“ಪಲ್ಲವಿ” ತಂಡದ “ದಿಬ್ಬಣ” ನಾಟಕದ ಶು‌ಭ ಮುಹೂರ್ತ

ಕಾರ್ಕಳ: 14 ನೇ ವರ್ಷದ ಸಂಭ್ರಮದಲ್ಲಿ ಶ್ರೀ ದಿನೇಶ್ ಪ್ರಭು ಕಲ್ಲೊಟ್ಟೆ ಇವರ ನೇತೃತ್ವದ ‘ಪಲ್ಲವಿ’ ಕಲಾವಿದೆರ್ ಕಾರ್ಕಳ ಇವರ ಈ ವರ್ಷದ ವಿಭಿನ್ನ ಶೈಲಿಯ ತುಳು ಹಾಸ್ಯಮಯ ನಾಟಕ ಶ್ರೀಯುತ ಪ್ರಶಾಂತ್ ಶೆಟ್ಟಿ ಪರಪ್ಪಾಡಿ ರಚಿಸಿರುವ, ಶ್ರೀ ಜಗನಾಥ್ ಶೆಟ್ಟಿ ಕುಡ್ಲ ನಿರ್ದೇಶನದಲ್ಲಿ “ದಿಬ್ಬಣ” ನಾಟಕದ ಮುಹೂರ್ತವು ಕಾಬೆಟ್ಟು ಶ್ರೀ ವೇಣು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಡಳಿತ ಮೋಕ್ತೇಸರರಾದ ಸಂತೋಷ್ ಉಪಾಧ್ಯಾಯ ಇವರ ನೇತೃತ್ವದಲ್ಲಿ ನೆರವೇರಿತು.


ಮುಖ್ಯ ಅಥಿತಿಗಳಾಗಿ ಉದ್ಯಮಿ ವಿಜಯ್ ಶೆಟ್ಟಿ, ರಾಮಚಂದ್ರ ನೆಲ್ಲಿಕಾರ್, ಸುನೀಲ್ ಸೋನ್ಸ್ ಕುಂಟಲ್ಪಾಡಿ, ಪುರಸಭಾ ಸದಸ್ಯೆ ಶಶಿಕಲಾ .ಪಿ ಶೆಟ್ಟಿ, ಪತ್ರಕರ್ತ ವಿಲಾಸ್ ಕುಮಾರ್ ನಿಟ್ಟೆ, ಗುರುಪ್ರಸಾದ್ ಶೆಟ್ಟಿ ನಾರಾವಿ, ಸುನೀಲ್ ನೆಲ್ಲಿಗುಡ್ಡೆ, ಲೀಲಾವತಿ ಪೊಸಲಾಯಿ, ರಮಾನಂದ ನಾಯಕ್ ಜೋಡುರಸ್ತೆ,ವಸಂತ್ ಮುನಿಯಾಲ್, ಸುಮ ಟೀಚರ್, ಕೇಸರಿ ಹೆಗ್ಡೆ, ಸಂತೋಷ್ ದುರ್ಗ, ಕೆ.ಎಸ್ ರಘನಾಥ್, ಆರ್.ಕೆ ಬೆಳುವಾಯಿ, ಮರ್ವಿನ್ ಶಿರ್ವ, ಇವರೊಂದಿಗೆ ಅನೇಕ ರಂಗ ಕಲಾವಿದರು ಉಪಸ್ಥಿತರಿದ್ದು ತಂಡಕ್ಕೆ ಶುಭ ಹಾರೈಸಿದರು.

READ ALSO

ಈ ಸುಸಂದರ್ಭದಲ್ಲಿ ಅನೇಕ ಹಿತೈಷಿಗಳು ಹಾಗು ತಂಡದ ಕಲಾವಿದರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗುನೀಡಿತು.