ಬಹುದಿನಗಳ ಬೇಡಿಕೆ ಬ್ರಿಟಿಷ್ ಕಾಲದ ಸೇತುವೆಗೆ ಮುಕ್ತಿ! 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನಿಡಿಗಲ್ ಸೇತುವೆಯನ್ನು ಲೋಕಾರ್ಪಣೆ ಗೊಳಿಸಿದ ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು: ಬೆಳ್ತಂಗಡಿ- ಚಾರ್ಮಾಡಿ ರಸ್ತೆ ನಿಡಿಗಲ್ ಸೇತುವೆ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಇಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೋಕಾರ್ಪಣೆಗೊಳಿಸಿದರು.

ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾದ ನಿಡಿಗಲ್ ಸೇತುವೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ ತಾಲೂಕಿನ ಶಾಸಕರ ಮುತುವರ್ಜಿಯಲ್ಲಿ ಕಡಿಮೆ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಂಡಿದೆ. ಅತಿಶೀಘ್ರವಾಗಿ ಕಾಮಗಾರಿ ನಡೆದಿದ್ದು, ಶಾಸಕರಿಗೂ, ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಸಲ್ಲಿಸಿದರು.

READ ALSO

ಪ್ರಯಾಣಿಕರ ಬಹುದಿನದ ಬೇಡಿಕೆ ಇಂದು ಇಡೇರಿದಂತ್ತಾಗಿದೆ ಸುಮಾರು ಶತಮಾನಗಳ ಸನಿಹದಲ್ಲಿದ್ದ ಬ್ರಿಟಿಷರ ಕಾಲದ ಕಾಮಾನು ಬಾಗಿದ ಸೇತುವೆ 1938ರಲ್ಲಿ ಲೋಕಾರ್ಪಣೆಗೊಂಡಿತ್ತು. ಶಿಥಿಲಾವಸ್ಥೆಯಲ್ಲಿದ್ದ ಸೇತುವೆಯಲ್ಲಿ ಭಯಭೀತರಾಗಿ ಪ್ರಯಾಣಿಸುತ್ತಿದ್ದು ಕಿರಿದಾದ ಸೇತುವೆ ಯಾಗಿದ್ದರಿಂದ ಹಲವಾರು ಬಾರಿ ಸಂಚಾರಕ್ಕೂ ತೊಡಕಾಗುತಿತ್ತು 1990ರ ಆಸುಪಾಸಿನಲ್ಲಿ ಇದೇ ಸೇತುವೆ ಮೇಲೆ ಪ್ರಯಾಣಿಕರನ್ನು ತುಂಬಿಕೊಂಡು ಹೊಗುತ್ತಿದ್ದ ಬಸ್ಸೊಂದು ಕಮಾನು ಮೇಲೆ ಏರಿದ ಘಟನೆಯು ನಡೆದಿತ್ತು.

ಚಿತ್ರ: ಸುರೇಶ್ ಬಿ ಕೌಡಂಗೆ ನಿಸರ್ಗ ಸ್ಟುಡಿಯೋ ಕಕ್ಕಿಂಜೆ

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ್, ಪ.ಪಂ. ಉಪಾಧ್ಯಕ್ಷ ಜಯಾನಂದ ಗೌಡ , ಶಶಿಧರ ಕಲ್ಮಂಜ, ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು, ನಾಗರೀಕರು ಉಪಸ್ಥಿತರಿದ್ದರು.