“ದೇಶದ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ, ಮನ್ ಕೀ ಬಾತ್ ಸರಣಿಯ 68ನೇ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಮತ

ನವದೆಹಲಿ: “ದೇಶದ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಕೇವಲ ತಮ್ಮ ಆರೋಗ್ಯ ಬಗ್ಗೆ ಮಾತ್ರವಲ್ಲ. ಇತರರ ಆರೋಗ್ಯದ ಬಗ್ಗೆಯೂ ಕಾಳಜಿ ಹೆಚ್ಚಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ‘ಮನ್ ಕೀ ಬಾತ್’ ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಮನ್ ಕೀ ಬಾತ್ ಸರಣಿಯ 68ನೇ ಕಾರ್ಯಕ್ರಮ ಇದಾಗಿತ್ತು.

READ ALSO

“ದೇಶದ ಜನರಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಕೋವಿಡ್ ಭೀತಿಯ ನಡುವೆಯೇ ನಾವು ಗಣೇಶೋತ್ಸವ ಆಚರಣೆ ಮಾಡಿದ್ದೇವೆ. ಹಬ್ಬವನ್ನು ಆಚರಣೆ ಮಾಡುವಾಗ ನಾವು ಕೋವಿಡ್ ನಿಯಮಗಳನ್ನು ಪಾಲನೆ ಮಾಡಿದ್ದೇವೆ” ಎಂದು ಮೋದಿ ಹೇಳಿದರು.

“ದೇಶದ ಜನರು ಕೊರೊನಾ ಜೊತೆಗೆ ಬದುಕುತ್ತಿದ್ದಾರೆ. ಕೋವಿಡ್ ಕಾರಣದಿಂದಾಗಿ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಹಬ್ಬವನ್ನು ಆಚರಣೆ ಮಾಡಿದರು” ಎಂದು ಹೇಳಿದ ಮೋದಿ ಶಿಸ್ತು ಪಾಲಿಸಿದ ಜನರಿಗೆ ಮೋದಿ ಧನ್ಯವಾದ ಅರ್ಪಿಸಿದರು.

“ದೇಶಾದ್ಯಂತ ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿದೆ. ಪ್ರಕೃತಿಯೊಂದಿಗೆ ಜನರ ಸಂಬಂಧ ಮತ್ತಷ್ಟು ಬಿಗಿಯಾಗಿದೆ. ಉತ್ತಮವಾದ ಮಳೆಯಾಗಿದೆ. ಮುಂದಿನ ಬಾರಿ ಉತ್ತಮ ಫಲಸು ದೊರೆಯುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ” ಎಂದರು.