ನವಜೀವನ ಸದಸ್ಯರ ಹೈನುಗಾರಿಕಾ ತರಬೇತಿ ಕಾರ್ಯಗಾರದಲ್ಲಿ skdrdp ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್ ಮಂಜುನಾಥ್ ರವರಿಂದ ಮಾಹಿತಿ ಮಾರ್ಗದರ್ಶನ

ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ರುಡ್ ಸೆಟ್ ಸಂಸ್ಥೆಯ ವತಿಯಿಂದ ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ನವಜೀವನ ಸಮಿತಿ ಸದಸ್ಯರಿಗೆ ರುಡ್ ಸೆಟ್ ಸಂಸ್ಥೆ ಅರಿಶಿನಕುಂಟೆ ನೆಲಮಂಗಲದಲ್ಲಿ ಹಮ್ಮಿಕೊಂಡ ಹೈನುಗಾರಿಕಾ ತರಬೇತಿ ಕಾರ್ಯಗಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯವರಾದ ಡಾ.ಎಲ್.ಎಚ್ ಮಂಜುನಾಥ್ ರವರು ಬೇಟಿನೀಡಿ ಅತ್ಯುತ್ತಮವಾದ ಹಾಗೂ ಪ್ರೇರಣಾತ್ಮಕ ವಾದ ಮಾಹಿತಿ ಮಾರ್ಗದರ್ಶನವನ್ನು ನೀಡಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ವಿ.ರಾಮ ಸ್ವಾಮಿ, ಜನಜಾಗೃತಿ ಪ್ರಾದೇಶಿಕ ಕಚೇರಿ ಬೆಳ್ತಂಗಡಿಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್, ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ M, ಹಿರಿಯ ಉಪನ್ಯಾಸಕರಾದ ಉದಯ್ ಕುಮಾರ್, ಹಾಗೂ ಡಾ. ಜಲೀಲ್ ಉಪಸ್ಥಿತರಿದ್ದರು.

READ ALSO

ಕಾರ್ಯಕ್ರಮದ ನಿರ್ವಹಣೆಯನ್ನು ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ರವರು ನೆರವೇರಿಸಿದರು.
ದಿನಾಂಕ 16.12.2020 ರಂದು ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಲಿದೆ.