TRENDING
Next
Prev

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸರಕಾರಿ ಆಸ್ಪತ್ರೆ ಗಳಿಗೆ ಆಗತ್ಯ ಔಷಧಗಳ ಒದಗಣೆ

ಶಿಡ್ಲಘಟ್ಟ: ಕೊರೋನಾ ಸಂಕಷ್ಟದ ಸಮಯದಲ್ಲಿ ಸರ್ಕಾರದ ಜೊತೆ ಕೈ ಜೋಡಿಸಿದ ಧರ್ಮಸ್ಥಳದ ಧರ್ಮಾಧಿಕಾರಿಗಳು ಸಾವಿರಾರು ಕುಟುಂಬಕ್ಕೆ ದಾರಿದೀಪವಾಗಿದ್ದಾರೆ ಎಂದು ಜಿಲ್ಲಾ ನಿರ್ದೇಶಕ ಪ್ರಶಾಂತ್ ರವರು ತಿಳಿಸಿದರು.

ಇವರು ಶಿಡ್ಲಘಟ್ಟ ಸರಕಾರಿ ಆಸ್ಪತ್ರೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳು ನೀಡಿದ 48000 ಮೊತ್ತದ ಔಷಧಿಯನ್ನು ವಿತರಿಸಿ ಮಾತನಾಡುತ್ತಾ ಕೋವಿಡ್ ಎರಡನೆ ಅಲೆಯ ಸಂಕಷ್ಟದ ಈ ಸಮಯದಲ್ಲಿ ಸೋಂಕಿತರ ಪ್ರಯಾಣಕ್ಕಾಗಿ ಉಚಿತ ವಾಹನ ವ್ಯವಸ್ಥೆ ಕೋವಿಡ್ ಸೋಂಕಿತ ರಿಗಾಗಿ ಕೋವಿಡ್ ಕೇರ್ ಸೆಂಟರ್ ಉಚಿತ ಆಮ್ಲಜನಕ ಒದಗಣೆ, 300 ಆಕ್ಸಿಜನ್ ಕಾನ್ಸೇಂಟರ್, ಆಕ್ಸಿಜನ್ ವೆಂಟಿಲೇಟರ್, ಹಸಿದವರಿಗೆ ಊಟ ಆಹಾರದ ಕಿಟ್ ಗಳ ವಿತರಣೆಯನ್ನು ರಾಜ್ಯಾದ್ಯಂತ ಮಾಡಿದ್ದು ಇದರಿಂದ ಸಾವಿರಾರು ಕುಟುಂಬಕ್ಕೆ ಆಸರೆಯಾಗಿದೆ ಎಂದರು.

READ ALSO

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿರಸ್ತೇದಾರ್ ಮಂಜುನಾಥ್ ರವರು ಮಾತನಾಡುತ್ತಾ ಧರ್ಮಸ್ಥಳ ಸಂಸ್ಥೆ ಸಂಕಷ್ಟದಲ್ಲಿರುವ ಜನರಿಗೆ ನಾನಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದು ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದರು.

ಈ ಸಂದರ್ಭ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಹಣಕಾಸು ಪ್ರಭಂಧಕರಾದ ಕಿರಣ್ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ವಾಣಿ ಹಿರಿಯ ಆರೋಗ್ಯ ಪರೀವೀಕ್ಷಣಾಧಿಕಾರಿ ಶಶಿಕುಮಾರ್ ತಾಲ್ಲೂಕು ಮೇಲ್ವಿಚಾರಕರಾದ ಸಿ. ಮುನಿರತ್ನಮ್ಮ ಆರೋಗ್ಯ ನೀರೀಕ್ಷಕರಾದ ದೇವರಾಜ್ ರವರು ಉಪಸ್ಥಿತರಿದ್ದರು.