ಕಾಡಿನಿಂದ ನಾಡಿಗೆ ಬಂದ ಜಿಂಕೆ ಮರಿ ಮೇಯಲು ಬಿಟ್ಟ ಹಸುಗಳ ಜೊತೆಗೂಡಿ ರಾಜೇಗೌಡರ ಮನಗೆ ಬಂತು ಮುದ್ದು ಮುದ್ದಾದ ಅಥಿತಿ!

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಕಿರುಗುಂದ ಗ್ರಾಮದ ಉದುಸೆ ಗ್ರಾಮದ ರಾಜೇಗೌಡರ ಮನೆಗೆ ನಿನ್ನೆ ಸಂಜೆ ವಿಶೇಷವಾದ ಅತಿಥಿಯೊಬ್ಬರು ಬಂದಿರುವುದು ಮನೆಯವರಿಗೆ ಅಚ್ಚರಿಯೊಂದಿಗೆ ಖುಷಿಯನ್ನು ಹೆಚ್ಚಿಸಿದೆ.

ಹೌದು, ಎಂದಿನಂತೆ ಮನೆಯ ಸಮೀಪದ ಕಾಡಿಗೆ ಮೇಯಲು ಹೋಗಿದ್ದ ಹಸುಗಳ ಜೊತೆ ಮುದ್ದಾದ ಜಿಂಕೆಮರಿಯೊಂದು ಮನೆಗೆ ಬಂದುಬಿಟ್ಟಿದೆ. ಅಷ್ಟೇ ಅಲ್ಲದೆ ನೇರವಾಗಿ ಮನೆಯೊಳಗೆ ಬಂದು ಬಿಟ್ಟಿದೆ. ಎಂದಿನಂತೆ ಹಸುಗಳನ್ನು ಮೇಯಲು ಕಾಡಿಗೆ ಬಿಟ್ಟಿದ್ದಾರೆ. ಹಸುಗಳು ಸಂಜೆ ಮನೆಗೆ ಬರುವಾಗ ಹಸುಗಳ ಜೊತೆ ಪುಟ್ಟ ಜಿಂಕೆಮರಿಯೂ ಬಂದಿದೆ. ಯಾರ ಭಯವಿಲ್ಲದೆ ಮನೆಯೊಳಗೆ ಬಂದು ಅಚ್ಚರಿ ಮೂಡಿಸಿದೆ.

READ ALSO

ಜಿಂಕೆಮರಿಯನ್ನು ಕಂಡ ಮನೆಯವರು ಸಂತೋಷಗೊಂಡು ಮುದ್ದಾಡಿದ್ದಾರೆ. ಅದರೊಟ್ಟಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ರಾತ್ರಿ ಮನೆಯಲ್ಲೇ ಇರಿಸಿಕೊಂಡು ಜೋಪಾನ ಮಾಡಿದ್ದಾರೆ. ಬೆಳಗ್ಗೆ ಹಸುಗಳೊಟ್ಟಿಗೆ ಜಿಂಕೆಮರಿ ಮನೆಗೆ ಬಂದಿದ್ದನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದಾರೆ. ರಾಜೇಗೌಡರ ಮನೆಗೆ ಬಂದ ಅರಣ್ಯ ಸಿಬ್ಬಂದಿ ಬಂದು ಸುರಕ್ಷಿತವಾಗಿ ಜಿಂಕೆಮರಿಯನ್ನು ಕರೆದೊಯ್ದಿದ್ದಾರೆ