ಸಿಗಂದೂರು: ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ಸನ್ನಿಧಾನಕ್ಕೆ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಭೇಟಿ ನೀಡಿ ದೇವರ ದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಒಂದು ಅಚ್ಚರಿಯ ಬೆಳವಣಿಗೆ ಮತ್ತು ಭಕ್ತರ ಸಂತೋಷ ತಾರಕಕ್ಕೇರಿತ್ತು. ಅದು ಹೇಗೆಂದರೆ ಇತಿಹಾಸದಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ರಾಮಪ್ಪ ನವರು ಗರ್ಭಗುಡಿಗೆ ದೇವಸ್ಥಾನದ ಒಳಗೆ ಹೋಗುವಂತಿರಲಿಲ್ಲ .ಆ ಚೌಡೇಶ್ವರಿ ಅಮ್ಮ ಅವರ ಮನೆದೇವರಾದರೂ ಅಲ್ಲಿಯ ಪೂಜೆಯನ್ನು ಬ್ರಾಹ್ಮಣ ವರ್ಗದ ವೈದಿಕರಿಗೆ ಕೊಟ್ಟಿದ್ದರು ಅವರು ಇವರನ್ನು ದೇವಸ್ಥಾನದ ಒಳಗೆ ಹೋಗಲು ಬಿಡುತ್ತಿರಲಿಲ್ಲ . ದೇವಸ್ಥಾನದ ಹೊರಗೆ ಪ್ರಾಂಗಣದಲ್ಲಿ ಧರ್ಮದರ್ಶಿ ನಿಲ್ಲಬೇಕಿತ್ತು. ಆದರೆ ಈ ವರ್ಷದ ಮಕರ ಸಂಕ್ರಮಣದ ದಿನದಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಧರ್ಮದರ್ಶಿಗಳು ಕ್ಷೇತ್ರಕ್ಕೆ ಬರಮಾಡಿಕೊಂಡು ತಮ್ಮ ಅಳಲನ್ನು ತೋಡಿಕೊಂಡಿದ್ದರು ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಶ್ರೀಗಳು ಧರ್ಮದರ್ಶಿಗಳನ್ನು ದೇವಸ್ಥಾನದ ಒಳಗೆ ಕರೆದುಕೊಂಡು ಹೋಗಿ ದೇವರಿಗೆ ಪೂಜೆ ಸಲ್ಲಿಸಿದರು ಈ ಸಂದರ್ಭದಲ್ಲಿ ಧರ್ಮದರ್ಶಿಗಳು ಮತ್ತು ಅವರ ಕುಟುಂಬಿಕರು ಸೇರಿದಂತೆ ಸಮಸ್ತ ಭಕ್ತ ಸಮೂಹ ಸಂತಸಗೊಂಡು ಸ್ವಾಮೀಜಿಯವರ ಪಾದಕ್ಕೆರಗಿ ಪ್ರಣಾಮಗಳನ್ನು ಸಲ್ಲಿಸಿದರು. ಬಹುಕಾಲದ ಅವರ ಆಸೆಯನ್ನು ಈಡೇರಿಸಿದ ಶ್ರೀಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂತು . ಇಂತಹ ಕ್ರಾಂತಿಗಳನ್ನು ಅಂದು ಶ್ರೀ ನಾರಾಯಣಗುರುಗಳು ಮಾಡಿದ್ದನ್ನು ಶ್ರೀಗಳು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.