ಗೋಲ್ಡನ್ ಬಾಬಾ ಇನ್ನಿಲ್ಲ!

ನವದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 58 ವರ್ಷದ ಗೋಲ್ಡನ್​ ಬಾಬಾ ಖ್ಯಾತಿಯ ಸುಧೀರ್​ ಕುಮಾರ್​ ದೆಹಲಿ ಏಮ್ಸ್​ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ

ಎದೆನೋವು, ಕ್ಯಾನ್ಸರ್​, ಡಯಾಬಿಟಿಸ್​​, ಥೈರಾಯಿಡ್​ ಸೇರಿದಂತೆ ಮತ್ತಿತರ ಖಾಯಿಲೆಗಳಿಂದ ಬಳಲುತ್ತಿದ್ದ ಇವರು ಕಳೆದ ಕೆಲ ದಿನಗಳ ಹಿಂದೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್‌)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

READ ALSO

ಮೂಲತಃ ಉತ್ತರಪ್ರದೇಶದ ಗಾಜಿಯಾಬಾದ್​​ ನಿವಾಸಿಯಾಗಿದ್ದು ದೆಹಲಿಯ ಗಾಂಧಿನಗರದಲ್ಲಿ ವಾಸವಿದ್ದರು. ಬಟ್ಟೆ ವ್ಯಾಪಾರದ ಮೂಲಕ ವೃತ್ತಿ ಆರಂಭಿಸಿದ​ ಬಾಬಾ ನಂತರದ ದಿನಗಳಲ್ಲಿ ಸ್ವಾಮೀಜಿ ದೀಕ್ಷೆ ಪಡೆದುಕೊಂಡು ಆಶ್ರಮ ಆರಂಭಿಸಿದ್ದರು.

ಕಳೆದ ವರ್ಷ ತಮ್ಮ ಆಶ್ರಮದಲ್ಲಿ ಅದ್ಧೂರಿ ಕುಂಭಮೇಳವನ್ನು ಇವರು ಆಯೋಜಿಸಿದ್ದರು.

ಅಪಹರಣ, ದರೋಡೆ, ಕೊಲೆ ಬೆದರಿಕೆ ಸೇರಿ ಅನೇಕ ಕ್ರಿಮಿನಲ್​ ಕೇಸ್​ಗಳೂ ಇವರ ಮೇಲಿದ್ದವು.

ಚಿನ್ನದ ಮೇಲೆ ಇವರಿಗೆ ಇನ್ನಿಲ್ಲದ ವ್ಯಾಮೋಹವಿತ್ತು. ಹೀಗಾಗಿ ತನ್ನ ಮೈಮೇಲೆ ಕೆ.ಜಿಗಟ್ಟಲೆ ಆಭರಣಗಳನ್ನು ಧರಿಸುತ್ತಿದ್ದರು. 20 ಕೆ.ಜಿ ಬಂಗಾರ, ರೋಲೆಕ್ಸ್​ ವಾಚ್​ ಧರಿಸಿ ಸುತ್ತಾಡುತ್ತಾ ಇವರು ಗಮನ ಸೆಳೆಯುತ್ತಿದ್ದರು.