“ಕಸ್ತೂರಿರಂಗನ್ ಆತಂಕ ನಿವಾರಣೆಗೆ ಅರಣ್ಯ–ಕಂದಾಯ ಗ್ರಾಮ ಪ್ರತ್ಯೇಕಿಸಿ: ತುಳುನಾಡ್ ಒಕ್ಕೂಟದ ಸಂಸ್ಥಾಪಕ ಶೈಲೇಶ್ ಆರ್.ಜೆ. ಮನವಿ”

ಬೆಳ್ತಂಗಡಿ : ಪಶ್ಚಿಮ ಘಟ್ಟ ಪ್ರದೇಶದ ಜನರ ಕೃಷಿ ಹಾಗೂ ಜೀವನೋಪಾಯಕ್ಕೆ ಕಸ್ತೂರಿರಂಗನ್ ವರದಿಯಿಂದ ಉಂಟಾಗಿರುವ ಆತಂಕವನ್ನು ನಿವಾರಿಸಲು, ಭಾದಿತ ಗ್ರಾಮಗಳನ್ನು ಅರಣ್ಯ ಗ್ರಾಮ ಮತ್ತು ಕಂದಾಯ ಗ್ರಾಮಗಳಾಗಿ ಪ್ರತ್ಯೇಕಿಸುವಂತೆ ತುಳುನಾಡ್ ಒಕ್ಕೂಟದ ಸಂಸ್ಥಾಪಕ ಶೈಲೇಶ್ ಆರ್.ಜೆ. ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಪಶ್ಚಿಮ ಘಟ್ಟದ ಇಕ್ಕೆಲಗಳಲ್ಲಿ ತಲೆತಲಾಂತರಗಳಿಂದ ಜನರು ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಕಸ್ತೂರಿರಂಗನ್ ವರದಿ ಹಾಗೂ ವಿವಿಧ ಅರಣ್ಯ ಕಾಯ್ದೆಗಳ ಪರಿಣಾಮವಾಗಿ ರಸ್ತೆ, ವಿದ್ಯುತ್, ಮನೆ ನಿರ್ಮಾಣ ಸೇರಿದಂತೆ ಮೂಲಭೂತ ಅಗತ್ಯಗಳಿಗೂ ಆತಂಕ ಎದುರಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಅರಣ್ಯ ಪ್ರದೇಶವನ್ನು ಒಳಗೊಂಡಿರುವ ಗ್ರಾಮದ ಭಾಗವನ್ನು ಅರಣ್ಯ ಗ್ರಾಮವೆಂದು ಹಾಗೂ ಜನವಸತಿ ಮತ್ತು ಕೃಷಿ ಭೂಮಿಯನ್ನು ಒಳಗೊಂಡ ಭಾಗವನ್ನು ಕಂದಾಯ ಗ್ರಾಮವೆಂದು ಪ್ರತ್ಯೇಕಿಸಬೇಕು. ಅರಣ್ಯ ಗ್ರಾಮವನ್ನು ಕಸ್ತೂರಿರಂಗನ್ ವರದಿ ಅನುಷ್ಠಾನದ ವ್ಯಾಪ್ತಿಯಲ್ಲಿ ಉಳಿಸಿ, ಕಂದಾಯ ಗ್ರಾಮವನ್ನು ಅದರ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ರೀತಿಯ ವಿಭಜನೆಯಿಂದ ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶಗಳು ಭವಿಷ್ಯದಲ್ಲಿ ಜಾರಿಯಾಗುವ ಅರಣ್ಯ ಕಾಯ್ದೆಗಳ ಕಾರಣದಿಂದ ತೊಂದರೆಗೆ ಒಳಗಾಗದಂತೆ ರಕ್ಷಣೆ ದೊರೆಯಲಿದೆ. ಅಲ್ಲದೆ, ಜನರು ನೆಮ್ಮದಿಯಿಂದ ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ಅನುಕೂಲವಾಗಲಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.ಪಶ್ಚಿಮ ಘಟ್ಟದ ಪರಿಸರ ಮತ್ತು ಅರಣ್ಯ ಸಂರಕ್ಷಣೆಯ ಜೊತೆಗೆ ಅಲ್ಲಿನ ಜನರ ಬದುಕಿನ ಹಿತಾಸಕ್ತಿಯನ್ನೂ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶೈಲೇಶ್ ಆ‌ರ್.ಜೆ. ಅವರು ಮುಖ್ಯಮಂತ್ರಿಗಳನ್ನು ವಿನಂತಿಸಿದ್ದಾರೆ.

