ಕಟ್ಟಿಗೆ ಹಾಡ್ತದೆ, ಕಬ್ಬಿಣ ಓಡ್ತದೆ, ಗಾಳಿ ಮಾತನಾಡ್ತದೆ ಕೋಡಿ ಶ್ರೀ ಅಚ್ಚರಿಯ ಭವಿಷ್ಯ ನುಡಿ

ಕಟ್ಟಿಗೆ ಹಾಡ್ತದೆ, ಕಬ್ಬಿಣ ಓಡ್ತದೆ, ಗಾಳಿ ಮಾತನಾಡ್ತದೆ’ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಮಾವಾಸ್ಯೆ ಬಳಿಕ ಮಳೆ ಬರಲಿದೆ, ಆತಂಕಪಡುವ ಅಗತ್ಯವಿಲ್ಲ.‌ ಆದರೆ, ಕಾರ್ತಿಕ, ಸಂಕ್ರಾಂತಿ ವೇಳೆಗೆ‌ ರಾಜ್ಯದಲ್ಲಿ ಕೆಲ ಅವಘಢಗಳು ನಡೆಯುವ ಸಾಧ್ಯತೆ ಇದೆ ಎಂಚು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಮನುಷ್ಯ ಗೊತ್ತಿಲ್ಲದೆ ಮಾಡಿದ ತಪ್ಪುಗಳನ್ನು ಭಗವಂತ ಕ್ಷಮಿಸುತ್ತಾನೆ. ಆದರೆ, ತಿಳಿದೂ ತಪ್ಪುಗಳನ್ನು ಮಾಡಿದಾಗ ಕ್ಷಮಿಸಲಾರ. ಇತ್ತೀಚಿನ ದಿನಗಳಲ್ಲಿ ಗೊತ್ತಿದ್ದರೂ ಮಾನವ ಪ್ರಕೃತಿ, ನೆಲ, ಜಲ ಇವುಗಳ ನಿರಂತರ ದುರುಪಯೋಗ ಮಾಡುತ್ತಿದ್ದಾನೆ. ಹೀಗಾಗಿ, ನಾವು ಅನೇಕ ರೀತಿಯ ಪ್ರಕೃತಿ ವಿಕೋಪ ಎದುರಿಸುತ್ತಿದ್ದೇವೆ ಎಂದು ಬೇಸರಿಸಿದರು.

100 ವರ್ಷಗಳ ಕಾಲಜ್ಞಾನ ರುಜು

ಯಾವುದು ಸಮಾಜಕ್ಕೆ ಶಾಂತಿ ನೆಮ್ಮದಿ ನೀಡುತ್ತದೆಯೋ ಅದೇ ಧರ್ಮ. ನೂರಾರು ವರ್ಷಗಳಲ್ಲಿ ಹೇಳಿದ್ದು ಸತ್ಯ ಕಾಲಜ್ಞಾನವೇ ಗುರುಗಳ ಸಂಪತ್ತಾಗಿದೆ. ಹಿಂದೆ ಕಾಲಜ್ಞಾನದಲ್ಲಿ ‘ಕಟ್ಟಿಗೆ ಹಾಡ್ತದೆ, ಕಬ್ಬಿಣ ಓಡ್ತದೆ, ಗಾಳಿ ಮಾತನಾಡ್ತದೆ’ ಅಂತ ಹೇಳಲಾಗಿದೆ. ಇದೀಗ ಅದು ಸತ್ಯವಾಗಿದೆ. ಕಟ್ಟಿಗೆ ಮತ್ತು ಕಬ್ಬಿಣ ಅಂದರೆ ಇಂದು ರೈಲುಗಳು ಬಂದಿರುವ ಬಗ್ಗೆ, ಗಾಳಿ ಮಾತನಾಡ್ತದೆ ಅಂದ್ರೆ ಮೊಬೈಲ್ ಬಂದಿರುವುದಕ್ಕೆ ಸಾಕ್ಷಿ ಎಂದು ವಿಶ್ಲೇಷಿಸಿದರು.

Spread the love
  • Related Posts

    ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ ಹಬ್ಬದ ವೈಶಿಷ್ಟ್ಯ ಆಚರಣೆಗಳ ಮಹತ್ವ

    ದೈನಂದಿನ ಸಮಾಜಿಕ ಧಾರ್ಮಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವಂತಹದ್ದೆ “ಹಬ್ಬಗಳು”. ಇಡೀ ಮನುಷ್ಯ ಸಮೂಹಕ್ಕೆ ಸಂತೋಷ, ಸಡಗರ ಸಹಜ ಪ್ರೀತಿಯ ವಿಷಯವಾಗಿರುವುದೇ ಹಬ್ಬಗಳು. ಇಂದಿನ ಆಧುನಿಕ ಒತ್ತಡಯುಕ್ತ ಜೀವನದಲ್ಲಿ ತೊಡಗಿದ್ದಾಗಲೂ, ಹಬ್ಬಹರಿದಿನಗಳ ಬಗೆಗಿನ ಆಸಕ್ತಿಯು ಕಳೆದುಕೊಂಡಿಲ್ಲದ್ದನ್ನು ಕಾಣಬಹುದು. ಹಬ್ಬವೆಂಬುದು ಕೆಲವೇ ಧರ್ಮ ಸಂಪ್ರದಾಯಕ್ಕೆ…

