ಸವಣಾಲು ಶ್ರೀ ಕೊಡಮಣಿತ್ತಾಯ ನೇಮೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಸವಣಾಲು ಗ್ರಾಮದ ಗಡು ಹಾಕಿದ ಸ್ಥಳ ಮಂಜದಬೆಟ್ಟುವಿನಲ್ಲಿ ಪ್ರತೀ ವರ್ಷದಂತೆ ಮಾರ್ಚ್ 23 ಮತ್ತು 24 ರಂದು ನಡೆಯುವ ಇತಿಹಾಸ ಪ್ರಸಿದ್ಧ ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ನೇಮೋತ್ಸವ ಹಾಗು ಅಮ್ಮನವರ ಜಾತ್ರಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಫೆಬ್ರವರಿ ತಿಂಗಳ ಸಂಕ್ರಾಂತಿ ದಿನಾಂಕ 12 ರಂದು ಊರವರ ಉಪಸ್ಥಿತಿಯಲ್ಲಿ ನಡೆಸಲಾಯಿತು.

READ ALSO

ಅಧ್ಯಕ್ಷರಾಗಿ ಚಿದಾನಂದ ಶೆಟ್ಟಿ ಹೇರಾಜೆ , ಕಾರ್ಯದರ್ಶಿಯಾಗಿ ಪುರಂದರ ಪೂಜಾರಿ ಕಟ್ಟದ ಬೈಲು , ಗೌರವಾಧ್ಯಕ್ಷರಾಗಿ ರಘುರಾಮ್ ಗಾಂಭೀರ ಬೊಲ್ಲೊಟ್ಟು ಗುತ್ತು ,ಕೋಶಾಧಿಕಾರಿಯಾಗಿ ಲೋಕನಾಥ್ ಶೆಟ್ಟಿ ಅಂಗರ್ದೋಟ್ಟು,ಲೆಕ್ಕ ಪರಿಶೋಧಕರಾಗಿ ಮೋಹನ್ ರೈ ದೋಲ್ದೊಟ್ಟು, ಉಪಾಧ್ಯಕ್ಷರಾಗಿ ಕೃಷ್ಣಪ್ಪ ಪೂಜಾರಿ ಸುಲ್ಯೊಡಿ ಮತ್ತು ರವಿ ಪೂಜಾರಿ ಮಂಜದಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ರಾಜು ಬಿ ಶೆಟ್ಟಿ ಮಂಜದಬೆಟ್ಟು ಅವರುಗಳು ಅವಿರೋಧವಾಗಿ ಆಯ್ಕೆಯಾದರು.