ವಿಶೇಷ ವರದಿ: 🖊️ರಾಜೇಶ್.ಎಂ ಕಾನರ್ಪ
ಮಂಗಳೂರು: ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮಳೆಗಾಲದ ಸಮಯದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅನಾಹುತಗಳು ಸಂಭವಿಸುತ್ತಿವೆ. ಅಲ್ಲಲ್ಲಿ ಜವರಾಯ ಕಾದು ಕುಳಿತು ಹೊಂಚು ಹಾಕುತ್ತಿರುವಂತೆ ಕಾಣುತ್ತಿದೆ. ಕೆಲವೊಮ್ಮೆ ಇಂತಹ ಪ್ರಾಕೃತಿಕ ದುರಂತಗಳು ನಡೆಯುತ್ತಿರುತ್ತವೆ ಇದನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ ಇವೆಲ್ಲ ಭಗವಂತನ ಆಟದಂತೆ ನಡೆಯುತ್ತಿರುತ್ತವೆ. ಆದರೆ ಇನ್ನೂ ಕೆಲವು ನಮ್ಮ ಅಧಿಕಾರಿಗಳಿಂದ ಹಾಗೂ ಸಾರ್ವಜನಿಕರ ನಿರ್ಲಕ್ಷ್ಯದಿಂದಲೂ ಅನಾಹುತ ಸಂಭವಿಸುತ್ತಿದೆ.
ಅಪಘಾತ ಎಂದೊಡನೆ ನಮಗೆ ತಟ್ಟನೆ ನೆನಪಿಗೆ ಬರುವುದು ಯಾವುದೋ ಎರಡು ವಾಹನಗಳ ನಡುವೆ ನಡೆಯುವ ಅಪಘಾತ ಎಂದು ನಾವು ಸ್ವಾಭಾವಿಕವಾಗಿ ಚಿಂತನೆ ಮಾಡುತ್ತೇವೆ ಆದರೆ ನಾವು ಯೋಚಿಸಬೇಕಾಗಿರುವುದು ಇದನ್ನೆಲ್ಲ ಕೆಲವು ಇಲಾಖಾ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಿರ್ಲಕ್ಷ್ಯದಿಂದ ಆಗುವ ಅನಾಹುತಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ.
ದಿನಾಂಕ 12/06/2022ರ ಸಂಜೆಯ ವೇಳೆಗೆ ಎರಡು ಪ್ರತ್ಯೇಕ ದುರ್ಘಟನೆಗಳು ಸುಬ್ರಹ್ಮಣ್ಯ-ಗುಂಡ್ಯ ರಸ್ತೆಯಲ್ಲಿ ನಡೆದುದನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಇದರಲ್ಲೂ ಎರಡು ಇಲಾಖೆಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಈ ಅನಾಹುತಗಳು ಸಂಭವಿಸುತ್ತಿವೆ ಎಂದರೂ ತಪ್ಪಾಗಲಾರದು.
ಪ್ರಾಣಹಾನಿಯಾದರೆ ಯಾರನ್ನು ತಪ್ಪಿತಸ್ಥರೆಂದು ಪರಿಗಣಿಸಬೇಕು???
