ಸರ್ಕಾರದ ವಿರುದ್ಧ ಗುಡುಗಿದ ಮಠ ಸಿನಿಮಾ ಖ್ಯಾತಿ ಗುರು ಪ್ರಸಾದ್..! ನನ್ನ ಸಾವಿಗೆ ಸರ್ಕಾರವೇ ಕಾರಣ ಡೆತ್ ನೋಟ್ ಬರೆದ ಡೈರೆಕ್ಟರ್..! ಏನಿದು ಬಡವರ ಮನೆಯ ಒಂದು ಇಡ್ಲಿಯ ಕಥೆ…!

ಮಠ ಸಿನಿಮಾ ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್ ಅವರಿಗೆ ಕೊರೋನಾ ಸೋಂಕು ಇರುವುದು ಧೃಡಪಟ್ಟಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಬಹಿರಂಗಪಡಿಸಿರುವ ಅವರು, ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಸುಧಾಕಾರ್, ಮಾಜಿ ಸಿಎಂ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಹೀಗೆ ಹಲವರು ರಾಜಕೀಯ ನಾಯಕರ ವಿರುದ್ಧ ಗುಡುಗಿದ್ದಾರೆ.

ನನ್ನ ಸಾವಿಗೆ ಸರ್ಕಾರವೇ ಕಾರಣವೆಂದು ಡೆತ್ ನೋಟ್ ಬರೆಯುವುದಾಗಿ ಹೇಳಿದ್ದಾರೆ. ರಾಜಕೀಯ ಮಾಡಬೇಡಿ, ಆಡಳಿತ ಮಾಡಿ ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಮನೆವರೆಗೂ ಕೊರೊನಾ ಕಳುಹಿಸಿದ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಅವರಿಗೆ ಧನ್ಯವಾದ. ಎಷ್ಟು ಕೋಟಿ ಬೇಕು ನಮಗೆ, ನಿಮ್ಮ ಕೋಟಿ ಎಂದರೆ ಬಡವರ ಮನೆಯ ಒಂದೊಂದು ಇಡ್ಲಿಯನ್ನು ತಂದು ನಿಮ್ಮ ಲಾಕರ್ ನಲ್ಲಿ ಇಡುತ್ತಿದ್ದೀರಿ. ದರಿದ್ರ ಜೀವನ ನಡೆಸಿಲಿಕ್ಕೆ ಎಂದು ಸರ್ಕಾರದ ವಿರುದ್ಧ ಕಿರಿಕಾರಿದ್ದಾರೆ.

https://www.facebook.com/Guruprasadmata/videos/1206848433063292/

ಒಂದು ವೇಳೆ ನಾನು ಸತ್ತರೆ ನನ್ನ ಶಾಪ ಕೊನೆವರೆಗೂ ನಿಮಗೆ ನೋವು. ಒಂದೂವರೆ ವರ್ಷ ಸಮಯ ತೆಗೆದುಕೊಂಡು, 2 ತಿಂಗಳೂ ಲಾಕ್ ಡೌನ್ ಮಾಡಿ ಏನು ಮಾಡಿದ್ರಿ. ನಿಮಗೆ ಕೋಟಿ ಕೋಟಿ ಹಣ ಬಂದಿದೆ ಅಂತ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ತಳ್ಳಬೇಡಿ. ನನಗೆ ಕೊರೋನಾ ತಂದುಕೊಟ್ಟ ನಿಮಗೆ ದಿಕ್ಕಾರವಿರಲಿ. ತುಂಬಾ ಜನರನ್ನು ಸಾಯಿಸಿದ್ದಾರೆ, ಒಂದೂವರೇ ವರ್ಷವಾದರೂ ಏನು ಮಾಡಿಲ್ಲ. ನನ್ನಂತವರಿಗೆ ಕೊಟ್ಟಿದ್ರೆ ಏನೋ ಮಾಡುತ್ತಿದ್ದೆ. ಇನ್ನು ಎಷ್ಟು ಕೋಟಿ ನಿಮಗೆ, ಕೊರೋನಾ ಬಂದರು ಪಾಠ ಕಲಿತಿಲ್ಲ.

ಮೋದಿ ಪ್ರಾಮಾಣಿಕ. ಆದರೆ ಬಿಜಿಪಿಯವರೆಲ್ಲ ಪ್ರಾಮಾಣಿಕರಲ್ಲ. ಜೆಡಿಎಸ್, ಕಾಂಗ್ರೆಸ್ನವರೆಲ್ಲ ಪ್ರಾಮಾಣಿಕರಲ್ಲ. ಒಂದು ವೈರಸ್ ನಿಮ್ಮನ್ನು ಆಡಿಸುತ್ತಿದೆ. ವಿಜ್ಞಾನದ ಹಿನ್ನೆಲೆ ಇದ್ದರೆ ಡಾ. ಸುಧಾಕರ್ ಬೆಂಗಳೂರಿನಲ್ಲಿ ಒಂದು ಲಕ್ಷ ವಾರ್ಫೇರ್ ಟೆಂಟ್ ಹಾಕಿಸಿ. ಅದರ ಬದಲು ಯಾವುದೇ ಬ್ಯುಸಿನೆಸ್ ನಿಲ್ಲಿಸ ಬೇಡಿ. ಒಂದೊಂದು ರೂಪಾಯಿ ದುಡಿಯಲು ಎಲ್ಲರೂ ಕಷ್ಟ ಪಡುತ್ತಿದ್ದಾರೆ ಎಂದು ರಾಜಕಾರಣೀಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಸದ್ಯ ಸರ್ಕಾರ ವಿರುದ್ಧ ಗುಡುಗಿರುವ ಡೈರೆಕ್ಟರ್ ಗುರು ಪ್ರಸಾದ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Spread the love
 • Related Posts

