ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ ಧರ್ಮಸ್ಥಳದ ನೀರಚಿಲುಮೆಯಲ್ಲಿ ನಡೆದ ಘಟನೆ!

ಧರ್ಮಸ್ಥಳ : ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನಿರಚಿಲುಮೆ ಎಂಬಲ್ಲಿ ದುಷ್ಕರ್ಮಿಗಳು ಮನೆಮಂದಿಯನ್ನು ಕಟ್ಟಿ ಹಾಕಿ ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ನಗದು ದರೋಡೆ ಮಡಿದ ಘಚಟನೆ ಗುರುವಾರ ರಾತ್ರಿ ನಡೆದಿದೆ .

ನಿರಚಿಲುಮೆಯ ಅಚ್ಚುತ ಭಟ್ ಎಂಬವರ ಮನೆಯ ಎಲ್ಲಾ ಸಧಸ್ಯರನ್ನು ಕಟ್ಟಿ ಹಾಕಿ, 40 ಪವನ್ ಚಿನ್ನ,1 ಕೆಜಿ ಬೆಳ್ಳಿ ಮತ್ತು 25 ಸಾವಿರ ನಗದು ದರೋಡೆ ಮಾಡಿದ್ದಾರೆ ಎಂದು ವರದಿಯಾಗಿದೆ . ಈ ಪೈಕಿ ಅಚ್ಚುತ್ ಭಟ್ ಅವರಿಗೆ ಗಾಯವಾಗಿದೆ.

READ ALSO

ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ,ಧರ್ಮಸ್ಥಳ ಉಪ ನಿರೀಕ್ಷಕ ಪವನ್ ನಾಯ್ಕ್, ಉಪ ನಿರೀಕ್ಷಕ ಚಂದ್ರ ಶೇಖರ್ ಮತ್ತು ಪೊಲೀಸರ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.