ಬೆಂಗಳೂರು: ಏಪ್ರಿಲ್ 1 ರಿಂದ ಬೇಕಾದಂತೆ ಬಾಟಲಿ ನೀರು ಮಾರಾಟ ಮಾಡುವಂತಿಲ್ಲ. ನಿಯಮ ಬಿಗಿಯಾಗಲಿದ್ದು, ಕಂಪನಿಗಳಿಗೆ ಪ್ರಮಾಣೀಕರ ಪಡೆಯುವುದು ಕಡ್ಡಾಯವಾಗಿದೆ.
ಬಾಟಲ್ ನೀರು ಮಾರಾಟ ಮಾಡುವುದು ಕಠಿಣವಾಗಲಿದೆ. ಎಫ್‌ಎಸ್‌ಎಸ್‌ಎಐ ಕಂಪನಿ ನಿಯಮಗಳನ್ನು ಬದಲಾಯಿಸಿದೆ. ಬಾಟಲಿ ನೀರು ಮತ್ತು ಖನಿಜಯುಕ್ತ ನೀರಿನ ತಯಾರಕರು ಪರವಾನಗಿ ಪಡೆಯಲು ಎಫ್‌ಎಸ್‌ಎಸ್‌ಎಐ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಪ್ರಮಾಣೀಕರಣವನ್ನು ಪಡೆಯಬೇಕು.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಆಯುಕ್ತರಿಗೆ ಕಳುಹಿಸಿದ ಪತ್ರದಲ್ಲಿ ಎಫ್‌ಎಸ್‌ಎಸ್‌ಎಐ ಈ ನಿರ್ದೇಶನ ನೀಡಿದೆ. ಈ ನಿರ್ದೇಶನ ಏಪ್ರಿಲ್ 1, 2021 ರಿಂದ ಜಾರಿಗೆ ಬರಲಿದೆ. ನಿಯಮಗಳು 2011 ರ ಪ್ರಕಾರ, ಬಿಐಎಸ್ ಪ್ರಮಾಣೀಕರಣದ ನಂತರ ಮಾತ್ರ ಯಾರಾದರೂ ಬಾಟಲಿ ಕುಡಿಯುವ ನೀರು ಅಥವಾ ಖನಿಜಯುಕ್ತ ನೀರನ್ನು ಮಾರಾಟ ಮಾಡಬಹುದು.