ಬೆಂಗಳೂರು: ರಾಜ್ಯದಲ್ಲಿ ದಿನಂಪ್ರತಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ರಾಜ್ಯದ 29 ಜಿಲ್ಲೆಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು ರಾಜ್ಯರಾಜಧಾನಿಗೆ ಬಹುದೊಡ್ಡ ಹೊಡೆತ ಕೊಡುವ ಜೊತೆಗೆ ಕಡಲತಡಿ ಮಂಗಳೂರು, ಗಣಿನಾಡು ಬಳ್ಳಾರಿಯಲ್ಲಿಯೂ ಕ್ರೂರಿ ಕೊರೋನಾದ ಅಟ್ಟ ಹಾಸ ಮಿತಿಮೀರಿದಂತಿದೆ.
ರಾಜ್ಯದಲ್ಲಿ ಇಂದು1694 ಸೋಂಕಿತರು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ19710 ಕ್ಕೆ ಏರಿಕೆಯಾಗಿದೆ.
ಕೊರೋನಾ ಮರಣಮೃದಂಗಕ್ಕೆ ಕರುನಾಡು ತತ್ತರಿಸಿ ಹೋಗಿದ್ದು ಇಂದು ಒಂದೇ ದಿನ 21ಮಂದಿ ಕೊರೋನಾ ರುದ್ರನರ್ತನಕ್ಕೆ ಬಲಿಯಾಗಿದ್ದ ರಾಜ್ಯದಲ್ಲಿ ಸಾವಿನ ಸಂಖ್ಯೆ 293ಕ್ಕೆ ಏರಿಕೆಯಾಗಿದೆ.