Spread the love
  • Related Posts

    ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ ಉದ್ಘಾಟನೆ, ಪ್ರತಿದಿನ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡುವುದರಿಂದ ಜೀವನ ಪಾವನವಾಗುತ್ತದೆ ಸುಬ್ರಹ್ಮಣ್ಯ ಶ್ರೀಗಳು

    ಧರ್ಮಸ್ಥಳ: ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕನಿಷ್ಠ ಒಂದು ಗಂಟೆಯಾದರೂ ನಾವು ಮನೆಯಲ್ಲಿ ಪರಿಶುದ್ಧ ತನು, ಮನ ಮತ್ತು ನಾಲಗೆಯಿಂದ ಶ್ರದ್ಧಾ-ಭಕ್ತಿಯಿಂದ ದೇವರ ಭಜನೆ ಮಾಡಿದರೆ ಜೀವನ ಪಾವನವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಪೂಜ್ಯ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಅವರು ಸೋಮವಾರ…

    Spread the love

    ಬ್ಯಾಂಕ್ ಮುಷ್ಕರ ಮುಂದೂಡಿಕೆ, ಎಂದಿನಂತೆ ಬ್ಯಾಂಕ್ ಸೇವೆಗೆ ಲಭ್ಯ

    ಹೊಸದಿಲ್ಲಿ: ವಾರದಲ್ಲಿ ಐದು ದಿನಗಳ ಕೆಲಸ ಸಹಿತ ವಿವಿಧ ಬೇಡಿಕೆಗಳ ಬಗ್ಗೆ ಪರಿಶೀಲಿಸುವುದಾಗಿ ಭಾರತೀಯ ಬ್ಯಾಂಕ್‌ಗಳ ಒಕ್ಕೂಟವು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಯೂನಿಯನ್‌ಗಳು ಸೋಮವಾರದಿಂದ ನಡೆಸಲು ನಿರ್ಧರಿಸಿದ್ದ ಮೂರು ದಿನಗಳ ದೇಶವ್ಯಾಪಿ ಮುಷ್ಕರವನ್ನು ಮುಂದೂಡಿವೆ. ಸೋಮವಾರದಿಂದ ಮೂರು ದಿನ ಮುಷ್ಕರ…

    Spread the love

    You Missed

    “ಕಸ್ತೂರಿರಂಗನ್ ಆತಂಕ ನಿವಾರಣೆಗೆ ಅರಣ್ಯ–ಕಂದಾಯ ಗ್ರಾಮ ಪ್ರತ್ಯೇಕಿಸಿ: ತುಳುನಾಡ್ ಒಕ್ಕೂಟದ ಸಂಸ್ಥಾಪಕ ಶೈಲೇಶ್ ಆರ್.ಜೆ. ಮನವಿ”

    • By admin
    • September 30, 2026
    • 3 views
    “ಕಸ್ತೂರಿರಂಗನ್ ಆತಂಕ ನಿವಾರಣೆಗೆ ಅರಣ್ಯ–ಕಂದಾಯ ಗ್ರಾಮ ಪ್ರತ್ಯೇಕಿಸಿ: ತುಳುನಾಡ್ ಒಕ್ಕೂಟದ ಸಂಸ್ಥಾಪಕ ಶೈಲೇಶ್ ಆರ್.ಜೆ. ಮನವಿ”

    ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ ಉದ್ಘಾಟನೆ, ಪ್ರತಿದಿನ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡುವುದರಿಂದ ಜೀವನ ಪಾವನವಾಗುತ್ತದೆ ಸುಬ್ರಹ್ಮಣ್ಯ ಶ್ರೀಗಳು

    • By admin
    • September 28, 2026
    • 8 views
    ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ ಉದ್ಘಾಟನೆ, ಪ್ರತಿದಿನ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡುವುದರಿಂದ ಜೀವನ ಪಾವನವಾಗುತ್ತದೆ ಸುಬ್ರಹ್ಮಣ್ಯ ಶ್ರೀಗಳು

    ಬ್ಯಾಂಕ್ ಮುಷ್ಕರ ಮುಂದೂಡಿಕೆ, ಎಂದಿನಂತೆ ಬ್ಯಾಂಕ್ ಸೇವೆಗೆ ಲಭ್ಯ

    • By admin
    • September 28, 2026
    • 8 views
    ಬ್ಯಾಂಕ್ ಮುಷ್ಕರ ಮುಂದೂಡಿಕೆ, ಎಂದಿನಂತೆ ಬ್ಯಾಂಕ್ ಸೇವೆಗೆ ಲಭ್ಯ

    ನೋಟಿಸ್ ಕೊಡದೆ ಬಂಧನವೇ? ಪೊಲೀಸರಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ | BNSS 35 ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ

    • By admin
    • September 27, 2026
    • 15 views
    ನೋಟಿಸ್ ಕೊಡದೆ ಬಂಧನವೇ? ಪೊಲೀಸರಿಗೆ ಹೈಕೋರ್ಟ್ ಕಠಿಣ ಎಚ್ಚರಿಕೆ | BNSS 35 ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ

    ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ರ‍್ಯಾಗಿಂಗ್: ಜೂನಿಯರ್ಸ್ ಬಟ್ಟೆ ಬಿಚ್ಚಿಸಿ ಬೆಲ್ಟ್‌ನಿಂದ ಹಲ್ಲೆ, 9 ಮಂದಿ ಸೀನಿಯರ್ಸ್ ವಿರುದ್ಧ ಎಫ್‌ಐಆರ್ ದಾಖಲು

    • By admin
    • September 25, 2026
    • 15 views
    ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ  ರ‍್ಯಾಗಿಂಗ್: ಜೂನಿಯರ್ಸ್ ಬಟ್ಟೆ ಬಿಚ್ಚಿಸಿ ಬೆಲ್ಟ್‌ನಿಂದ ಹಲ್ಲೆ, 9 ಮಂದಿ ಸೀನಿಯರ್ಸ್ ವಿರುದ್ಧ ಎಫ್‌ಐಆರ್ ದಾಖಲು

    1,000 ಚದರ ಮೀಟರ್‌ವರೆಗಿನ ನಿವೇಶನಗಳಿಗೆ ‘ಸಿಂಗಲ್ ಪ್ಲಾನ್’ ಅನುಮೋದನೆ: ಅಧಿಕಾರ ವಿಕೇಂದ್ರೀಕರಣಕ್ಕೆ ಸರ್ಕಾರದ ಮಹತ್ವದ ಆದೇಶ

    • By admin
    • September 25, 2026
    • 11 views
    1,000 ಚದರ ಮೀಟರ್‌ವರೆಗಿನ ನಿವೇಶನಗಳಿಗೆ ‘ಸಿಂಗಲ್ ಪ್ಲಾನ್’ ಅನುಮೋದನೆ: ಅಧಿಕಾರ ವಿಕೇಂದ್ರೀಕರಣಕ್ಕೆ ಸರ್ಕಾರದ ಮಹತ್ವದ ಆದೇಶ