ಬೆಂಗಳೂರು : ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ನಿಗದಿತ ಬಿಲ್ ಗಿಂತ ಹೆಚ್ಚಿನ ಹಣ ವಸೂಲು ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಐಜಿಪಿ ಡಿ.ರೂಪ ಅವರು ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾಗಿ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ಮೂರು ಆಸ್ಪತ್ರೆಗಳಲ್ಲಿ ಲೋಪದೋಷ ಕಂಡುಬಂದಿದ್ದು ಅದನ್ನು ತಿದ್ದುಕೊಳ್ಳಲು ಸೂಚಿಸಿದ್ದನ್ನು ಆಸ್ಪತ್ರೆಯ ಆಡಳಿತ ಮಂಡಳಿ ಒಪ್ಪಿಕೊಂಡಿದೆ. ಬೆಡ್ ಎಷ್ಟಿದೆ ಎಂದು ನೀವು ಪಟ್ಟಿ ಮಾಡಿ ಹಾಕಬೇಕು.
ಆನ್ಲೈನ್ನಲ್ಲಿ ಪ್ರತಿ ಬೆಡ್ನ ಮಾಹಿತಿ ಇರಬೇಕು. ಈ ಮೊದಲು ನಾವು ಅವರಿಗೆ ಸರ್ಕಾರದ ಸೂಚನೆಗಳ ಪಾಲಿಸುವಂತೆ ಸೂಚಿಸಿದ್ದೇವೆ ಎಂದು ಹೇಳಿದರು.
ಸರ್ಕಾರ ನಿಗದಿ ಮಾಡಿದ ಹಣಕ್ಕಿಂತ ಮೂರು ಪಟ್ಟು ಬಿಲ್ ಮಾಡಿದ್ದಾರೆ.ಇದರ ಬಗ್ಗೆ ನಿಮಗೆ ಮಾಹಿತಿ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದೇವೆ. ಇದುವರೆಗೆ ಹೆಚ್ಚಿನ ಬಿಲ್ ಪಡೆದಿರುವವರಿಗೆ ಹಣ ವಾಪಸ್ ಮಾಡುತ್ತೇವೆ ಬಿಬಿಎಂಪಿ ಗಮನಕ್ಕೆ ತರದೆ ನೇರವಾಗಿ ಆಸ್ಪತ್ರೆಗೆ ಹೋದವರಿಗೆ ಹೆಚ್ಚಿನ ಬಿಲ್ ಮಾಡಿದ್ದಾರೆ ಎಂದು ರೂಪ ತಿಳಿಸಿದರು.
ಕೊರೊನಾ ತಪಾಸಣೆ ಮಾಡಿ ಪರೀಕ್ಷೆ ನಡೆಸಿ ವರದಿ ಬರಲು ಮೂರು ದಿನ ಅಗಲಿದೆ ಪಾಸಿಟಿವ್ ಬಂದವರು ಗಾಬರಿಯಾಗಿ ಖಾಸಗಿ ಆಸ್ಪತ್ರೆಗೆ ಹೋಗಿ ಸೇರಿಕೊಳ್ಳುತ್ತಿ ದ್ದಾರೆ. ಹಾಗೆ ಮಾಡದೆ ಸರ್ಕಾರದ ಪ್ರೊಸಿಜರ್ ಮೂಲಕ ಹೋದರೆ ಸಮಸ್ಯೆ ಅಗುವುದಿಲ್ಲ. ಕೆಲವರಿಗೆ ಮನೆಯಲ್ಲಿ ಕ್ವಾರಂಟೈನ್ ಮಾಡಿಕೊಳ್ಳಲು ಸೂಚಿಸಲಾಗುತ್ತದೆ.ಆದರೆ ಕೇಳದೆ ಕೆಲವರು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲೂ ಕೂಡ ಹಾಗೆ ಬರುವವರಿಗೆ ಸರ್ಕಾರದ ಮೂಲಕ ಬರುವಂತೆ ತಿಳಿಸಬೇಕು. ಸರ್ಕಾರ ನಿಗದಿ ಮಾಡಿರುವ ಚಿಕಿತ್ಸೆ ವೆಚ್ಚವನ್ನಷ್ಟೇ ಬಿಲ್ ಮಾಡುವಂತೆ ಸೂಚಿಸಿದ್ದೇವೆ. ಆಸ್ಪತ್ರೆಗಳಲ್ಲಿ, ರೋಗಿಗಳ ಬಳಿ ವಿಮೆ ಇದ್ದರೆ ಹೇಳಿ ಎಂದು ಹಣ ಮಾಡುವ ಆರೋಪ ಕೇಳಿಬಂದಿದೆ. ಅದರ ಬಗ್ಗೆ ಕೂಡ ನಾವು ಗಮನ ಹರಿಸಿದ್ದೇವೆ ಎಂದರು.