ಅನುಮತಿ ಇಲ್ಲದೆ ಪ್ರತಿಭಟನೆ ನಡೆಸುತ್ತಿದ್ದ ಪಿಎಫ್ಐ ಕಾರ್ಯಕರ್ತರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು!

ಕೋಲಾರ: ಉತ್ತರ ಪ್ರದೇಶದ ಯುಪಿ ಸರ್ಕಾರವು ಪಿಎಫ್ಐ ಸಂಘಟನೆಯ ಕಾರ್ಯಕರ್ತರನ್ನು ವಿನಾಕಾರಣ ಅಪಹರಣ ನಡೆಸಲಾಗುತ್ತಿದೆಯೆಂದು ಸ್ಥಳೀಯ ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಉತ್ತರಪ್ರದೇಶ ಸರ್ಕಾರದ ಪೊಲೀಸರ ವರ್ತನೆಯನ್ನು ಖಂಡಿಸಿ ಕ್ಲಾಕ್ ಟವರ್ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಿದರು.

READ ALSO

ಯುಪಿ ಸರ್ಕಾರವು ಹಾಗೂ ಕೇಂದ್ರ ಸರ್ಕಾರವು ಉತ್ತರ,ಪ್ರದೇಶದಲ್ಲಿ ಪಿಎಫ್ಐ ಸಂಘಟನೆಯ ಕಾರ್ಯಕರ್ತರನ್ನು ಅಪಹರಿಸಿ ಬಂಧನ ಮಾಡುತ್ತಿದ್ದು ಈ ಕೂಡಲೇ ಬಂಧಿತರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.

ನಗರದಲ್ಲಿ ಇಂದು ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಯಾವುದೇ ಅನುಮತಿಯನ್ನು ಪಡೆಯದೆ ಪ್ರತಿಭಟನೆಯನ್ನು ನಡೆಸಲಾಗುತ್ತಿದ್ದುದ್ದನ್ನು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಣ್ಣಯ್ಯ ಮತ್ತವರ ಸಿಬ್ಬಂದಿ ಪ್ರಶ್ನಿಸಲು ಯತ್ನಿಸುತ್ತಿದ್ದು ಈ ಸಂದರ್ಭದಲ್ಲಿ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸುತ್ತಲೇ ಇದ್ದುದರಿಂದ ಪೊಲೀಸರು ಪಿಎಫ್ಐ ಕಾರ್ಯಕರ್ತರಿಗೆ ಲಾಠಿ ರುಚಿ ತೋರಿಸಿ ಚದುರಿಸಿದರು.