ಥಳ : ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ವಾಹನಗಳ ಕ್ರೇಜ್ ಎಷ್ಟಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇನ್ನು ಅವರ ಸರಳತೆ ಬಗ್ಗೆ ಬಿಡಿಸಿ ಹೇಳಬೇಕಾಗಿಲ್ಲ. ಇದೀಗ ಬೈಕರ್ ಒಬ್ಬರು ವೀರೇಂದ್ರ ಹೆಗ್ಗಡೆ ಅವರೊಂದಿಗೆ ಕಳೆದ ಅಪರೂಪದ ವಿಡಿಯೋ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.ಈ ವಿಡಿಯೋ ನೋಡಿದ ಜನ ಡಾ.ಹೆಗ್ಗಡೆಯವರ ಸರಳತೆಗೆ ಮರುಳಾಗಿದ್ದಾರೆ.

ಖಾಸಗಿ ಸಂಸ್ಥೆಯ ಉದ್ಯೋಗಿ ಕಾರ್ತಿಕ್ ಗಣಪತಿ ಎಂಬವರಿಗೆ ಬೈಕ್ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ. ಇತ್ತೀಚೆಗೆ ಅವರು ಅತ್ಯಾಧುನಿಕ  ಬೆನೆಲ್ಲಿ  ಟಿಆರ್ ಕೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಆತ್ಮೀಯತೆಯಿಂದ ಮಾತನಾಡಿಸಿದ ವಿರೇಂದ್ರ ಹೆಗ್ಗಡೆ ಅವರು  ಬೈಕ್ ನ ಆಯಕ್ಸಿಲೇಚರ್ ತಿರುವು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮಲ್ಲಿದ್ದ ತಿನಿಸನ್ನು ಕಾರ್ತಿಕ್ ಅವರಿಗೆ ನೀಡಿದ್ದಾರೆ. ಈ ವಿಡಿಯೋವನ್ನು ಕಾರ್ತಿಕ್ ಗಣಪತಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

READ ALSO