ಗಂಧದ ಗುಡಿ ಸಿನಿಮಾ ಟಿಕೆಟ್ ದರದಲ್ಲಿ ಭಾರಿ ವಿನಾಯಿತಿ

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​​​ ಅಂದರೆ ಸಾಕು ಸಂಪೂರ್ಣ ಕರ್ನಾಟಕವೇ ಭಾವುಕವಾಗುತ್ತೆ. ಪುನೀತ್​ರಾಜ್​ಕುಮಾರ್​​ರನ್ನು ಕಳೆದುಕೊಂಡ ಕರುನಾಡು ಇಂದಿಗೂ ಆ ದುಃಖವನ್ನು ಮರೆಯಲಾಗದೇ ಸ್ತಬ್ಧವಾಗಿದೆ. ಪುನೀತ್​ ರಾಜ್​ಕುಮಾರ್​ರ ಕನಸಿನ ಕೂಸು ಗಂಧದ ಗುಡಿ ಎಂಬ ಪ್ರಾಜೆಕ್ಟ್​​ ಬೆಳ್ಳಿ ತೆರೆ ಮೇಲೆ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಅಕ್ಟೋಬರ್​ 28ರಂದು ತೆರೆಕಂಡ ಈ ಸಾಕ್ಷ್ಯಚಿತ್ರವು ಕರುನಾಡಿನ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದು ನಾಡಿನ ಅರಣ್ಯ ಸಂಪತ್ತನ್ನು ಸಂಭ್ರಮಿಸುವ ಒಂದು ಡಾಕ್ಯೂಮೆಂಟರಿಯಾಗಿರುವ ಹಿನ್ನೆಲೆಯಲ್ಲಿ ಮಕ್ಕಳು ವೃದ್ಧರೆನ್ನದೇ ಎಲ್ಲರಿಗೂ ಇಷ್ಟವಾಗುತ್ತೆ. ಈ ಸಿನಿಮಾ ಮಕ್ಕಳಿಗೆ ನೋಡಲು ಅನುಕೂಲವಾಗಬೇಕು ಎನ್ನುವ ನಿಟ್ಟಿನಲ್ಲಿ ಪಿಆರ್​ಕೆ ಪ್ರಾಡಕ್ಷನ್​​ನಿಂದ ಮಹತ್ವದ ಮಾಹಿತಿಯೊಂದು ಹೊರ ಬಿದ್ದಿದೆ.

ಗಂಧದ ಗುಡಿ ಸಾಕ್ಷ್ಯಚಿತ್ರ ಮಕ್ಕಳಿಗೂ ತಲುಪಬೇಕು ಎಂಬ ನಿಟ್ಟಿನಲ್ಲಿ ಪಿಆರ್​ಕೆ ಪ್ರಾಡಕ್ಷನ್​ ಸಿನಿಮಾ ವಿತರಕರು ಹಾಗೂ ಪ್ರದರ್ಶಕರ ಜೊತೆ ಸಮಾಲೋಚನೆ ನಡೆಸಿ ನಾಲ್ಕು ದಿನಗಳ ಕಾಲ ಸಿಂಗಲ್​ ಸಿಂಗಲ್​ ಸ್ಕ್ರೀನ್​ ಥಿಯೇಟರ್​ಗಳಲ್ಲಿ 56 ರೂಪಾಯಿಗಳಿಗೆ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ 112 ರೂಪಾಯಿಗಳಿಗೆ ಕರ್ನಾಟಕ ರಾಜ್ಯಾದ್ಯಂತ ದಿನದ ಎಲ್ಲಾ ಆಟಗಳು ಪ್ರದರ್ಶನ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಸ್ವತಃ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅಧಿಕೃತ ಮಾಹಿತಿ ನೀಡಿದ್ದಾರೆ.

READ ALSO