ಹುಬ್ಬಳ್ಳಿ: ಸರಳ ವಾಸ್ತು ಮೂಲಕ ಖ್ಯಾತರಾಗಿದ್ದ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರನ್ನು ಮಾರಾಕಾಸ್ತ್ರಗಳಿಂದ ಇರಿದು ಕೊಲೆಗೈಯ್ಯಲಾಗಿದೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್ ಒಂದರ ರಿಸೆಪ್ಷನ್ ನಲ್ಲಿ ಕೊಲೆ ನಡೆದಿದ್ದು, ಹಂತಕರು ಪರಾರಿಯಾಗಿದ್ದಾರೆ.
ಭಕ್ತರ ಸೋಗಿನಲ್ಲಿ ಬಂದಿದ್ದ ಹಂತಕರು ಗುರೂಜಿ ಜೊತೆ ಮಾತನಾಡುತ್ತಲೇ ಮಾರಾಕಾಸ್ತ್ರಗಳಿಂದ ಮಾರಾಣಾಂತಿಕ ಹಲ್ಲೆ ನಡೆಸಿದ್ದು, ಗುರೂಜಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.