  ಕ್ಯಾನ್ಸರ್ ಪೀಡಿತ ರೋಗಿಗಳ ಪರವಾಗಿ ಸದನದಲ್ಲಿ ಧ್ವನಿಯಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

  ಬೆಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಇಂದು ಸದನದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಅನುಕೂಲ ಆಗುವಂತೆ ಕೆಲವು ನಿಯಮಾವಳಿಗಳನ್ನು ತರುವಂತೆ ಆಗ್ರಹಿಸಿದರು ಕೇಂದ್ರ ಸರ್ಕಾರವು ಬಡವರಿಗೋಸ್ಕರ ಯೋಜಿಸಿರುವ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯನ್ನು ಪಡೆಯಲು ಮಂಗಳೂರಿನಲ್ಲಿರುವ ಪ್ರಸಿದ್ಧ ಕ್ಯಾನ್ಸರ್ ಆಸ್ಪತ್ರೆ…

  Spread the love

  ಮಳೆಗಾಳಿ ಲೆಕ್ಕಿಸದೆ ತಡರಾತ್ರಿಯಲ್ಲೂ ಕಾರ್ಯಪ್ರವೃತ್ತರಾದ ಮೇಸ್ಕಾಂ ಸಿಬ್ಬಂದಿ

  ಬೆಳ್ತಂಗಡಿ: ಮೆಸ್ಕಾಂ ಎಂದರೆ ದೂರುವರೇ ಹೆಚ್ಚು ದಿನಬೇಳಗಾದ್ರೆ ಮನೆ ಮನೆಗಳಲ್ಲಿ ನಿರಂತರ ಬೆಳಕು ಉರಿಯುತ್ತಲೆ ಇರಬೇಕು ಇಲ್ಲದಿದ್ದರೆ ಮನೆ ಮಾಲೀಕನಿಂದ ಹಿಡಿದು ಕುಟುಂಬದ ಎಲ್ಲಾ ಸದಸ್ಯರು ಹಿಡಿಶಾಪ ಹಾಕೋದು ಮಾತ್ರ ಮೆಸ್ಕಾಂ ಇಲಾಖೆ ಅಥವಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆದರೆ ಯಾವತ್ತೂ…

  Spread the love

  You Missed

  ಕ್ಯಾನ್ಸರ್ ಪೀಡಿತ ರೋಗಿಗಳ ಪರವಾಗಿ ಸದನದಲ್ಲಿ ಧ್ವನಿಯಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

  • By admin
  • July 23, 2024
  • 52 views
  ಕ್ಯಾನ್ಸರ್ ಪೀಡಿತ ರೋಗಿಗಳ ಪರವಾಗಿ ಸದನದಲ್ಲಿ ಧ್ವನಿಯಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

  ಮಳೆಗಾಳಿ ಲೆಕ್ಕಿಸದೆ ತಡರಾತ್ರಿಯಲ್ಲೂ ಕಾರ್ಯಪ್ರವೃತ್ತರಾದ ಮೇಸ್ಕಾಂ ಸಿಬ್ಬಂದಿ

  • By admin
  • July 22, 2024
  • 141 views
  ಮಳೆಗಾಳಿ ಲೆಕ್ಕಿಸದೆ ತಡರಾತ್ರಿಯಲ್ಲೂ ಕಾರ್ಯಪ್ರವೃತ್ತರಾದ ಮೇಸ್ಕಾಂ ಸಿಬ್ಬಂದಿ

  ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ

  • By admin
  • July 21, 2024
  • 62 views
  ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ

  ಮಾಣಿಯಲ್ಲಿ ಶ್ರೀಲಲಿತೆ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ

  • By admin
  • July 21, 2024
  • 12 views
  ಮಾಣಿಯಲ್ಲಿ ಶ್ರೀಲಲಿತೆ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ

  ಉಜಿರೆಯ ಕಿರಣ್ ಅಗ್ರೋಟೆಕ್ ನಿಂದ ಸೇವಾಭಾರತಿಗೆ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್) ಯಂತ್ರದ ಕೊಡುಗೆ

  • By admin
  • July 21, 2024
  • 17 views
  ಉಜಿರೆಯ ಕಿರಣ್ ಅಗ್ರೋಟೆಕ್ ನಿಂದ ಸೇವಾಭಾರತಿಗೆ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್) ಯಂತ್ರದ ಕೊಡುಗೆ

  ಮಂಗಳ ಲಕ್ಷದ್ವೀಪ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸುರಿದ ನೀರು ಪ್ರಯಾಣಿಕರು ಕಂಗಾಲು

  • By admin
  • July 21, 2024
  • 142 views
  ಮಂಗಳ ಲಕ್ಷದ್ವೀಪ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸುರಿದ ನೀರು ಪ್ರಯಾಣಿಕರು ಕಂಗಾಲು