ಬೆಂಗಳೂರಿನ ಯಲಹಂಕ ಉಪನಗರದ ಪ್ಲೈಓವರ್ ಗೆ ಸಾವರ್ಕರ್ ಹೆಸರು ಅಂತಿಮ

ಬೆಂಗಳೂರು: ಬೆಂಗಳೂರಿನ ಯಲಹಂಕ ಉಪನಗರದ ಪ್ಲೈಓವರ್ ಗೆ ಸಾವರ್ಕರ್ ಹೆಸರು ಅಂತಿಮವಾಗಿದೆ.

ಪ್ಲೈ ಓವರ್ ಗೆ ವಿ.ಡಿ ಸಾವರ್ಕರ್ ಹೆಸರನ್ನು ಅಂತಿಮಗೊಳಿಸಲು ಇಂದು ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಅಂಗೀಕಾರವಾಗಿದೆ.

READ ALSO

ಈ ಹಿಂದೆ ಭಾರಿ ವಿವಾದದ ನಡುವೆ ಪ್ಲೇಓವರ್ ಉದ್ಘಾಟನೆಯನ್ನು ಮಾತ್ರ ನಡೆಸಲಾಗಿತ್ತು ಇದೀಗ ಸಾವರ್ಕರ್ ಹೆಸರಿಡುವ ಮೂಲಕ ಸಭೆಯಲ್ಲಿ ನಿರ್ಣಯ ಅಂಗೀಕಾರವಾಗಿದೆ.

ಬೆಂಗಳೂರು-ಭಾರೀ ವಿವಾದಕ್ಕೆಡೆ ಮಾಡಿಕೊಟ್ಟಿದ್ದ ಯಲಹಂಕ ಫ್ಲೈ ಓವರ್ ಗೆ ವೀರ ಸಾವರ್ಕರ್ ಹೆಸರನ್ನೇ ನಾಮಕರಣ ಮಾಡಲು ಬಿಬಿಎಂಪಿ ಮುಂದಾಗಿದೆ. ಸಾವರ್ಕರ್ ಜನುಮದಿನಾಚರಣೆಯ ಸಂದರ್ಭದಲ್ಲಿ ಯಲಹಂಕ ಫ್ಲೈ ಓವರ್ ಗೆ ಸಾವರ್ಕರ್ ಹೆಸರಿಡಬಾರದು, ಹೆಸರಿಡಬೇಕೆಂಬ ಕೂಗು ಜೋರಾಗಿತ್ತು.
ಹಿಂದೂ ಸಂಘಟನೆಗಳು ಫ್ಲೈ ಓವರ್ ಮೇಲೆ ಹೋಗಿ ಸಾವರ್ಕರ್ ಬೋರ್ಡ್ ನೆಟ್ಟು ಬಂದಿದ್ರು. ಆದರೆ ಈಗ ಯಲಹಂಕ ಫ್ಲೈ ಓವರ್ ಗೆ ಸಾವರ್ಕರ್ ಹೆಸರಿಡಲು ಬಿಬಿಎಂಪಿ ಅನುಮೋದನೆ ಸಿಕ್ಕಿದೆ.