ಕನ್ಯಾಡಿ ಶ್ರೀಗಳಿಂದ ಕಾಲನಿರ್ಣಯನ್ಯೂಸ್ “ಶ್ರೀ ಕೃಷ್ಣವೇಷ ಸ್ಪರ್ಧೆ 2020” ಕಾರ್ಯಕ್ರಮದ ಪ್ರಶಸ್ತಿ ಪ್ರಧಾನ

ಬೆಳ್ತಂಗಡಿ: ಕಾಲನಿರ್ಣಯನ್ಯೂಸ್ ಪ್ರಾಯೋಜಕತ್ವದ “ಶ್ರೀ ಕೃಷ್ಣವೇಷ ಸ್ಪರ್ಧೆ 2020” ಕಾರ್ಯಕ್ರಮದಲ್ಲಿ
ಕನ್ಯಾಡಿಯ ಶ್ರೀ ರಾಮ ಕ್ಷೇತ್ರದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಪ್ರಶಸ್ತಿ ಪ್ರಧಾನ ಮಾಡಿ ಆಶೀರ್ವಚನ ನೀಡಿದರು.

ಮಕ್ಕಳಿಗೆ ಪ್ರೇರಣೆಯನ್ನು ತುಂಬುವ ಕೆಲಸ, ಆಧ್ಯಾತ್ಮ ಯುತವಾದ ಮೌಲ್ಯಗಳು ಪ್ರೇರಣೆಗಳು ಬರಬೇಕು ಇವತ್ತು ಸಮಾಜ ಸ್ವಲ್ಪ ಹಿಮ್ಮುಖವಾಗಿ ಹೋಗಿದ್ದು ನಮ್ಮ ಯುವ ಜನತೆ ಮೊಬೈಲ್, ಸುಖ ಭೋಗದ ಹಿಂದೆ ಬಿದ್ದಿದ್ದು ಶಾರೀರಿಕ ಸುಖ ಮನಸಿನ ಸುಖ ಎಲ್ಲವೂ, ಆಧ್ಯಾತ್ಮದಿಂದ ಮಾತ್ರ ಸುಖ ಶಾಂತಿ ನೆಮ್ಮದಿ ಪ್ರಾಪ್ತಿಸುತ್ತದೆ.

READ ALSO

ನೈಜವಾದ ಧರ್ಮದ ಶಿಕ್ಷಣ ಮಕ್ಕಳಿಗೆ ಸಿಕ್ಕಾಗ ಆ ಮಗು ಧರ್ಮವನ್ನು ಪರಿಪಾಲಿಸುವ ಕಾರ್ಯಕ್ಕೆ ಮುಂದಾಗುತ್ತಾರೆ. ಮಕ್ಕಳಿಗೆ ಯಾವ ವಿಚಾರಧಾರೆಯನ್ನು ನೀಡಿದರು ಅದನ್ನು ಸ್ವೀಕರಿಸುವ ಗುಣ ಮಗುವಿಗೆ ಇದೆ. ಹಾಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ. ಗಿಡಕ್ಕೆ ಸರಿಯಾಗಿ ಪಾಲನೆ ಪೋಷಣೆ ಮಾಡಿ ಬೆಳೆಸಿದರೆ ಅದು ಹೆಮ್ಮರವಾಗಿ ಬೆಳೆದು ನೆರಳನ್ನು ನೀಡುತ್ತದೆ.

ಹಾಗೆಯೇ ಮಕ್ಕಳಿಗೆ ಬಾಲ್ಯ ಶಿಕ್ಷಣವನ್ನು ಸರಿಯಾಗಿಸಂಸ್ಕಾರಯುತವಾಗಿ ನೀಡಿದರೆ ಆ ಮಗು ದೇಶದ ಸರ್ವಶ್ರೇಷ್ಠ ಪ್ರಜೆಯಾಗುತ್ತಾನೆ. ಮಕ್ಕಳಿಗೆ ಭಗವದ್ಗೀತೆ, ಧರ್ಮದ ವಿಚಾರಗಳನ್ನು ಭೋದಿಸುವ ಕಾರ್ಯ ಆಗಬೇಕಿದೆ. ಮಗುವಿನ ಪೋಷಕರು ಆ ಮಗುವಿನ ಪೂರ್ಣ ಪ್ರಮಾಣದ ಬೆಳವಣಿಗೆಗೆ ಸಹಾಯಕರಾಗುತ್ತಾರೆ. ಮಕ್ಕಳನ್ನು ಒತ್ತಡ ರಹಿತವಾಗಿ ಪ್ರೀತಿಯಿಂದ ಸಾಕಿ ಸಲಹಿ, ಮಹಾಭಾರತ,ರಾಮಾಯಣದ ಕಥೆಗಳನ್ನು ಮಕ್ಕಳಿಗೆ ತಿಳಿಸುವ ಹಾಗೂ ಉತ್ತಮ ವಿಚಾರಧಾರೆಗಳನ್ನು ಕಲಿಸುವ ಗುರುಗಳಾಗಿ ಪೋಷಕರು ಪ್ರಮುಖ ಪಾತ್ರವಹಿಸಬೇಕೆಂದರು.

ಕಾಲನಿರ್ಣಯನ್ಯೂಸ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ “ಶ್ರೀಕೃಷ ವೇಷ ಸ್ಪರ್ಧೆ 2020″ನ್ನು ಆಯೋಜಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ 369 ಪುಟಾಣಿ ಮಕ್ಕಳು ಭಾಗವಹಿಸಿದ್ದು

ಸ್ಪರ್ಧೆಯ ಪ್ರಥಮ ಬಹುಮಾನವನ್ನು ಮಹೀಕಾ ಕಲ್ಲಡ್ಕ, ದ್ವಿತೀಯ ಬಹುಮಾನವನ್ನು ಅನ್ವಿಕ್ ಗುರಿಪಳ್ಳ, ಉಜಿರೆ, ಹಾಗೂ ತೃತೀಯ ಬಹುಮಾನವನ್ನು ಅರ್ಘ್ಯ ಸಾಯಿ ಕನಸು ಮನೆ ಜೋಡು ಸ್ಥಾನ ಧರ್ಮಸ್ಥಳ ಪಡೆದು ಕೊಂಡಿದ್ದಾರೆ.

ಪ್ರೋತ್ಸಾಹಕರ ಬಹುಮಾನವನ್ನು ಅನ್ವಿ ಸುವರ್ಣ ಕೊಡಂಗಲ್ಲು ಮೂಡಬಿದ್ರೆ, ತ್ರಿಷಾ ಯು.ಕೆ ಕೋಡಿಗದ್ದೆ ನೂಜಿಬಾಳ್ತಿಲ ಕಡಬ, ಹೃದಾನ್ ಶೆಟ್ಟಿ ಈದು ಕಾರ್ಕಳ ಪಡೆದುಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ, ಧರ್ಮಣ್ಣ, ದಯಾನಂದ ಬೆಳಾಲು,ಗಣೇಶ್, ನವೀನ್ ಕನ್ಯಾಡಿ, ಸ್ವಸ್ತಿಕ್ ಕನ್ಯಾಡಿ, ಭರತ್.ಕೆ ಹಾಗೂ ಸ್ಪರ್ಧಾವಿಜೇತ ಮಕ್ಕಳ ಮನೆಯವರು ಉಪಸ್ಥಿತರಿದ್ದರು.