ಮೈಸೂರು : ಮೈಸೂರಿನಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ (GTTC MYSURU) ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಒಂದು ವರ್ಷದ ಅವಧಿಯ ಪೋಸ್ಟ್ ಡಿಪ್ಲೋಮಾ ಇನ್ ಟೂಲ್ ಡಿಸೈನ್ ಉಚಿತ ತರಬೇತಿ ನೀಡಲು ಅರ್ಜಿ ಅಹ್ವಾನಿಸಿದೆ.
ಪ್ರೆಸ್‍ಟೂಲ್ಸ್, ಪ್ಲಾಸ್ಟಿಕ್ ಮೌಲ್ಡ್ಸ್, ಪ್ರೇಷರ್ ಡೈ ಕ್ಯಾಸ್ಟಿಂಗ್ಸ್ ಡೈಸ್, ಜಿಗ್ಸ್ ಮತ್ತು ಫಿಕ್ಷರ್ ಮುಂತಾದ ವಿಷಯಗಳನ್ನೊಳಗೊಂಡ ಒಂದು ವರ್ಷದ ಅವಧಿಯ ಪೋಸ್ಟ್ ಡಿಪ್ಲೋಮಾ ಇನ್ ಟೂಲ್ ಡಿಸೈನ್ ಪ್ರವೇಶಕ್ಕೆ ಮೇಕ್ಯಾನಿಕಲ್, ಇಂಡಸ್ಟ್ರೀಯಲ್ ಪ್ರೋಡಕ್ಷನ್, ಆಟೋ ಮೊಬೈಲ್, ಪ್ಲಾಸ್ಟಿಕ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲಮೋ, ಬಿ.ಇ., ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್, ಪ್ರಿಸಿಷನ್ ಮ್ಯಾನುಪ್ಯಾಕ್ಚರಿಂಗ್, ಮೆಕೆಟ್ರಾನಿಕ್ಸ್ ವಿಷಯಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9141629599, 9141630303 ಅನ್ನು ಸಂಪರ್ಕಿಸುವಂತೆ ಜಿಟಿಟಿಸಿ ಉಪ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.