    Spread the love

    ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಚೈತ್ರೇಶ್ ಇಳಂತಿಲ ಆಯ್ಕೆ

    ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ಜ.5 ರಂದು ಸಂಘದ ಕಚೇರಿಯಲ್ಲಿ ನಡೆದು 2024 ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಉದಯವಾಣಿ ವರದಿಗಾರ ಚೈತ್ರೇಶ್ ಇಳಂತಿಲ, ಉಪಾಧ್ಯಕ್ಷರಾಗಿ ವಾರ್ತಾಭಾರತಿ ವರದಿಗಾರ ಶಿಬಿ ಧರ್ಮಸ್ಥಳ, ಕಾರ್ಯದರ್ಶಿಯಾಗಿ ಪ್ರಜಾವಾಣಿ ವರದಿಗಾರ…

    Spread the love

    You Missed

    ವಕೀಲರ ಸಂಘ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ಶ್ರೀ ಮಂಜು ಇಂಡೇನ್ ಗ್ಯಾಸ್ ವತಿಯಿಂದ ಸೇಫ್ಟಿ ಕ್ಲಿನಿಕ್ ಕಾರ್ಯಾಗಾರ

    • By admin
    • October 16, 2024
    • 27 views
    ವಕೀಲರ ಸಂಘ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ಶ್ರೀ ಮಂಜು ಇಂಡೇನ್ ಗ್ಯಾಸ್ ವತಿಯಿಂದ ಸೇಫ್ಟಿ ಕ್ಲಿನಿಕ್ ಕಾರ್ಯಾಗಾರ

    ರುಡ್ ಸೆಟ್ ಸಂಸ್ಥೆ, ಸಿದ್ಧವನ ಉಜಿರೆ ಇದರ ವತಿಯಿಂದ ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್‌ ತಯಾರಿಕೆ ತರಬೇತಿಯನ್ನು ಹಮ್ಮಿಕೊಂಡಿದೆ

    • By admin
    • October 11, 2024
    • 57 views
    ರುಡ್ ಸೆಟ್ ಸಂಸ್ಥೆ, ಸಿದ್ಧವನ ಉಜಿರೆ ಇದರ ವತಿಯಿಂದ ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್‌ ತಯಾರಿಕೆ ತರಬೇತಿಯನ್ನು ಹಮ್ಮಿಕೊಂಡಿದೆ

    ನವರಾತ್ರಿಯ 9ನೇ ದಿನ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸುವ ಪದ್ಧತಿ ಹಾಗೂ ಮಹತ್ವ

    • By admin
    • October 11, 2024
    • 23 views
    ನವರಾತ್ರಿಯ 9ನೇ ದಿನ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸುವ ಪದ್ಧತಿ ಹಾಗೂ ಮಹತ್ವ

    ಕುವೆಂಪು ವಿವಿಯಲ್ಲಿ ತಡವಾಗಿ ಪ್ರಕಟವಾಗುವ ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

    • By admin
    • October 7, 2024
    • 79 views
    ಕುವೆಂಪು ವಿವಿಯಲ್ಲಿ ತಡವಾಗಿ ಪ್ರಕಟವಾಗುವ ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

    ನಾಗರಿಕ ಅಭಿನಂದನಾ ಸಮಿತಿಯಿಂದ ಯೋಧ ಮಂಜುನಾಥ ಹಾಗೂ ಶಿಕ್ಷಕ ವಿ.ಕೆ ವಿಟ್ಲ ಅವರಿಗೆ ನಾಗರಿಕ ಸನ್ಮಾನ

    • By admin
    • October 2, 2024
    • 39 views
    ನಾಗರಿಕ ಅಭಿನಂದನಾ ಸಮಿತಿಯಿಂದ ಯೋಧ ಮಂಜುನಾಥ ಹಾಗೂ ಶಿಕ್ಷಕ ವಿ.ಕೆ ವಿಟ್ಲ ಅವರಿಗೆ ನಾಗರಿಕ ಸನ್ಮಾನ

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಸೇವಾ ಟ್ರಸ್ಟ್(ರಿ) ವತಿಯಿಂದ ನಿಡ್ಲೆ ಗ್ರಾಮದಲ್ಲಿ ಸಿಡಿಲು ಬಡಿದು ಮನೆ ಹಾನಿಯಾದ ಕುಟುಂಬಕ್ಕೆ ಆರ್ಥಿಕ ನೆರವು

    • By admin
    • October 1, 2024
    • 426 views
    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಸೇವಾ ಟ್ರಸ್ಟ್(ರಿ) ವತಿಯಿಂದ ನಿಡ್ಲೆ ಗ್ರಾಮದಲ್ಲಿ ಸಿಡಿಲು ಬಡಿದು ಮನೆ ಹಾನಿಯಾದ ಕುಟುಂಬಕ್ಕೆ ಆರ್ಥಿಕ ನೆರವು