ಕಡಿರುದ್ಯಾವರ ಗ್ರಾ.ಪಂ ಮಾಜಿ ಸದಸ್ಯ ನೇಮಿರಾಜ ಗೌಡ ಕೌಡಂಗೆ ನಿಧನ

READ ALSO

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮಪಂಚಾಯತ್ ಮಾಜಿ ಸದಸ್ಯರಾದ ನೇಮಿರಾಜ ಗೌಡ ಕೌಡಂಂಗೆ ಇಂದು ನಿಧನಹೊಂದಿದ್ದಾರೆ.ಕಳೆದ ಕೆಲವು ದಿನಗಳಿಂದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಇಂದು ಚಿಕಿತ್ಸೆ ಫಲಕಾರಿಯಾಗದೆ ದೈವಾಧೀನರಾಗಿದ್ದಾರೆ. ಕಳೆದ 25ವರ್ಷಗಳಿಂದ ಕಡಿರುದ್ಯಾವರ ಗ್ರಾಮಪಂಚಾಯತ್ ನಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಹತ್ತು ಹಲವಾರು ವರ್ಷಗಳಿಂದ ಗುರುತಿಸಿ ಕೊಂಡಿದ್ದು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು ಪ್ರತಿಯೊಬ್ಬರಿಗೂ ಚಿರಪರಿಚಿತರಾಗಿದ್ದರು.