ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗಿನವರೆಗೂ KSRTC ಬಸ್ ಗಳ ಸಂಚಾರ ಸಂಪೂರ್ಣ ಬಂದ್!

ಬೆಂಗಳೂರು : ಕೊರೋನಾ ಸೋಂಕಿನ ಸರಣಿಯನ್ನು ಮುರಿಯಲು ಭಾನುವಾರ ಲಾಕ್ ಡೌನ್ ಅವಶ್ಯಕ ಎಂದು ರಾಜ್ಯ ಸರ್ಕಾರ ಭಾನುವಾರದಂದು ಲಾಕ್ ಡೌನ್ ಘೋಷಿಸಿದೆ. ಹಾಗಾಗಿ ಆ ದಿನ ಕೆಎಸ್ ಆರ್ ಟಿಸಿ ಬಸ್ ಗಳ ಸಂಚಾರವಿರೋದಿಲ್ಲ ಎಂದು KSRTC ಉನ್ನತ ಮೂಲಗಳು ಮಾಹಿತಿ ನೀಡಿವೆ.

ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆಯವರೆಗೂ ಕೆಎಸ್ ಆರ್ ಟಿಸಿ ಬಸ್ ಗಳು ಸಂಚಾರ ಮಾಡುವುದಿಲ್ಲ ಎಂದು KSRTC ಸಂಸ್ಥೆಯಿಂದ ಮಾಹಿತಿ ನೀಡಲಾಗಿದೆ.

READ ALSO

ಹಾಗಾಗಿ ಭಾನುವಾರ KSRTC ಬಸ್ ನಲ್ಲಿ ಸಂಚಾರ ಮಾಡುವ ಪ್ಲ್ಯಾನ್ ಏನಾದ್ರೂ ಮಾಡಿಕೊಂಡಿದ್ದರೆ ಅಂತಹವರು ತಮ್ಮ ಪ್ಲ್ಯಾನ್ ಗಳನ್ನು ಬದಲಾಯಿಸಿಕೊಳ್ಳೋದು ಉತ್ತಮ. ಆದರೆ ಶನಿವಾರ ಹಾಗೂ ಸೋಮವಾರ ಬಸ್ ಗಳು ಎಂದಿನಂತೆ ಕಾರ್ಯಾಚರಣೆ ನಡೆಸಲಿವೆ.