ರಾಜ್ಯದಲ್ಲಿ ನಿಲ್ಲುತ್ತಿಲ್ಲ ಕೊರೋನಾ ಓಟ! ಸಾವಿನ ಕೂಪವಾಗುತ್ತಿದೆಯೋ ರಾಜ್ಯರಾಜಧಾನಿ! ಕಡಲತಡಿಯಲ್ಲೂ ಕೊರೋನಾ ಮಿಂಚಿನ ಓಟ ಕರಾವಳಿಗರೇ ಎಚ್ಚರ ಎಚ್ಚರ ಎಚ್ಚರ!

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಮಹಾಮಾರಿ ಅಟ್ಟಹಾಸಮಿತಿಮೀರುತ್ತಿದ್ದು ರಾಜ್ಯ ರಾಜಧಾನಿಯಲ್ಲಿ ತಲ್ಲಣ ಮೂಡಿಸಿದೆ. ಇಂದು ಬರೋಬ್ಬರಿ 2313 ಸೋಂಕಿತರು ಪತ್ತೆಯಾಗಿದ್ದು ರಾಜ್ಯಕ್ಕೆ ಮತ್ತೆ ಮೂಡಿಸಿದೆ.

ರಾಜ್ಯರಾಜಧಾನಿಯಲ್ಲಿಂದು 1447 ಸೋಂಕಿತರು ಪತ್ತೆಯಾಗಿದ್ದು29 ಮಂದಿ ಹೆಮ್ಮಾರಿ ಕೊರೋನಾಗೆ ಬಲಿಯಾಗಿದ್ದಾರೆ.

READ ALSO

ರಾಜ್ಯರಾಜಧಾನಿ, ಕಡಲತಡಿ ಮಂಗಳೂರನ್ನು ಪ್ರತಿನಿತ್ಯ ಕಾಡುತ್ತಿರುವ ಮಹಾಮಾರಿ ಇಂದು ಮತ್ತೊಮ್ಮೆ 29 ಜಿಲ್ಲೆಗಳ ಜನರಿಗೆ ಶಾಕ್ ನೀಡಿದೆ.

ರಾಜ್ಯದಾದ್ಯಂತ 2313 ಸೋಕಿತರು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 33418ಕ್ಕೆ ಏರಿಕೆಯಾಗಿದೆ.

ಕೊರೋನಾ ಮರಣ ಮೃದಂಗಕ್ಕೆ ಇಂದು 57 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ543ಕ್ಕೆ ಏರಿಕೆಯಾಗಿದೆ