ಮಳೆನಾಡು, ಕರಾವಳಿ ಭಾಗದಲ್ಲಿ ಜೂನ್ ತಿಂಗಳ ಪ್ರಾರಂಭದಿಂದ ಮಳೆ ಪ್ರಾರಂಭಗೊಂಡು ಕನಿಷ್ಠ, ನಾಲ್ಕು ತಿಂಗಳ ಕಾಲ ವರ್ಷಧಾರೆ ಇದ್ದೆ ಇರುತ್ತದೆ ಇದಕ್ಕೆ ಮುಂಚಿತವಾಗಿ ಅರಣ್ಯ ಇಲಾಖೆ ಮತ್ತು ರಸ್ತೆ ಪ್ರಾಧಿಕಾರ ಇಲಾಖೆಗಳು ಒಟ್ಟಾಗಿ ರಸ್ತೆ ಬದಿಗಳಲ್ಲಿ ಅನಾಹುತ ಎದುರಿಸಬಹುದಾದ ಮರಗಳನ್ನು ತೆರವುಗೊಳಿಸಲು ಮುನ್ನುಡಿಯನ್ನು ಇಡಬಹುದು ಇದರಂತೆ ಬಿದಿರಿನ ಗಿಡಗಳು ಹಾಗೂ ಒಣಗಿದ ಮರಗಿಡಗಳು ಮತ್ತು ಇತರೇ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಅನಿವಾರ್ಯತೆ ಇದೆ ಇಲ್ಲವಾದಲ್ಲಿ ಇಂತಹ ಸಂದರ್ಭದಲ್ಲಿ ಮರಗಿಡಗಳು ಬಿದ್ದು ರಸ್ತೆ ಸಂಚಾರಕ್ಕೆ ವ್ಯತ್ಯವಾಗುವ ಜೊತೆಗೆ ಪ್ರಯಾಣಿಕರ ಪ್ರಾಣಕ್ಕೂ ಕುತ್ತು ತರುವ ಸಾಧ್ಯತೆಗಳಿವೆ. ಹಾಗಾಗಿ ಕಣ್ಮುಚ್ಚಿ ಕುಳಿತ ಇಲಾಖೆಯ ಸಿಬ್ಬಂದಿಗಳು ಕೂಡಲೇ ಕಣ್ತೇರೆದು ಮುಂದಿನ ದಿನಗಳಲ್ಲಿ ನಡೆಯಬಹುದಾದ ಸಂಭಾವ್ಯ ಅಪಾಯಗಳನ್ನು ತಕ್ಕಮಟ್ಟಿಗೆ ಕಡಿಮೆ ಮಾಡಲು ಅವಕಾಶ ಬಹಳಷ್ಟು ಇದೆ ಯಾವುದೋ ಜೀವಕ್ಕೆ ಹಾನಿಯಾದ ಮೇಲೆ ಚಿಂತನೆ ಮಾಡುವ ಬದಲು ಮುಂದಾಲೋಚನೆಯೊಂದಿಗೆ ತಮ್ಮ ತಮ್ಮ ಕಾರ್ಯ ತಾವೂ ಮಾಡಿದಲ್ಲಿ ಇಂತಹ ಅಪಘಾತ ಪ್ರಕರಣಗಳು ಕಡಿಮೆಯಾಗಬಹುದು.
ಪ್ರಾಣಪಕ್ಷಿ ಹಾರಿ ಹೋದ ಮೇಲೆ ಚಿಂತಿಸುವ ಬದಲು ಪೂರ್ವಯೋಜಿತ ಚಿಂತನೆಗಳು ಯಾಕೆ ಮೂಡಬಾರದು!!!! ಕೆಲವೊಂದು ಕಹಿ ಘಟನೆಗಳು ಮುಂದಾದಾಗ ನಾವೆಲ್ಲರೂ ಜಾಗೃತ ಎಂದು ಎರಡೇ ದಿನಗಳಲ್ಲಿ ಎಲ್ಲವನ್ನೂ ಮರೆತು ಬಿಡುತ್ತೇವೆ ನಮ್ಮ ಕಣ್ಣೆದುರಿಗೆ ಪ್ರತಿನಿತ್ಯ ಕಾಣುತ್ತಿರುವ ಹಾಗೂ ಮುಂದಿನ ದಿನಗಳಲ್ಲಿ ಇದು ಅಪಾಯಕಾರಿ ಎಂಬ ಅರಿವಿದ್ದರೂ ಈ ಬಗ್ಗೆ ಚಿಂತನೆ ಮಾಡದೇ ಕೆಲವೊಂದು ದುರ್ಘಟನೆಗಳು ಸಂಭವಿಸಿದಾಗ ಮುಂದೇನು ಎಂಬ ಚಿಂತನೆ ಮಾಡುತ್ತೇವೆ ಅಷ್ಟರಲ್ಲಿ ಎಲ್ಲವೂ ಮುಗಿದು ಹೊಂದಿ ಕಥೆಯಾಗಿರುತ್ತದೆ. ಇಂತಹ ಕೆಲವು ಕಹಿ ಘಟನೆಗಳನ್ನು ನೆನಪಿಸಿಕೊಂಡರೆ ಅದೆಷ್ಟೋ ಮುಗ್ಧ ಜೀವಗಳು ತಮ್ಮ ಪ್ರಾಣಪಕ್ಷಿ ಕಳೆದುಕೊಂಡಿರುವ ಘಟನೆ ನಮ್ಮಲ್ಲೇ ನೆನಪಿಗೆ ಬರುತ್ತದೆ. ಬಾಳಿ ಬದುಕಬೇಕಾದ ಕುಟುಂಬಕ್ಕೆ ಬೆಳಕು ನೀಡಬೇಕಾದ ಅದೃಷ್ಟದ ಕಣ್ಣುಗಳೇ ಮಾಯಾವಾದಗ ಕುಟುಂಬದ ರೋದನೆ ವೇದನೆ ಹೇಳತೀರದು ಮಗುವಿಗೆ ತಂದೆಯನ್ನು ಕಳೆದುಕೊಂಡ ದುಃಖ, ತಾಯಿಗೆ ಮಗನನ್ನು ಕಳೆದುಕೊಂಡ ದುಃಖ ಹೆಂಡತಿಗೆ ತನ್ನ ಸಂಗಾತಿಯನ್ನು ಕಳೆದುಕೊಂಡು ದುಃಖ ಒಟ್ಟಾರೆಯಾಗಿ ಕಳೆದು ಹೋದ ಜೀವಕ್ಕೆ ಹೊಣೆಯಾರು ಎಂಬ ಪ್ರಶ್ನೆಯೇ ಎಲ್ಲರಲ್ಲೂ ಮೂಡುವಂತದ್ದು ಹಾಗಾಗಿ ಪ್ರಾಣಪಕ್ಷಿ ಹಾರಿ ಹೋದ ಮೇಲೆ ಚಿಂತಿಸುವ ಬದಲು ಪೂರ್ವಯೋಜಿತ ಚಿಂತನೆಗಳು ಯಾಕೆ ಮೂಡಬಾರದು ಎಂಬುದನ್ನು ನಾವೆಲ್ಲರೂ ಅರ್ಥೈಸಿಕೊಳ್ಳುವ ಅನಿವಾರ್ಯತೆ ಇದೆ.
ಹಾಗಾದರೆ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಜವಾಬ್ದಾರಿ ಇಲ್ಲವೇ????
ಇಂತಹ ಅಪಘಾತ ಪ್ರಕರಣಗಳು ಸಂಭವಿಸುವುದನ್ನು ತಡೆಯಲು ಮತ್ತು ಪ್ರಕೃತಿಯ ಸೊಬಗನ್ನು ಉಳಿಸಿಕೊಳ್ಳಲು ಸಾರ್ವಜನಿಕರಿಗೂ ಮತ್ತು ಪ್ರಯಾಣಿಕರಿಗೂ ಬಹಳ ದೊಡ್ಡ ಜವಾಬ್ದಾರಿ ಇದೆ ಇಂತಹ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅಧಿಕಾರಿಗಳ ಗಮನಕ್ಕೆ ತರುವುದು ಮತ್ತು ಇಂತಹ ಅಪಾಯಕಾರಿ ಗಿಡಗಳನ್ನು ತೆರವುಗೊಳಿಸುವಾಗ ತೆರವುಗೊಳಿಸಿಬೇಕಾದ ಗಿಡಗಳ ಸಂಖ್ಯೆಗೆ ನಾಲ್ಕು ಪಟ್ಟು ಹೊಸ ಗಿಡಗಳನ್ನು ಸರಿಯಾದ ಸ್ಥಳದಲ್ಲಿ ನಾಟಿ ಮಾಡುವ ಪ್ರಯತ್ನದಲ್ಲಿ ತಾವು ಕೈ ಜೋಡಿಸುವ ಕೆಲಸವನ್ನು ಮಾಡಬೇಕು ಚೆನ್ನಾಗಿರುವ ರಸ್ತೆ ಬೇಕು ಆದರೆ ಪರಿಸರದ ಬಗ್ಗೆಯೂ ನಮ್ಮಲ್ಲಿ ಕಾಳಜಿ ಬೇಕಲ್ಲವೇ ಈ ನಿಟ್ಟಿನಲ್ಲಿ ನಾವೆಲ್ಲರೂ ಪಣತೊಟ್ಟು ಇಂತಹ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಹಾಗೂ ಅವಕಾಶಗಳು ಇದ್ದಲ್ಲಿ ಹೊಸ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಮುಂದಕ್ಕೆ ಆಗುವ ಅನಾಹುತಗಳನ್ನು ತಪ್ಪಿಸುವಂತಾಗಬೇಕೆಂಬುದೇ ನಮ್ಮ ಆಶಯ.